Viral Video: ಪಾಸ್‌ಪೋರ್ಟ್ ಕಚೇರಿಗೆ ಶಾರ್ಟ್ಸ್ ಧರಿಸಿದ ಬಂದ ಭೂಪ! ಆಮೇಲೇನಾಯ್ತು ಗೊತ್ತಾ? ವಿಡಿಯೊ ಇದೆ
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಶಾರ್ಟ್ಸ್ ಹಾಕಿಕೊಂಡು ಬಂದ ಯುವಕನಿಗೆ ಒಳಗೆ ಹೋಗಲು ಅನುಮತಿ ನೀಡಲಿಲ್ಲವಂತೆ. ಇದರಿಂದ ವಾಗ್ವಾದ ಕೂಡ ನಡೆಯಿತಂತೆ. ಇದನ್ನು ನೋಡುಗರೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳಿಗೆ ಡ್ರೆಸ್‌ಕೋಡ್ ಅನ್ನು ನಿಗದಿಪಡಿಸಲಾಗುತ್ತದೆ. ಹಾಗೇ ಕೆಲವೊಂದು ದೇವಸ್ಥಾನಗಳಿಗೆ ಹೋದಾಗ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿರುವವರಿಗೆ ಮಾತ್ರ ಪ್ರವೇಶ ಎಂದು ಬೋರ್ಡ್ ಹಾಕಿರುವುದನ್ನು ನಾವು ನೋಡಿರುತ್ತೇವೆ. ಆದರೆ ಭಾರತದ ಪಾರ್ಸ್‌ಪೋರ್ಟ್ ಕಚೇರಿಯೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಶಾರ್ಟ್ಸ್ ಧರಿಸಿದ್ದಕ್ಕಾಗಿ ಯುವಕನಿಗೆ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದನ್ನು ನೋಡುಗರೊಬ್ಬರು ಪೋಟೊ ತೆಗೆದು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.
ವಿನೀತ್ ಎಂಬ ನೆಟ್ಟಿಗ ಈ ಘಟನೆಯನ್ನು ಪೋಸ್ಟ್ ಮಾಡಿದ್ದು, ಭಾರತದ 2 ನೇ ಶ್ರೇಣಿಯ ನಗರದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾನೆ. ಪಾಸ್‌ಪೋರ್ಟ್ ಕಚೇರಿಯ ಹೊರಗೆ ಆತ ಸರದಿಗಾಗಿ ಕಾಯುತ್ತಿದ್ದಾಗ ಶಾರ್ಟ್ಸ್ ಹಾಕಿಕೊಂಡ ಕಾರಣದಿಂದ ಯುವಕನಿಗೆ ಕಚೇರಿಗೆ ಪ್ರವೇಶವನ್ನು ನಿರಾಕರಿಸುವುದನ್ನು ನೋಡಿದ್ದಾನಂತೆ.ಪಾಸ್‌ಪೋರ್ಟ್ ಕಚೇರಿಯ ಹೊರಗೆ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ಯುವಕನಿಗೆ ಶಾರ್ಟ್ಸ್ ಹಾಕಿ ಒಳಗೆ ಹೋಗಲು ಅನುಮತಿ ನೀಡಲಿಲ್ಲವಂತೆ. ಇದರಿಂದ ವಾಗ್ವಾದ ಕೂಡ ನಡೆಯಿತಂತೆ.
ವಿಡಿಯೊ ನೋಡಿ...
Today’s incident - A perspective
— Vineeth K (@DealsDhamaka) April 29, 2025
A young adult came to passport office in his shorts today (I was waiting outside for my turn)
Security told, shorts are not allowed - this is passport office
He said, we go to out corporate offices this way. Why don’t you allow to a govt… pic.twitter.com/hpAMxC4B4i
ಕೊನೆಗೆ ಯುವಕನ ತಂದೆ ಪಾಸ್‌ಪೋರ್ಟ್ ಅಧಿಕಾರಿಯ ಬಳಿ ವಿನಂತಿಸಿದ ನಂತರ ಯುವಕನಿಗೆ ಒಳಗೆ ಹೋಗಲು ಅವಕಾಶ ನೀಡಲಾಯಿತಂತೆ. ಈ ನಡುವೆ ಗಾರ್ಡ್ ವಿನೀತ್ ಬಳಿ ಮಹಿಳೆಯರು ಮತ್ತು ವೃದ್ಧರು ಕಚೇರಿಯಲ್ಲಿ ಶಾರ್ಟ್ಸ್ ಧರಿಸಿದ ವ್ಯಕ್ತಿಯನ್ನು ನೋಡಿದರೆ ಮುಜುಗರಪಟ್ಟುಕೊಳ್ಳುತ್ತಾರೆ ಎಂದು ಹೇಳಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ಅಗ್ನಿ ಅವಘಡ; ಜೀವ ಉಳಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದ ಯುವತಿ; ವಿಡಿಯೊ ವೈರಲ್!
ವಿನೀತ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ಜನರು ಸೆಕ್ಯುರಿಟಿ ಗಾರ್ಡ್ ಮಾತನ್ನು ಒಪ್ಪಲಿಲ್ಲವಂತೆ. "ಇದು ಅವರ ಕಚೇರಿ, ನಮ್ಮದಲ್ಲ ನಿಜ. ಆದರೆ ನಾವು ಶುಲ್ಕವನ್ನು ಪಾವತಿಸುವ ಮತ್ತು ಅವರ ಸೇವೆಗಳನ್ನು ಪಡೆಯುವ ಗ್ರಾಹಕರಾಗಿದ್ದೇವೆ! ಸಂದರ್ಶಕರಿಗೆ ನಿರ್ದಿಷ್ಟ ಡ್ರೆಸ್ ಕೋಡ್ ಅನ್ನು ಅವರು ಬಯಸಿದರೆ, ಅವರು ಅದನ್ನು ತಮ್ಮ ಪೇಜ್‌ನಲ್ಲಿ ನಮೂದಿಸಬೇಕು!" ಎಂದು ಒಬ್ಬರು ಬರೆದಿದ್ದಾರೆ. 70ರ ದಶಕದವರೆಗೂ ಇಡೀ ಭಾರತೀಯ ಪೊಲೀಸ್ ಪಡೆ ಶಾರ್ಟ್ಸ್ ಧರಿಸುತ್ತಿತ್ತು" ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.