ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannadigaru UK: ಯುಕೆ ಕನ್ನಡಿಗರಿಂದ ಯುಗಾದಿ, ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ

ಕನ್ನಡಿಗರು ಯುಕೆ ವತಿಯಿಂದ ಫೆಲ್ಥಂನಲ್ಲಿ ಏ. 27ರಂದು ಅದ್ದೂರಿಯಾಗಿ ಯುಗಾದಿ ಹಬ್ಬ ಹಾಗೂ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಯಿತು. ಈ ಸಂಭ್ರಮದಲ್ಲಿ 100ಕ್ಕೂ ಹೆಚ್ಚು ಕರ್ನಾಟಕ ಮೂಲದ ಸದಸ್ಯರು ಭಾಗವಹಿಸಿ ತಮ್ಮ ಭಾಷೆ, ಸಂಸ್ಕೃತಿಯೊಂದಿಗಿನ ಸಂಬಂಧವನ್ನು ಬಲಪಡಿಸಿಕೊಂಡರು.

ಉಗ್ರರ ದಾಳಿ: ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಯುಕೆ ಕನ್ನಡಿಗರು

ಫೆಲ್ಥಂ: ಕನ್ನಡಿಗರು ಯುಕೆ (Kannadigaru UK) ವತಿಯಿಂದ ಏಪ್ರಿಲ್ 27ರಂದು ಅದ್ದೂರಿಯಾಗಿ ಯುಗಾದಿ (yugadi) ಹಬ್ಬ ಹಾಗೂ ಅಂತಾರಾಷ್ಟ್ರೀಯ ನೃತ್ಯ ದಿನವನ್ನು (International dance day) ಆಚರಿಸಲಾಯಿತು. ಈ ಸಂಭ್ರಮದಲ್ಲಿ 100ಕ್ಕೂ ಹೆಚ್ಚು ಕರ್ನಾಟಕ ಮೂಲದ ಸದಸ್ಯರು ಭಾಗವಹಿಸಿ ತಮ್ಮ ಭಾಷೆ, ಸಂಸ್ಕೃತಿಯೊಂದಿಗಿನ ಸಂಬಂಧವನ್ನು ಬಲಪಡಿಸಿಕೊಂಡರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ಯುಗಾದಿ ಹಬ್ಬದ ಪ್ರಯುಕ್ತ ಕನ್ನಡಿಗರುಯುಕೆ ಹಮ್ಮಿಕೊಂಡಿದ್ದ ಪಾರಂಪರಿಕ ಬಾಳೆ ಎಲೆ ಊಟ ಎಲ್ಲರ ಮನ ಸೆಳೆಯಿತು. ಸಾಂಪ್ರದಾಯಿಕ ಶೈಲಿಯ ಊಟದ ಬಳಿಕ ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯ ಅಂಗವಾಗಿ ಸಮುದಾಯದ ಸದಸ್ಯರು ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಿ ಎಲ್ಲರ ಮನಗೆದ್ದರು.

ಸಮಾಜಕ್ಕೆ ನೀಡಿರುವ ಅದ್ಭುತ ಕೊಡುಗೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ ರೇವತಿ ಕಾಮತ್ ಅವರನ್ನು ಕನ್ನಡಿಗರು ಯುಕೆ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುಕೆ ಸರ್ಕಾರದ ಪಾರ್ಲಿಮೆಂಟರಿ ಅಂಡರ್ ಸೆಕ್ರಟರಿ ಆಫ್ ಸ್ಟೇಟ್ (ವಲಸೆ ಮತ್ತು ಪೌರತ್ವ) ಮತ್ತು ಸಮಾನತಾ ಸಚಿವೆಯಾದ ಸೀಮಾ ಮಲ್ಹೋತ್ರಾ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ: Neha Kakkar: ಮೆಲ್ಬೋರ್ನ್‌ ಸಂಗೀತ ಕಛೇರಿ ವಿಳಂಬಕ್ಕೆ ಗಾಯಕಿ ನೇಹಾ ಕಕ್ಕರ್ ಕಾರಣ ಎಂದ ಆಯೋಜಕರು

ಪರಿಸರ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡುತ್ತಿರುವ ಜೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಅವರ ಗಮನಾರ್ಹ ಸಾಧನೆಗಳಲ್ಲಿ ಸರೋವರ ಪುನರುಜ್ಜೀವನ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟಿರುವುದು ಕೂಡ ಸೇರಿದೆ. ನುರಿತ ವೀಣಾ ವಾದಕಿಯಾಗಿರುವ ಇವರು ಹಲವಾರು ಕಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸೀಮಾ ಮಲ್ಹೋತ್ರಾ ಅವರು ಕನ್ನಡಿಗರು ಯುಕೆ ಸಂಘಟನೆಯ ಸೇವೆಗಳನ್ನು ಪ್ರಶಂಸಿಸಿದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿದೇಶದಲ್ಲಿ ಸಾರುತ್ತಿರುವ ಕನ್ನಡಿಗರ ತಂಡವನ್ನು ಅಭಿನಂದಿಸಿದರು.