Ananya Panday: ಇಟಲಿ ಪ್ರವಾಸದ ಫೋಟೊ ಹಂಚಿಕೊಂಡ ನಟಿ ಅನನ್ಯಾ ಪಾಂಡೆ
ಬಾಲಿವುಡ್ನ ನಾಯಕಿ ಅನನ್ಯಾ ಪಾಂಡೆ ಕೇವಲ ಸಿನಿಮಾವಲ್ಲದೆ ವೈಯಕ್ತಿಕ ವಿಚಾರದಲ್ಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಫ್ಯಾನ್ಸ್ ಮೂಲದ ‘ಶನೆಲ್’ ಕಂಪೆನಿಗೆ ಅನನ್ಯಾ ಪಾಂಡೆ ಭಾರತದ ರಾಯಭಾರಿ ಆಗಿದ್ದಾರೆ. ಇದೀಗ ನಟಿ ತನ್ನ ಇಟಲಿ ಪ್ರವಾಸದ ಖುಷಿಯ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ananya Panday Sweet Italian Life


ನಟಿ ಅನನ್ಯಾ ಪಾಂಡೆ ಸ್ಟಾರ್ ಕಿಡ್ ಆಗಿ ಬಾಲಿವುಡ್ಗೆ ಕಾಲಿಟ್ಟು ʼಲೈಗರ್ʼ ಸಿನಿಮಾ ಮೂಲಕ ಟಾಲಿವುಡ್ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆ ಮೂಲಕ ದಕ್ಷಿಣ ಭಾರತದಲ್ಲು ಅನನ್ಯಾ ಪಾಂಡೆ ಸಖತ್ ಸುದ್ದಿ ಮಾಡಿದ್ದಾರೆ. ಸಿನಿಮಾಗಳಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಸೋಶಿಯಲ್ ಮೀಡಿಯಾ ಸಖತ್ ಆ್ಯಕ್ಟಿವ್ ಆಗಿರುವ ಅನನ್ಯಾ ಪಾಂಡೆ ಇದೀಗ ಇಟಲಿ ಪ್ರವಾಸದ ಕೆಲ ದೃಶ್ಯ, ಫೋಟೊ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಬಿಟೌನ್ ಬ್ಯೂಟಿ ಅನನ್ಯ ಪಾಂಡೆ ತಮ್ಮ ವಿಭಿನ್ನ ಸ್ಟೈಲಿಶ್ ಲುಕ್ನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಇಟಲಿಯ ಸರೋವರವೊಂದರಲ್ಲಿ ಪೋಸ್ ನೀಡಿರುವ ಫೋಟೊ ಹಂಚಿಕೊಂಡಿದ್ದಾರೆ.

ಇಟಲಿ ಪ್ರವಾಸದ ಕೆಲ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ಶಾಂತ ಸರೋವರದ ಹತ್ತಿರ ನಿಂತುಕೊಂಡು ಪೋಸ್ ನೀಡಿದ್ದಾರೆ. ನಟಿ ಅನನ್ಯಾ ಪಾಂಡೆ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡು ಸ್ವೀಟ್ ಇಟಾಲಿಯನ್ ಲೈಫ್ ಅನುಭವಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅನನ್ಯಾ ದೇಹಕ್ಕೆ ಫಿಟ್ ಆಗಿರುವ ಮತ್ತು ಸ್ಕೂಪ್ ನೆಕ್ಲೈನ್ ಹೊಂದಿರುವ ಹಳದಿ ಬಣ್ಣದ ಉಡುಪನ್ನು ಧರಿಸಿದ್ದರು. ಚೆನೆಲ್ ಟೋಟ್ ಬ್ಯಾಗ್ ಮೂಲಕ ತಮ್ಮ ಲುಕ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಿದ್ದಾರೆ. ಅನನ್ಯಾ ಪಾಂಡೆ ಇಟಲಿಯಲ್ಲಿ ತಮ್ಮ ಮೊದಲ ಚೆನೆಲ್ ಕ್ರೂಸ್ ಶೋಗಾಗಿ, ಭಾರತದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ. ಒಂದು ಫೋಟೊದಲ್ಲಿ ಅವರು ನದಿಯ ದಡದ ಬೋಟ್ ರೈಡ್ ಅನ್ನು ಆನಂದಿಸುತ್ತಿರುವ ದೃಶ್ಯವಿದೆ. ಇನ್ನೊಂದರಲ್ಲಿ ಅನನ್ಯಾ ಸಹೋದರಿ ರೈಸಾ ಪಾಂಡೇಯ ಜತೆ ನಿಂತುಕೊಂಡಿದ್ದಾರೆ.

ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಫ್ರ್ಯಾನ್ಸ್ ಮೂಲದ ‘ಶನೆಲ್’ ಕಂಪನಿಗೆ ಅನನ್ಯಾ ಪಾಂಡೆ ಅವರು ಭಾರತದಿಂದ ರಾಯಭಾರಿ ಆಗಿದ್ದಾರೆ. ಶನೆಲ್’ ಕಂಪನಿಗೆ ಭಾರತದಿಂದ ಆಯ್ಕೆಯಾದ ಮೊದಲ ಪ್ರಚಾರ ರಾಯಭಾರಿ ಎಂಬ ಖ್ಯಾತಿ ಕೂಡ ಅನನ್ಯಾ ಪಾಂಡೆ ಅವರಿಗೆ ಸಲ್ಲುತ್ತದೆ.

ʼಸ್ಟುಡೆಂಟ್ ಆಫ್ ದಿ ಇಯರ್ 2ʼ, ‘ಪತಿ ಪತ್ನಿ ಔರ್ ವೋʼ, ‘ಗೆಹರಾಯಿಯಾʼ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಕೇಸರಿ ಚಾಪ್ಟರ್ 2’ ಸಿನಿಮಾದಲ್ಲಿನ ಅನನ್ಯಾ ಪಾಂಡೆ ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ ನಿರ್ದೇಶಕ ಅಟ್ಲಿ ಹಾಗೂ ನಟ ಅಲ್ಲು ಅರ್ಜುನ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿಅನನ್ಯಾ ಪಾಂಡೆ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಗಾಸಿಪ್ ಕೂಡ ಹಬ್ಬಿದೆ.