ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಇತ್ತ ಹಸೆಮಣೆ ಏರೋಕೆ ರೆಡಿ ಆದ ಮಗಳು... ಅತ್ತ ಭಾವಿ ಅಳಿಯನ ಜೊತೆ ಓಡಿ ಹೋದ ತಾಯಿ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಅಲಿಗಢದಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಭಾವಿ ಪತ್ನಿಯ ತಾಯಿಯೊಂದಿಗೆ ಓಡಿಹೋಗಿದ್ದಾನೆ. ಈ ಬಗ್ಗೆ ಖೋಡಾರೆ ಪೊಲೀಸ್ ಠಾಣೆಯಲ್ಲಿ ವಧುವಿನ ಕುಟುಂಬದವರು ದೂರು ದಾಖಲಿಸಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.ಈ ಸುದ್ದಿ ಇದೀಗ ವೈರಲ್‌(Viral News) ಆಗಿದೆ.

ವರನ ಜೊತೆ ಓಡಿಹೋದ ವಧುವಿನ ತಾಯಿ; ಇದು ಎಂಥಾ ಕಾಲವಯ್ಯಾ?

Profile pavithra Apr 30, 2025 4:03 PM

ಲಖನೌ: ಸಾಮಾನ್ಯವಾಗಿ ಹುಡುಗ ಹುಡುಗಿ ಪ್ರೀತಿಸಿ ಮನೆಯವರು ಮದುವೆಗೆ ಒಪ್ಪದಿದ್ದಾಗ ಓಡಿ ಹೋಗಿ ಮದುವೆಯಾಗುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ವರನೊಬ್ಬ ವಧುವಿನ ತಾಯಿಯ ಜೊತೆ ಓಡಿ ಹೋಗಿದ್ದಾನೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಅಲಿಗಢದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 25 ವರ್ಷದ ಯುವಕ ತನ್ನ ಜೊತೆ ಮದುವೆ ನಿಶ್ಚಯ ಮಾಡಿಕೊಂಡ ವಧುವಿನ ತಾಯಿಯ ಜೊತೆ ಓಡಿಹೋಗಿದ್ದಾನೆ. ವಧು ಮತ್ತು ಅವಳ ಕುಟುಂಬವು ಖೋಡಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ(Viral Video) ಎನ್ನಲಾಗಿದೆ.

ಮಾಹಿತಿ ಪ್ರಕಾರ,ಯುವತಿಯ ವಿವಾಹವನ್ನು ಬಸ್ತಿ ಜಿಲ್ಲೆಯ ಹಳ್ಳಿಯ ಯುವಕನೊಂದಿಗೆ ನಾಲ್ಕು ತಿಂಗಳ ಹಿಂದೆ ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಾಗ ವಧುವಿಗೆ ಕಾಲ್ ಮಾಡುತ್ತಿದ್ದ ವರನ ಜೊತೆಗೆ ವಧುವಿನ ತಾಯಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳಂತೆ. ಅದು ಅಲ್ಲದೇ, ಇವರಿಬ್ಬರೂ ಗಂಟೆ ಗಟ್ಟಲೆ ಮಾತನಾಡುತ್ತಿದ್ದರಂತೆ. ವಧುವಿನ ತಾಯಿ ಮತ್ತು ವರನ ನಡುವೆ ಆತ್ಮೀಯತೆ ಬೆಳೆಯಲು ಶುರುವಾಯಿತಂತೆ. ಇದು ವಧುವಿನ ಕುಟುಂಬದವರಲ್ಲಿ ಅನುಮಾನವನ್ನು ಮೂಡಿಸಿತು. ಹೀಗಾಗಿ ವಧುವಿನ ಕುಟುಂಬವು ಮೇ 9 ರಂದು ನಿಗದಿಪಡಿಸಲಾಗಿದ್ದ ಅವರ ಮದುವೆಯನ್ನು ಮುರಿದಿದ್ದಾರೆ. ಹೀಗಿದ್ದರೂ ವಧುವಿನ ತಾಯಿ ಮತ್ತು ವರನ ಮಾತುಕತೆ ಕದ್ದುಮುಚ್ಚಿ ನಡೆಯುತ್ತಿತ್ತು. ಆದರೆ, ಕಳೆದ ವಾರ ವರ ವಧುವಿನ ತಾಯಿಯೊಂದಿಗೆ ಓಡಿಹೋಗಿದ್ದಾನೆ.

ವಧುವಿನ ಕುಟುಂಬವು ಮೊದಲು ಅವರನ್ನು ತಾವೇ ಹುಡುಕಲು ಪ್ರಯತ್ನಿಸಿತು, ಆದರೆ ಅಂತಿಮವಾಗಿ ಪೊಲೀಸರ ಸಹಾಯವನ್ನು ಪಡೆಯಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಹುಡುಕಲು ಶೋಧ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನೋಡೋಕೆ ಹೈ-ಫೈ ರೆಸ್ಟೋರೆಂಟ್‍... ಒಳಗೆ ಹೋದ್ರೆ ಎಲ್ಲಿ ನೋಡಿದ್ರಲ್ಲಿ ಜಿರಳೆ- ಶಾಕಿಂಗ್‌ ವಿಡಿಯೊ ಇಲ್ಲಿದೆ

ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತಮಿಳುನಾಡಿನಲ್ಲಿ ಇಂತಹದೊಂದು ಘಟನೆ ವರದಿಯಾಗಿತ್ತು, ಮದುವೆಯಾಗಬೇಕಿದ್ದ ವಧುವಿನ ತಾಯಿಯೊಂದಿಗೆ 25 ವರ್ಷದ ವ್ಯಕ್ತಿಯೊಬ್ಬ ಓಡಿಹೋಗಿದ್ದಾನೆ. ಕಟ್ಟಡ ಕಾರ್ಮಿಕನಾದ ವರ ನಿಶ್ಚಿತಾರ್ಥದ ನಂತರ ಆಗಾಗ್ಗೆ ತನ್ನ ಭಾವಿ ಪತ್ನಿಯ ಮನೆಗೆ ಭೇಟಿ ನೀಡುತ್ತಿದ್ದಾಗ ವಧುವಿನ ತಾಯಿಯ ಕಡೆಗೆ ಆಕರ್ಷಿತನಾಗಿದ್ದನಂತೆ. ಮತ್ತು ಇದು ಇಬ್ಬರ ನಡುವೆ ಸಂಬಂಧ ಬೆಳೆಯಲು ಕಾರಣವಾಯ್ತು. ಹೀಗಾಗಿ ಅವರು ಓಡಿಹೋಗಿದ್ದರು. ಈ ಬಗ್ಗೆ ಪಲ್ಲಿಕರನೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವ್ಯಕ್ತಿಗಾಗಿ ಹುಡುಕಾಡಿದ್ದಾರೆ.