ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Google CEO: ಸುಂದರ್ ಪಿಚೈ ಭದ್ರತೆಗೆ 70 ಕೋಟಿ ರೂ.ಗೂ ಹೆಚ್ಚು ಖರ್ಚು!

ಅಮೆರಿಕ ಭದ್ರತೆ ಮತ್ತು ವಿನಿಮಯ ಆಯೋಗಕ್ಕೆ ಸಲ್ಲಿಸಿರುವ ಫೈಲಿಂಗ್‌ನಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ ಗೂಗಲ್ ಸಿಇಒ ಸುಂದರ್ ಪಿಚೈ ಅವರ ವೈಯಕ್ತಿಕ ಭದ್ರತೆಗಾಗಿ ಗೂಗಲ್ 8.27 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 70.41 ಕೋಟಿ ರೂ. ಖರ್ಚು ಮಾಡಿದೆ. ಕಳೆದ ಸಾಲಿನಲ್ಲಿ ಅವರ ಭದ್ರತಾ ವೆಚ್ಚ 2023 ರಲ್ಲಿ 6.78 ಮಿಲಿಯನ್‌ ಡಾಲರ್ ಅಂದರೆ ಸರಿಸುಮಾರು 57.72 ಕೋಟಿ ರೂ. ಆಗಿತ್ತು.

ಗೂಗಲ್ ಸಿಇಒ  ಭದ್ರತೆಗೆ ಎಷ್ಟು ಖರ್ಚು ಗೊತ್ತೆ?

ವಾಷಿಂಗ್ಟನ್‌: ಗೂಗಲ್ ಸಿಇಒ (Google CEO) ಸುಂದರ್ ಪಿಚೈ (Sundar Pichai) ಅವರ ಭದ್ರತೆಗಾಗಿ (Sundar Pichai personal security ) 2024ರಲ್ಲಿ ಬರೋಬ್ಬರಿ 70 ಕೋಟಿ ರೂ. ಖರ್ಚು ಮಾಡಿರುವುದಾಗಿ ಅಮೆರಿಕದ ಭದ್ರತೆ ಮತ್ತು ವಿನಿಮಯ ಆಯೋಗಕ್ಕೆ (US Securities and Exchange Commission) ಸಲ್ಲಿಸಿರುವ ಫೈಲಿಂಗ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಮೊತ್ತವು ಹಿಂದಿನ ಸಾಲಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಕೇವಲ 57 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸುಂದರ್ ಪಿಚೈ ಅವರ ಭದ್ರತೆಗೆ 22 ಕೋಟಿ ರೂ. ಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ.

ಅಮೆರಿಕ ಭದ್ರತೆ ಮತ್ತು ವಿನಿಮಯ ಆಯೋಗಕ್ಕೆ ಸಲ್ಲಿಸಿರುವ ಫೈಲಿಂಗ್‌ನಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ ಗೂಗಲ್ ಸಿಇಒ ಸುಂದರ್ ಪಿಚೈ ಅವರ ವೈಯಕ್ತಿಕ ಭದ್ರತೆಗಾಗಿ ಗೂಗಲ್ 8.27 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 70.41 ಕೋಟಿ ರೂ. ಖರ್ಚು ಮಾಡಿದೆ. ಅವರ ಭದ್ರತಾ ವೆಚ್ಚ 2023ರಲ್ಲಿ 6.78 ಮಿಲಿಯನ್‌ ಡಾಲರ್ ಅಂದರೆ ಸರಿಸುಮಾರು 57.72 ಕೋಟಿ ರೂ. ಆಗಿತ್ತು.

ಪಿಚೈ ಅವರ ಭದ್ರತೆಯಲ್ಲಿ ಹೊಸ ಕ್ರಮಗಳನ್ನು 2024ರಲ್ಲಿ ಸೇರಿಸಲಾಗಿತ್ತು. ಅದರಲ್ಲಿ ವಸತಿ ಭದ್ರತೆ, ಸಮಾಲೋಚನೆ ಭದ್ರತೆ, ಭದ್ರತಾ ಮೇಲ್ವಿಚಾರಣಾ ಸೇವೆಗಳು, ಕಾರು, ಚಾಲಕ ಸೇವೆಗಳು, ಪ್ರಯಾಣದ ಸಮಯದಲ್ಲಿ ವೈಯಕ್ತಿಕ ಭದ್ರತೆಗಳು ಸೇರಿವೆ ಎಂದು ಗೂಗಲ್‌ನ ಪೋಷಕ ಕಂಪೆನಿ ಆಲ್ಫಾಬೆಟ್ ತಿಳಿಸಿದೆ.

ಈ ವ್ಯವಸ್ಥೆ ಮತ್ತು ವೆಚ್ಚಗಳು ಸಮಂಜಸ, ಸೂಕ್ತ ಮತ್ತು ಅಗತ್ಯವಾಗಿದೆ. ಇದರಲ್ಲಿ ಆಲ್ಫಾಬೆಟ್ ಮತ್ತು ಅದರ ಷೇರುದಾರರ ಹಿತಾಸಕ್ತಿಗಳಲ್ಲಿವೆ ಎಂದು ನಾವು ನಂಬಿದ್ದೇವೆ. ಇದರಿಂದ ನಮ್ಮ ವ್ಯವಹಾರಕ್ಕೆ ಅಪಾಯಗಳು ಕಡಿಮೆಯಾಗುತ್ತವೆ. ಈ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳು ಸುಂದರ್ ಅವರ ವೈಯಕ್ತಿಕ ಪ್ರಯೋಜನಕ್ಕಾಗಿ ಅಲ್ಲ. ಅವು ಅವರ ಉದ್ಯೋಗ ಜವಾಬ್ದಾರಿಗಳಿಗಾಗಿ ನೀಡಲಾಗುತ್ತದೆ ಎಂದು ಆಲ್ಫಾಬೆಟ್ ಹೇಳಿದೆ.

2024ರಲ್ಲಿ ಪಿಚೈ ಅವರು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ತಾಂತ್ರಿಕ ಪ್ರಗತಿಗಳ ಬಗ್ಗೆ ವಿಶ್ವ ನಾಯಕರೊಂದಿಗೆ ಮಾತನಾಡಲು ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿ ಕಳೆದಿದ್ದರು. ಹೀಗಾಗಿ ಅವರ ಭದ್ರತಾ ಖರ್ಚು ಹೆಚ್ಚಾಗಿದೆ. ಎಐ ಮಾರುಕಟ್ಟೆಯಲ್ಲಿ ಗೂಗಲ್ ನಾಯಕತ್ವವು ಸ್ಪರ್ಧೆ ಮತ್ತು ಬೆಳೆಯುತ್ತಿರುವ ನಿಯಮಗಳಿಂದಾಗಿ ಬೆದರಿಕೆಗೆ ಒಳಗಾಗುವ ಅಪಾಯವಿತ್ತು ಎನ್ನಲಾಗಿದೆ.

ಇದನ್ನೂ ಓದಿ: Viral News: ಕಾರಿನೊಳಗೆ 1 BHK ಮನೆಯ ಸೌಲಭ್ಯ ! ಏನಿದು ಉಬರ್‌ ಚಾಲಕನ ಕರಾಮತ್ತು?

2025ರ ಮೊದಲ ತ್ರೈಮಾಸಿಕದಲ್ಲಿ ಗೂಗಲ್ ನ ಆದಾಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 12ರಷ್ಟು ಹೆಚ್ಚಾಗಿದೆ ಎನ್ನುತ್ತದೆ ಅಂಕಿಅಂಶಗಳು. 2024ರ ಆರ್ಥಿಕ ವರ್ಷದಲ್ಲಿ ಪಿಚೈ ಒಟ್ಟು 91.36 ಕೋಟಿ ರೂ. ಆದಾಯಗಳಿಸಿದ್ದು, ಇದರಲ್ಲಿ ಸ್ಟಾಕ್ ಸೇರಿದೆ. ಹಿಂದಿನ ಸಾಲಿನಲ್ಲಿ ಅವರ ಗಳಿಕೆ 74.93 ಕೋಟಿ ರೂ. ಆಗಿತ್ತು. 2025ರಲ್ಲಿ ಪಿಚೈ ಅವರ ಭದ್ರತಾ ವೆಚ್ಚಗಳನ್ನು ಗೂಗಲ್ ಹೇಗೆ ಹೊಂದಿಸಿದೆ ಎಂಬುದು ಸ್ಪಷ್ಟವಾಗಿಲ್ಲ.

ಯುನೈಟೆಡ್ ಹೆಲ್ತ್ ಸಿಇಒ ಬ್ರಿಯಾನ್ ಥಾಂಪ್ಸನ್ ಅವರ ಹತ್ಯೆಯ ಬಳಿಕ ಹೆಚ್ಚಿನ ಕಂಪೆನಿಗಳು ತಮ್ಮ ಉನ್ನತ ಕಾರ್ಯನಿರ್ವಾಹಕರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿವೆ.