Viral Video: ಅಗ್ನಿ ಅವಘಡ; ಜೀವ ಉಳಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದ ಯುವತಿ; ವಿಡಿಯೊ ವೈರಲ್!
ಅಹ್ಮದಾಬಾದ್‍ನ ಆಟ್ರೆ ಆರ್ಕಿಡ್ ಸೊಸೈಟಿಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಕಾಣಿಸಿಕೊಂಡಿದೆ. ಬೆಂಕಿಯಿಂದ ಪಾರಾಗಲು ಯುವತಿಯೊಬ್ಬಳು ಐದನೇ ಮಹಡಿಯಿಂದ ಜಿಗಿದಿದ್ದಾಳೆ. ಈ ಭಯಾನಕ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಅಹ್ಮದಾಬಾದ್: ಬೆಂಕಿಯಿಂದ ಪಾರಾಗಲು ಯುವತಿಯೊಬ್ಬಳು ಐದನೇ ಮಹಡಿಯಿಂದ ಜಿಗಿದು ಬದುಕುಳಿದ ಘಟನೆಯೊಂದು ನಡೆದಿದೆ. ಅಹ್ಮದಾಬಾದ್‍ನ ಆಟ್ರೆ ಆರ್ಕಿಡ್ ಸೊಸೈಟಿಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ಐದನೇ ಮಹಡಿಗೆ ಹರಡಿದೆ. ಹೀಗಾಗಿ ಐದನೇ ಯುವತಿ ಬೆಂಕಿಯಿಂದ ಪಾರಾಗಲು ಕಟ್ಟಡದ ಬಾಲ್ಕನಿಯಿಂದ ಜಿಗಿದಿದ್ದಾಳೆ. ಈ ಭಯಾನಕ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಬೆಂಕಿಯಿಂದ ಪಾರಾಗಲು ಯುವತಿ ಕಟ್ಟಡದ 5 ನೇ ಮಹಡಿಯಿಂದ ಜಿಗಿಯುವಾಗ ಕೆಳಗೆ ನೆಲದ ಮೇಲೆ ಉಬ್ಬಿದ ದಿಂಬುಗಳು ಮತ್ತು ಹಾಸಿಗೆಗಳನ್ನು ಹಾಕಲಾಗಿತ್ತಂತೆ. ಅದೃಷ್ಟವಶಾತ್ ಯುವತಿ ಅದರ ಮೇಲೆ ಬಿದ್ದಿದ್ದಾಳಂತೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಮೂವತ್ತಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಡಿಯೊ ಇಲ್ಲಿದೆ ನೋಡಿ...
📍Gujarat | #Watch: Woman Jumps Off 5th Floor Of Ahmedabad Building To Escape Fire
— NDTV (@ndtv) April 29, 2025
Read more: https://t.co/ZrpcYiUhAP pic.twitter.com/GVHtRKxryH
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಯುವತಿ ಕಟ್ಟಡದಿಂದ ಜಿಗಿಯುತ್ತಿರುವುದು ಸೆರೆಯಾಗಿದೆ. ಜನರು ನೆಲದ ಮೇಲೆ ಹಾಸಿಗೆ ಹಿಡಿದು ನಿಂತಿದ್ದಾಗ ಯುವತಿ ಅದರ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಅಪಾರ್ಟ್‌ಮೆಂಟ್‌ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಲವೇ ಕ್ಷಣಗಳಲ್ಲಿ, ಅದು 'ಸಿ' ಮತ್ತು 'ಡಿ' ವಿಂಗ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗಳನ್ನು ಆವರಿಸಿದೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ 'ಯೇ ತುನೇ ಕ್ಯಾ ಕಿಯಾ' ಹಾಡು ಹಾಡಿದ ದಿವ್ಯಾಂಗ ವ್ಯಕ್ತಿ; ಕಣ್ಣಾಲಿಗಳನ್ನು ಒದ್ದೆ ಮಾಡುವ ವಿಡಿಯೊ ವೈರಲ್!
ಬೆಂಕಿ ಅವಗಢದ ಘಟನೆಗಳು ಆಗಾಗ ವರದಿಯಾಗುತ್ತಿದ್ದು, ಈ ಹಿಂದೆ ಗುಜರಾತ್‍ನ ಅಹಮದಾಬಾದ್‍ನ ಖೋಖ್ರಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ದಳಗಳು ಆಗಮಿಸಿ ಕಟ್ಟಡದ ಒಳಗೆ ಸಿಲುಕಿಕೊಂಡವರ ರಕ್ಷಣೆ ಕಾರ್ಯನಡೆಸಿದ್ದರು. ಪರಿಹಾರ ಕಾರ್ಯಾಚರಣೆಗಾಗಿ ಕನಿಷ್ಠ ಏಳು ಅಗ್ನಿಶಾಮಕ ಯಂತ್ರಗಳು ಹಾಜರಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಈ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾದ ಕಟ್ಟಡದಿಂದ ಇಬ್ಬರು ಮಕ್ಕಳನ್ನು ಮಹಿಳೆಯೊಬ್ಬಳು ಬಾಲ್ಕನಿ ಮೂಲಕ ಇಬ್ಬರು ಪುರುಷರ ಸಹಾಯದಿಂದ ಕೆಳಗಿಳಿಸಿದ್ದಳು. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಮಹಿಳೆಯನ್ನು ಕೂಡ ರಕ್ಷಿಸಲಾಗಿತ್ತು.