ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ತಾಯಿಯೇ ಪ್ರಯಾಣಿಕಳಾಗಿರುವಾಗ ಪೈಲಟ್‌ ಮಗನ ಖುಷಿಗೆ ಪಾರವೇ ಇಲ್ಲ; ಹೃದಯಸ್ಪರ್ಶಿ ವಿಡಿಯೊ ವೈರಲ್

ಪೈಲಟ್ ಅಶ್ವಥ್ ಪುಷ್ಪನ್ ತನ್ನ ತಾಯಿಯನ್ನು ಮೊದಲ ಬಾರಿಗೆ ಬೇರೆ ದೇಶಕ್ಕೆ ವಿಮಾನದಲ್ಲಿ ಕರೆದೊಯ್ಯುವಾಗ ತಾಯಿಯ ಬಗ್ಗೆ ಹೇಳಿದ ಭಾವನಾತ್ಮಕ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ಈ ಹೃದಯಸ್ಪರ್ಶಿ ವಿಡಿಯೊ ನೋಡಿ ನೆಟ್ಟಿಗರ ಕಣ್ಣಂಚು ಕೂಡ ಒದ್ದೆಯಾಗಿದೆ.

ತಾಯಿಯೇ ಪ್ರಯಾಣಿಕಳಾಗಿರುವಾಗ ಪೈಲಟ್‌ ಮಗನ ಖುಷಿಗೆ ಪಾರವೇ ಇಲ್ಲ

Profile pavithra Apr 22, 2025 1:29 PM

ವಿಮಾನದೊಳಗಿನ ನಡೆಯುವ ಘಟನೆಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ.ಇತ್ತೀಚೆಗೆ ಯುವಕನೊಬ್ಬ ತನ್ನ ಭಾವಿಪತ್ನಿಗೆ ವಿಮಾನದಲ್ಲಿ ಸರ್‌ಪ್ರೈಸ್‌ ಒಂದು ನೀಡಿದ್ದು ಅದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ತಾಯಿ-ಮಗನ ಹೃದಯಸ್ಪರ್ಶಿ ವಿಡಿಯೊವೊಂದು ಸಖತ್‌ ಸದ್ದು ಮಾಡುತ್ತಿದೆ. ಇದರಲ್ಲಿ ಪೈಲಟ್ ತನ್ನ ತಾಯಿಯನ್ನು ಮೊದಲ ಬಾರಿಗೆ ಬೇರೆ ದೇಶಕ್ಕೆ ವಿಮಾನದಲ್ಲಿ ಕರೆದೊಯ್ಯುವಾಗ ತಾಯಿಯ ಬಗ್ಗೆ ಹೇಳಿದ ಮಾತುಗಳು ಎಲ್ಲರ ಮನಮುಟ್ಟಿದೆ. ತಾಯಿ-ಮಗನ ನಡುವಿನ ಈ ಭಾವನಾತ್ಮಕ ಕ್ಷಣವನ್ನು ಅಂತರರಾಷ್ಟ್ರೀಯ ವಿಮಾನದಲ್ಲಿ ರೆಕಾರ್ಡ್ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಪೈಲಟ್ ಅಶ್ವಥ್ ಪುಷ್ಪನ್ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ತಾಯಿ ವಿಮಾನದೊಳಗೆ ಕಾಲಿಟ್ಟಾಗ ಮಗ ಅಶ್ವಥ್ ಅವಳನ್ನು ಬೆಚ್ಚಗಿನ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾನೆ. ಬೋರ್ಡಿಂಗ್ ಪೂರ್ಣಗೊಂಡ ನಂತರ, ಪೈಲಟ್ ವಿಮಾನದೊಳಗಿನ ಕ್ಯಾಬಿನ್ ಸಿಬ್ಬಂದಿ ಸದಸ್ಯರಿಗೆ ಪ್ರಯಾಣ ಮತ್ತು ಸುರಕ್ಷತಾ ಸೂಚನೆಗಳನ್ನು ತಲುಪಿಸಲು ಬಳಸುವ ಮೈಕ್‍ನಲ್ಲಿ ಪ್ರಕಟಣೆ ಮಾಡಿದ್ದಾನೆ. “ಈ ವಿಮಾನದಲ್ಲಿ ನನಗೆ ವಿಶೇಷ ಅತಿಥಿ ಇದ್ದಾರೆ. ಈ ವ್ಯಕ್ತಿಯನ್ನು ನಾನು ಯಾವಾಗಲೂ ದಿನಸಿ ಅಂಗಡಿ ಅಥವಾ ಸಲೂನ್‍ಗೆ ಕರೆದೊಯ್ಯುತ್ತೇನೆ, ಮತ್ತು ಇಂದು, ನಾನು ಅವಳನ್ನು ಬೇರೆ ದೇಶಕ್ಕೆ ಕರೆದೊಯ್ಯುತ್ತಿರುವುದು ಇದೇ ಮೊದಲು" ಎಂದು ಪೈಲಟ್ ಹೇಳಿದ್ದಾನೆ. ನಂತರ ಮುಗುಳ್ನಗೆಯೊಂದಿಗೆ ಆತ, "ಈ ವಿಶೇಷ ವ್ಯಕ್ತಿ ಬೇರೆ ಯಾರೂ ಅಲ್ಲ ನನ್ನ ತಾಯಿ" ಎಂದಿದ್ದಾನೆ.

ತಾಯಿ-ಮಗನ ಈ ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ ನೋಡಿ...

ಅದು ಅಲ್ಲದೇ, ಅಶ್ವಥ್ ತನ್ನ ತಾಯಿಯೊಂದಿಗೆ ಕಾಕ್‌ಪಿಟ್ ಒಳಗೆ ಫೋಟೋವನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾನೆ. ಈ ವಿಡಿಯೊ 1.8 ಲಕ್ಷ ಲೈಕ್ಸ್ ಮತ್ತು 80 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ಗಳೊಂದಿಗೆ ವೈರಲ್ ಆಗಿದೆ. ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇಂಡಿಗೊ ಪೈಲಟ್ ತನ್ನ ಕುಟುಂಬಕ್ಕಾಗಿ ವಿಶೇಷ ಘೋಷಣೆ ಮಾಡುವುದನ್ನು ತೋರಿಸುವ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿತ್ತು.

ಈ ಸುದ್ದಿಯನ್ನೂ ಓದಿ:Viral Video: ಮಿಠಾಯಿ ಮಾರುವ ಈ ಅಜ್ಜನ ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಿ! ವಿಡಿಯೊ ನೋಡಿ

ಚೆನ್ನೈನಿಂದ ಕೊಯಮತ್ತೂರಿಗೆ ವಿಮಾನದಲ್ಲಿ ಹೊರಡುವ ಮೊದಲು ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ತಮ್ಮ ಹೆತ್ತವರಿಗಾಗಿ ಹೃದಯಸ್ಪರ್ಶಿ ಅನೌನ್ಸ್‌ಮೆಂಟ್‌ವೊಂದನ್ನು ಮಾಡಿದ್ದಾರೆ "ಇಂದು ನನ್ನ ಕುಟುಂಬವು ನನ್ನೊಂದಿಗೆ ಪ್ರಯಾಣಿಸುತ್ತಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ. ನನ್ನ ಅಜ್ಜ, ಅಜ್ಜಿ ಮತ್ತು ಅಮ್ಮ ತಾಯಿ 29 ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ಮೊದಲ ಬಾರಿಗೆ ನನ್ನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ” ಎಂದು ಕೃಷ್ಣನ್ ಅವರು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.