Sirsi Crime: ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಸಾವು
ಓಣಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂ ಕಿನ ಅವರ್ಸಾದ ದಂಡೆ ಭಾಗದಲ್ಲಿ ನಡೆದಿದೆ. ಮಹಂತೇಶ್ ಬಾನಾವಳಿಕರ್ (28) ಎಂದು ಗುರುತಿಸ ಲಾಗಿದೆ. ಭಾರೀ ಗಾಳಿ ಮಳೆ ಯಿಂದಾಗಿ ವಿದ್ಯುತ್ ತಂತಿಯೊಂದು ತುಂಡಾಗಿ ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ.


ಅಂಕೋಲಾ: ಓಣಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂ ಕಿನ ಅವರ್ಸಾದ ದಂಡೆಭಾಗದಲ್ಲಿ ನಡೆದಿದೆ. ಮಹಂತೇಶ್ ಬಾನಾವಳಿಕರ್ (28) ಎಂದು ಗುರುತಿಸ ಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿಯೊಂದು ತುಂಡಾಗಿ ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ.
ಇದನ್ನೂ ಓದಿ: Haryana Crime: ಸ್ನೇಹಿತನ ಖಾಸಗಿ ಭಾಗಕ್ಕೆ ಪೈಪ್ ಇಟ್ಟು ನೀರು ಬಿಟ್ಟ ಯುವಕರು; ಮುಂದೆ ಆಗಿದ್ದು ಮಾತ್ರ ಘೋರ ದುರಂತ
ಈ ವೇಳೆ ಮಹಂತೇಶ ಎಂಬಾತ ಅಂಗಡಿಯಿಂದ ಮನೆಗೆ ಓಣಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ವಿದ್ಯುತ್ ತಗುಲಿದೆ. ಪರಿಣಾಮ ವಿದ್ಯುತ್ ಶಾಕ್‌ನಿಂದ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಘಟನೆಗೂ ಪೂರ್ವದಲ್ಲಿ ಜಾನುವಾರು ಒಂದಕ್ಕೂ ವಿದ್ಯುತ್ ತಗುಲಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.