Droupadi Murmu: 6 ಕೀರ್ತಿ ಚಕ್ರ, 33 ಶೌರ್ಯ ಚಕ್ರ ಪದಕ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ಭವನದಲ್ಲಿ ಗುರುವಾರ (ಮೇ 22) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳು (ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗೆ 6 ಕೀರ್ತಿ ಚಕ್ರ (4 ಮರಣೋತ್ತರ), 33 ಶೌರ್ಯ ಚಕ್ರ (7 ಮರಣೋತ್ತರ) ಪ್ರಶಸ್ತಿ ಪ್ರದಾನ ಮಾಡಿದರು.


ಹೊಸದಿಲ್ಲಿ: ರಾಷ್ಟ್ರಪತಿ ಭವನದಲ್ಲಿ ಗುರುವಾರ (ಮೇ 22) ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಶಸ್ತ್ರ ಪಡೆಗಳು (ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗೆ 6 ಕೀರ್ತಿ ಚಕ್ರ (Kirti Chakra) (4 ಮರಣೋತ್ತರ), 33 ಶೌರ್ಯ ಚಕ್ರ (Shaurya Chakra) (7 ಮರಣೋತ್ತರ) ಪ್ರಶಸ್ತಿ ಪ್ರದಾನ ಮಾಡಿದರು.
ಕರ್ತವ್ಯದ ಸಂದರ್ಭದಲ್ಲಿ ಅಪ್ರತಿಮ ಧೈರ್ಯ ಮತ್ತು ಪರಾಕ್ರಮ ತೋರಿದ ಸಿಬ್ಬಂದಿಗೆ ಪ್ರಶಸ್ತಿ ನೀಡಲಾಯಿತು. ಭಾರತೀಯ ಸೇನೆಯ ಸಿಬ್ಬಂದಿಯ ಶೌರ್ಯ, ಬಲಿದಾನಗಳಿಗೆ ನೀಡುವ ಪದಕವಿದು. ಮರಣೋತ್ತರವಾಗಿಯೂ ಈ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ.
President Smt Droupadi Murmu today conferred six Kirti Chakras, including four posthumous, and 33 Shaurya Chakras, including seven posthumous, to the personnel of the Armed Forces, Central Armed Police Forces and State/Union Territory Police during Phase-I of Defence Investiture+ pic.twitter.com/qC0Mq87Upl
— Guptchar Vibhaag(PMO) Information Directorate (@GuptcharVibhaag) May 22, 2025
ಈ ಸುದ್ದಿಯನ್ನೂ ಓದಿ: Terrorists infiltration: ಸ್ಫೋಟಕ ಸಂಗತಿ ಬಯಲು!ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ
ಶೌರ್ಯ ಚಕ್ರ
ಮೇಜರ್ (ಈಗ ಲೆಫ್ಟಿನೆಂಟ್ ಕರ್ನಲ್) ವಿಜಯ್ ವರ್ಮಾ, ಡೆಪ್ಯುಟಿ ಕಮಾಂಡೆಂಟ್ ವಿಕ್ರಾಂತ್ ಕುಮಾರ್ (ಸಿಆರ್‌ಪಿಎಫ್), ಇನ್ಸ್‌ಪೆಕ್ಟರ್/ ಜಿಡಿ ಜೆಫ್ರಿ ಹ್ಮಿಂಗ್‌ಚುಲ್ಲೋ (ಸಿಆರ್‌ಪಿಎಫ್) ವಿಂಗ್ ಕಮಾಂಡರ್ ವೆರ್ನಾನ್ ಡೆಸ್ಮಂಡ್ ಕೀನ್ (ಐಎಎಫ್), ಸ್ಕ್ವಾಡ್ರನ್ ಲೀಡರ್ ದೀಪಕ್ ಕುಮಾರ್ (ಐಎಎಫ್), ವಿಶೇಷ ಪೊಲೀಸ್ ಅಧಿಕಾರಿ ಅಬ್ದುಲ್ ಲತೀಫ್ (ಜಮ್ಮು ಕಾಶ್ಮೀರ ಪೊಲೀಸ್), ಸುಬೇದಾರ್ ಸಂಜೀವ್ ಸಿಂಗ್ (ಭಾರತೀಯ ಸೇನೆ), ಕರ್ನಲ್ ಪವನ್ ಸಿಂಗ್ (ಭಾರತೀಯ ಸೇನೆ), ಸುಬೇದಾರ್ ಪಿ.ಪಬಿನ್ ಸಿಂಘಾ (ಭಾರತೀಯ ಸೇನೆ), ಮೇಜರ್ ಸಾಹಿಲ್ ರಾಂಧವ (ಭಾರತೀಯ ಸೇನೆ), ಲೆಫ್ಟಿನೆಂಟ್ ಕರ್ನಲ್ ಸಿವಿಎಸ್ ನಿಖಿಲ್ (ಭಾರತೀಯ ಸೇನೆ), ಮೇಜರ್ ತ್ರಿಪತ್‌ಪ್ರೀತ್ ಸಿಂಗ್ (ಭಾರತೀಯ ಸೇನೆ), ಲೆಫ್ಟಿನೆಂಟ್ ಕಮಾಂಡರ್ ಕಪಿಲ್ ಯಾದವ್ (ಭಾರತೀಯ ಸೇನೆ), ಡೆಪ್ಲಯುಟಿ ಕಮಾಂಡೆಂಟ್ ಲಖ್ವಿ (ಸಿಆರ್‌ಪಿಎಫ್), ಅಸಿಸ್ಟಂಟ್ ಕಮಾಂಡೆಂಟ್ ರಾಜೇಶ್ ಪಂಚಾಲ್ (ಸಿಆರ್‌ಪಿಎಫ್), ಸಿಟಿ/ಜಿಡಿ ಮಲ್ಕಿತ್ ಸಿಂಗ್ (ಸಿಆರ್‌ಪಿಎಫ್), ಸುಬೇದಾರ್ ಮೋಹನ್ ರಾಮ್ (ಭಾರತೀಯ ಸೇನೆ), ಕಮೋಡೋರ್ ಶರದ್ ಸಿನ್ಸುನ್ವಾ (ಭಾರತೀಯ ನೌಕಾಪಡೆ), ಫ್ಲೈಟ್ ಲೆಫ್ಟಿನೆಂಟ್ ಅಮನ್ ಸಿಂಗ್ (ಭಾರತೀಯ ವಾಯು ಪಡೆ), ಸಾರ್ಜೆಂಟ್ ದಾಭಿ ಸಂಜಯ್ ಹೈಫ್‌ಭಾಯ್ (ಭಾರತೀಯ ವಾಯು ಪಡೆ), ಮೇಜರ್ ಕುನಾಲ್ (ಭಾರತೀಯ ಸೇನೆ), ಮೇಜರ್ ಆಶಿಷ್ ದಾಹಿಯ (ಭಾರತೀಯ ಸೇನೆ), ಹವಿಲ್ದಾರ್ ಪ್ರಕಾಶ್ ತಮಂಗ್ (ಭಾರತೀಯ ಸೇನೆ), ಮೇಜರ್ ಸತೀಂದರ್ ಧಂಕರ್ (ಭಾರತೀಯ ಸೇನೆ), ಸಹಾಯಕ ಕಮಾಂಡೆಂಟ್ ಎಶೆಂತುಂಗ್ ಕಿಕೊನ್ (ಭಾರತೀಯ ಸೇನೆ), ಸಿಬೇದಾರ್ ವಿಕಾಸ್ ತೋಮರ್ (ಭಾರತೀಯ ಸೇನೆ).
ಶೌರ್ಯ ಚಕ್ರ (ಮರಣೋತ್ತರ)
ಮೇಜರ್ ಆಶಿಶ್ ಧನಚಕ್ (ಭಾರತೀಯ ಸೇನೆ), ಸಿಪಾಯಿ ಪ್ರದೀಪ್ ಸಿಂಗ್ (ಭಾರತೀಯ ಸೇನೆ), ಹವಾಲ್ದಾರ್ ರೋಹಿತ್ ಕುಮಾ (ಭಾರತೀಯ ಸೇನೆ), ಪವನ್ ಕುಮಾರ್ (ಸಿಆರ್‌ಪಿಎಫ್), ದೇವನ್ (ಸಿಆರ್‌ಪಿಎಫ್), ವಿಜಯನ್ ಕುಟ್ಟಿ (ಬಿಆರ್‌ಒ), ಕ್ಯಾಪ್ಟನ್ ದೀಪಕ್ ಸಿಂಗ್ (ಭಾರತೀಯ ಸೇನೆ).
ಕೀರ್ತಿ ಚಕ್ರ
ಮೇಜರ್ ಮಲ್ಲ ರಾಮ ಗೋಪಾಲ್ ನಾಯ್ಡು (ಭಾರತೀಯ ಸೇನೆ), ಮೇಜರ್ ಮಂಜಿತ್ (ಭಾರತೀಯ ಸೇನೆ).
ಕೀರ್ತಿ ಚಕ್ರ (ಮರಣೋತ್ತರ)
ರೈಫಲ್ ಮ್ಯಾನ್ ರವಿ ಕುಮಾರ್ (ಭಾರತೀಯ ಸೇನೆ), ಕರ್ನಲ್ ಮನ್‌ಪ್ರೀತ್ ಸಿಂಗ್ (ಭಾರತೀಯ ಸೇನೆ), ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹಿಮಯುನ್ ಮುಝಾಮ್ಮಿಲ್ ಭಟ್ (ಜಮ್ಮು ಕಾಶ್ಮೀರ ಪೊಲೀಸ್), ನಾಯಕ್ ದಿಲ್ವಾರ್ ಖಾನ್ (ಭಾರತೀಯ ಸೇನೆ).