ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಓಲ್ಡ್‌ ಈಸ್‌ ಗೋಲ್ಡ್‌.... ಅಜ್ಜ-ಅಜ್ಜಿಯ ಕ್ಯೂಟ್‌ ಡಾನ್ಸ್‌ ನೋಡಿ ನೆಟ್ಟಿಗರು ಫುಲ್‌ ಫಿದಾ!

ಆತಿಫ್ ಅಸ್ಲಂ ಅವರ ರೊಮ್ಯಾಂಟಿಕ್ ಕ್ಲಾಸಿಕ್ 'ಹೋನಾ ಥಾ ಪ್ಯಾರ್' ಹಾಡಿಗೆ ವೃದ್ಧ ದಂಪತಿಗಳಿಬ್ಬರು ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ.ಈ ಹೃದಯಸ್ಪರ್ಶಿ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರ ಕೆಮಿಸ್ಟ್ರಿ, ಮುಗ್ಧತೆ ನೋಡಿ ಸೋಶಿಯಲ್ ಮೀಡಿಯಾ ನೆಟ್ಟಿಗರು ಫಿದಾ ಆಗಿದ್ದಾರೆ.

ಪಾರ್ಕ್‌ನಲ್ಲಿ ಹೆಜ್ಜೆ ಹಾಕಿದ ಅಜ್ಜ-ಅಜ್ಜಿ- ನೆಟ್ಟಿಗರು ಹೇಳಿದ್ದೇನು?

Profile pavithra Apr 25, 2025 3:24 PM

ನವದೆಹಲಿ: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ.ಈ ಅದ್ಭುತ ಭಾವನೆಯನ್ನು ಅನುಭವಿಸಿದವರಿಗೆ ಮಾತ್ರ ಇದರ ಬೆಲೆ ಗೊತ್ತಾಗುತ್ತದೆ. ಹಾಗೇ ಸಂಗೀತ ಕೂಡ.ಪ್ರೀತಿ ಹಾಗೂ ಸಂಗೀತ ಇವೆರೆಡೂ ಭಾಂದವ್ಯವನ್ನೂ ಮತ್ತಷ್ಟೂ ಗಟ್ಟಿಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು! ಇಷ್ಟೆಲ್ಲಾ ಪೀಠಿಕೆ ಯಾಕೆಂದ್ರೆ ಸೋಶಿಯಲ್‌ ಮೀಡಿಯಾದಲ್ಲಿ ದಂಪತಿಗಳಿಬ್ಬರ ಡ್ಯಾನ್ಸ್‌ ವಿಡಿಯೊವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆತಿಫ್ ಅಸ್ಲಂ ಅವರ ರೊಮ್ಯಾಂಟಿಕ್ ಕ್ಲಾಸಿಕ್ 'ಹೋನಾ ಥಾ ಪ್ಯಾರ್' ಹಾಡಿಗೆ ವೃದ್ಧ ದಂಪತಿ ಡ್ಯಾನ್ಸ್ ಮಾಡಿದ ಹೃದಯಸ್ಪರ್ಶಿ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರ ಕೆಮಿಸ್ಟ್ರಿ, ಮುಗ್ಧತೆ ನೋಡಿ ನೆಟ್ಟಿಗರು ಕೂಡ ಫುಲ್‌ ಖುಷಿಯಾಗಿದ್ದಾರೆ.

ಈ ವಿಡಿಯೊವನ್ನು ಗಾಯಕ ಆದಿತ್ಯ ಚೌಹಾಣ್ ಹಂಚಿಕೊಂಡಿದ್ದಾರೆ. ಸಹ ಸಂಗೀತ ಪ್ರೇಮಿಗಳೊಂದಿಗೆ ಗಾಯಕ ಆದಿತ್ಯ ಚೌಹಾಣ್ ಜಾಮ್ ಸೆಷನ್ ನಡೆಸುವಾಗ ಅಲ್ಲಿಗೆ ಬಂದ ವೃದ್ಧ ದಂಪತಿ ಹಾಡಿನ ಲಯಕ್ಕೆ ತಕ್ಕ ಹಾಗೇ ಡ್ಯಾನ್ಸ್ ಮಾಡಿದ್ದಾರಂತೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಅಜ್ಜ-ಅಜ್ಜಿಯ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಈಗ 1.3 ಮಿಲಿಯನ್ ಲೈಕ್ಸ್ ಮತ್ತು ಕಾಮೆಂಟ್‍ಗಳನ್ನು ಗಳಿಸಿದೆ. ಕೆಲವರು ಈ ವಿಡಿಯೊಗೆ "ಇಬ್ಬರು ಲವ್‍ ಬರ್ಡ್ಸ್‌" ಎಂದು ಕಾಮೆಂಟ್ ಬರೆದರೆ , ಇತರರು "ಅವರ ಜೋಡಿ ತುಂಬಾ ಮುದ್ದಾಗಿದೆ" ಎಂದು ಬರೆದಿದ್ದಾರೆ. "ಒಂಟಿಯಾಗಿರಲಿ ಅಥವಾ ಇಲ್ಲದಿರಲಿ, ಅವರು ಎಲ್ಲರನ್ನೂ ನಾಚಿಕೆಪಡುವಂತೆ ಮಾಡಿದ್ದಾರೆ" ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬ,"ನಾನು ಅವರನ್ನು ಒಮ್ಮೆ ದೆಹಲಿ ಮೆಟ್ರೋದಲ್ಲಿ ಭೇಟಿಯಾದೆ, ಅವರು ಪರಸ್ಪರ ಉತ್ತಮವಾದ ಸಂಬಂಧ ಹೊಂದಿದ್ದಾರೆ. ಈ ಪೀಳಿಗೆಯು ಅವರಿಂದ ಸ್ಫೂರ್ತಿ ಪಡೆಯಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ.” ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಂಗಡಿಯಲ್ಲಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ; ಏನಿದು ಘಟನೆ?

ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ತ್ರಿವೇಣಿ ಸಂಗಮದಲ್ಲಿ ವೃದ್ಧ ದಂಪತಿ ಸಂತೋಷ ಮತ್ತು ಭಕ್ತಿಯಿಂದ ನೃತ್ಯ ಮಾಡಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ವೈರಲ್ ವಿಡಿಯೊದಲ್ಲಿ ದಂಪತಿ ಇಬ್ಬರು ಕೈಕೈ ಹಿಡಿದುಕೊಂಡು ಸಂತೋಷದಿಂದ ಕುಣಿಯುವುದನ್ನು ಸೆರೆಹಿಡಿಯಲಾಗಿದೆ. ಈ ರೀಲ್ ಜನರ ಮುಖದಲ್ಲಿ ನಗುವನ್ನು ಮೂಡಿಸಿದೆ ಮತ್ತು ಅವರಿಗೆ “ಕೃಷ್ಣ ರುಕ್ಮಿಣಿ"ಯನ್ನು ನೋಡಿದಷ್ಟೇ ಸಂತೋಷವಾಗಿದೆ ಎನ್ನಲಾಗಿದೆ. ಸಾಂಪ್ರದಾಯಿಕ ಮಹಾರಾಷ್ಟ್ರದ ಉಡುಪನ್ನು ಧರಿಸಿದ ವೃದ್ಧ ದಂಪತಿ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದಾಗ ಉತ್ಸಾಹದಿಂದ ಕುಣಿದು ಕುಪ್ಪಳಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಪ್ರೀತಿ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.