ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs PBKS: ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಪಂಜಾಬ್‌ ಕಿಂಗ್ಸ್‌ ಸವಾಲು!

KKR vs PBKS Match Preview: ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಶನಿವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 44ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಪಂಜಾಬ್‌ ಎದುರು ಸೇಡು ತೀರಿಸಿಕೊಳ್ಳಲು ಕೋಲ್ಕತಾ ಸಜ್ಜು!

ಪಂಜಾಬ್‌ ಕಿಂಗ್ಸ್‌ vs ಕೋಲ್ಕತಾ ನೈಟ್‌ ರೈಡರ್ಸ್‌

Profile Ramesh Kote Apr 25, 2025 6:15 PM

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು (KKR vs PBKS) ಶನಿವಾರ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 44ನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಈ ಪಂದ್ಯಕ್ಕೆ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಸೂಕ್ತ ವೇದಿಕೆ ಸಿದ್ದವಾಗಿದೆ. ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ತಂಡ ಇಲ್ಲಿಯ ತನಕ ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಕಳೆದ ಪಂದ್ಯದಲ್ಲಿ ತಮ್ಮ ತವರು ಅಂಗಣದಲ್ಲಿಯೇ ಗುಜರಾತ್‌ ಟೈಟನ್ಸ್‌ ಎದುರು ಪಂಜಾಬ್‌ ಕಿಂಗ್ಸ್‌ 39 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು.

ಕೆಕೆಆರ್‌ ತಂಡದ ಆಂಡ್ರೆ ರಸೆಲ್‌, ರಿಂಕು ಸಿಂಗ್‌ ಹಾಗೂ ರಮಣದೀಪ್‌ ಸಿಂಗ್‌ ಅವರ ಫಾರ್ಮ್‌ ಕಳೆದುಕೊಂಡಿದ್ದಾರೆ. ಈ ಆಟಗಾರರಿಂದ ಇನ್ನು ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿ ಬಂದಿಲ್ಲ. ಕೆಕೆಆರ್‌ಗೆ ಇನ್ನುಳಿದಿರುವುದು 6 ಪಂದ್ಯಗಳು ಮಾತ್ರ. ಪಂಜಾಬ್‌ ವಿರುದ್ಧದ ಪಂದ್ಯದಲ್ಲಿಯೂ ಸೋತರೇ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪ್ಲೇಆಫ್ಸ್‌ ಹಾದಿ ಇನ್ನಷ್ಟು ಕಠಿಣವಾಗಲಿದೆ.

ಇನ್ನು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗಗ್ಸ್‌ ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಹಾಗೂ 3 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಪಂಜಾಬ್‌ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

IPL 2025: ರಾಜಸ್ಥಾನ್‌ ಎದುರು ರೂಪಿಸಿದ್ದ ಬ್ಯಾಟಿಂಗ್‌ ರಣತಂತ್ರ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ!

ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ 2025ರ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭನ್ನು ಕಂಡಿತ್ತು. ಆದರೆ, ಕಳೆದ ಕೆಲ ಪಂದ್ಯಗಳಲ್ಲಿ ಪಂಜಾಬ್‌ ನೀರಸ ಪ್ರದರ್ಶನವನ್ನು ತೋರುವ ಮೂಲಕ ಸೋಲು ಅನುಭವಿಸಿದೆ. ಇದೀಗ ಶನಿವಾರ ತಮ್ಮ ಮಾಜಿ ತಂಡದ ವಿರುದ್ದ ಗೆಲ್ಲಲು ಅಯ್ಯರ್‌ ಎದುರು ನೋಡುತ್ತಿದ್ದಾರೆ.

ಮುಲ್ಲಾನ್‌ಪುರದಲ್ಲಿ ಮೊದಲ ಬಾರಿ ಮುಖಾಮುಖಿಯಲ್ಲಿ ಕೆಕೆಆರ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ ಲೋ ಸ್ಕೋರಿಂಗ್‌ ಪಂದ್ಯವನ್ನು ಗೆದ್ದಿತ್ತು. ಕೇವಲ 112 ರನ್‌ಗಳಿಗೆ ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಪಂಜಾಬ್‌ ಕಿಂಗ್ಸ್‌ ಕಟ್ಟಿ ಹಾಕಿತ್ತು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿಯೇ ಅತ್ಯಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ದಾಖಲೆಯನ್ನು ಪಂಜಾಬ್‌ ಬರೆದಿತ್ತು.

IPL 2025: 7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ಈಡನ್‌ ಗಾರ್ಡನ್ಸ್‌ ಪಿಚ್‌ ರಿಪೋರ್ಟ್‌

ಕೋಲ್ಕತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಕಳೆದ ನಾಲ್ಕು ಪಂದ್ಯಗಳ ಬಳಿಕ ಇಲ್ಲಿ ಪ್ರಥಮ ಇನಿಂಗ್ಸ್‌ನ ಸರಾಸರಿ ಮೊತ್ತ 202 ರನ್‌ಗಳು. ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳು ಗೆದ್ದಿವೆ. ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು. ಪ್ರಥಮ ಇನಿಂಗ್ಸ್‌ನಲ್ಲಿ ಮೊದಲು ಬ್ಯಾಟ್‌ ಮಾಡಿ ದೊಡ್ಡ ಮೊತ್ತವನ್ನು ಕಲೆ ಹಾಕಿ, ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರಬಹುದು.

ಕೋಲ್ಕತಾ vs ಪಂಜಾಬ್‌ ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 34

ಕೋಲ್ಕತಾ ನೈಟ್‌ ರೈಡರ್ಸ್‌: 21

ಪಂಜಾಬ್‌ ಕಿಂಗ್ಸ್‌: 13

IPL 2025: ಆರ್‌ಸಿಬಿ ವಿರುದ್ಧ ದಾಖಲೆ ಬರೆದ ಜೈಸ್ವಾಲ್‌; ಈ ಸಾಧನೆ ಮಾಡಿದ ಮೊದಲಿಗ

ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಕೋಲ್ಕತಾ ನೈಟ್‌ ರೈಡರ್ಸ್‌: ರೆಹಮಾನುಲ್ಲಾ ಗುರ್ಬಾಝ್‌ (ವಿ.ಕೀ), ಸುನೀಲ್‌ ನರೇನ್‌, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌, ಆಂಡ್ರೆ ರಸೆಲ್‌, ರಮಣ್‌ದೀಪ್‌ ಸಿಂಗ್‌, ಮೊಯೀನ್‌ ಅಲಿ, ಹರ್ಷಿತ್‌ ರಾಣಾ, ವೈಭವ್‌ ಅರೋರಾ, ವರುಣ್‌ ಚಕ್ರವರ್ತಿ

ಇಂಪ್ಯಾಕ್ಟ್‌ ಪ್ಲೇಯರ್‌: ಅಂಗ್‌ಕ್ರಿಶ್‌ ರಘವಂಶಿ

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್‌ ಆರ್ಯ, ಪ್ರಭ್‌ಸಿಮ್ರಾನ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌ (ನಾಯಕ), ಜಾಶ್‌ ಇಂಗ್ಲಿಸ್‌ (ವಿ.ಕೀ),ನೆಹಾಲ್‌ ವಧೇರಾ, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಮಾರ್ಕೊ ಯೆನ್ಸನ್‌, ಕ್ಸಿವಿಯರ್‌ ಬಾರ್ಲೆಟ್‌, ಹರಪ್ರೀತ್‌ ಬ್ರಾರ್‌, ಅರ್ಷದೀಪ್‌ ಸಿಂಗ್‌

ಇಂಪ್ಯಾಕ್ಟ್‌ ಪ್ಲೇಯರ್‌: ಯುಜ್ವೇಂದ್ರ ಚಹಲ್‌

ಪಂದ್ಯದ ವಿವರ

2025ರ ಐಪಿಎಲ್‌ ಟೂರ್ನಿ: 44ನೇ ಪಂದ್ಯ

ಕೋಲ್ಕತಾ ನೈಟ್‌ ರೈಡರ್ಸ್‌ vs ಪಂಜಾಬ್‌ ಕಿಂಗ್ಸ್‌

ದಿನಾಂಕ: ಏಪ್ರಿಲ್‌ 26, 2025

ಸಮಯ: ಸಂಜೆ 07: 30ಕ್ಕೆ

ಸ್ಥಳ: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ, ಕೋಲ್ಕತಾ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌