ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು

ಮರುದಿನ ಪರಮೇಶ್ವರನು ತನ್ನ ಲೀಲೆಯಿಂದ ವೃದ್ಧ ಬ್ರಾಹ್ಮಣನಾದನು. ಮೈ ಕೈ ನಡುಗುತ್ತಿದೆ ಹಣ್ಣು ಹಣ್ಣು ಮುದುಕ, ಬಂದವನೇ ಗಂಗೆಯಲ್ಲಿ ಸ್ನಾನಕ್ಕೆ ಇಳಿದು ವಾಲಾಡುತ್ತಾ ಎದುಸಿರು ಬಿಡುತ್ತಾ ಎದ್ದು ಬಿದ್ದು ಒದ್ದಾಡುತ್ತಿದ್ದವನು ಒಮ್ಮೆ ನದಿಯ ಒಂದು ಗುಂಡಿ ಜಾಗದಲ್ಲಿ ಬಿದ್ದನು. ಆ ಗುಂಡಿಯಿಂದ ಕಾಲು ಎತ್ತಲು ಅವನಿಂದ ಆಗಲಿಲ್ಲ. ಪಾರ್ವತಿಯನ್ನು ಕೂಗಿ, ಯಾರನ್ನಾದರೂ ಸಹಾಯಕ್ಕೆ ಕರಿ ಎಂದ. ವಯಸ್ಸಾದ ಮುತ್ತೈದೆಯ ರೂಪದಲ್ಲಿದ್ದ ಪಾರ್ವತಿ ದೀನಳಾಗಿ ಅಲ್ಲಿರುವ ಜನರನ್ನು ಕೂಗಿದಳು

ಭಕ್ತಿ ಒಂದೇ ಅಲ್ಲ ದೇವರಲ್ಲಿ ನಂಬಿಕೆಯೂ ಬೇಕು

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಶಿವ ಪಾರ್ವತಿಯರು ಹರಿದ್ವಾರದ ಆಕಾಶದಲ್ಲಿ ಸಂಚರಿಸುತ್ತಿದ್ದರು. ಕೆಳಗೆ ಪರಮ ಪಾವನೆ ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡಲು ಜನಸಾಗರವೇ ಹರಿದು ಬರುತ್ತಿತ್ತು. ಆಕಾಶಮಾರ್ಗ ದಲ್ಲಿ ವಿಹರಿಸುತ್ತಿದ್ದ ಪಾರ್ವತಿ ಇದನ್ನು ನೋಡಿದ ಅವಳಿಗೆ ಪಾಪನಾಶಿನಿ ಗಂಗೆಯಲ್ಲಿ ಸ್ನಾನ ಮಾಡಿದರು ಅವರು ಸಂತೋಷವಾಗಿಲ್ಲ ಏಕೆ ಹೀಗೆ ಎಂದು ಅವಳಿಗೆ ಆಶ್ಚರ್ಯವಾಯಿತು.

ಅವಳು ಶಿವನಲ್ಲಿ ಕೇಳಿದಳು. ಸ್ವಾಮಿ, ಜನರು ಪವಿತ್ರ ಗಂಗೆಯಲ್ಲಿ ಎಷ್ಟು ಸಲ ಸ್ನಾನ ಮಾಡಿದರೂ ಈ ಜನರ ದುಃಖ ಮತ್ತು ಪಾಪ ಏಕೆ ನಾಶವಾಗುತ್ತಿಲ್ಲ. ಇವರ ಪಾಪಗಳನ್ನು ನಾಶಪಡಿಸುವ ಶಕ್ತಿ ಗಂಗೆಯಲ್ಲಿ ಇಲ್ಲವೇ ಎಂದು ಕೇಳಿದಳು. ಶಿವನು ಪಾರ್ವತಿ ಈ ಪ್ರಶ್ನೆಗೆ ದೇವಿ, “ಗಂಗೆಗೆ ಜನಗಳ ಪಾಪ ತೊಳೆಯುವ ಸಾಮರ್ಥ್ಯವಿದೆ.

ಆದರೆ ಈ ಜನರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡದೆ ಬರೀ ನೀರಿನಲ್ಲಿ ಮುಳಗೇಳುತ್ತಿದ್ದಾರೆ. ಹೀಗಿರುವಾಗ ಪಾಪ ಹೇಗೆ ನಾಶವಾಗುತ್ತದೆ?" ಎಂದು ಹೇಳುತ್ತಾ ಇದನ್ನು ನಿನಗೆ ನಾಳೆ ನಿರೂಪಿಸು ತ್ತೇನೆ ಎಂದನು. ಮರುದಿನ ಪರಮೇಶ್ವರನು ತನ್ನ ಲೀಲೆಯಿಂದ ವೃದ್ಧ ಬ್ರಾಹ್ಮಣನಾದನು. ಮೈ ಕೈ ನಡುಗುತ್ತಿದೆ ಹಣ್ಣು ಹಣ್ಣು ಮುದುಕ, ಬಂದವನೇ ಗಂಗೆಯಲ್ಲಿ ಸ್ನಾನಕ್ಕೆ ಇಳಿದು ವಾಲಾಡುತ್ತಾ ಎದುಸಿರು ಬಿಡುತ್ತಾ ಎದ್ದು ಬಿದ್ದು ಒದ್ದಾಡುತ್ತಿದ್ದವನು ಒಮ್ಮೆ ನದಿಯ ಒಂದು ಗುಂಡಿ ಜಾಗದಲ್ಲಿ ಬಿದ್ದನು. ಆ ಗುಂಡಿಯಿಂದ ಕಾಲು ಎತ್ತಲು ಅವನಿಂದ ಆಗಲಿಲ್ಲ.

ಇದನ್ನೂ ಓದಿ: Roopa Gururaj Column: ಎಲ್ಲರನ್ನೂ ಯಾವಾಗಲೂ ವಂಚಿಸಲು ಸಾಧ್ಯವಿಲ್ಲ

ಪಾರ್ವತಿಯನ್ನು ಕೂಗಿ, ಯಾರನ್ನಾದರೂ ಸಹಾಯಕ್ಕೆ ಕರಿ ಎಂದ. ವಯಸ್ಸಾದ ಮುತ್ತೈದೆಯ ರೂಪದಲ್ಲಿದ್ದ ಪಾರ್ವತಿ ದೀನಳಾಗಿ ಅಲ್ಲಿರುವ ಜನರನ್ನು ಕೂಗಿದಳು. ಅವಳ ಕೂಗು ಕೇಳಿ ಒಂದಷ್ಟು ಜನ ಧಾವಿಸಿ ಬಂದು ಮುದುಕನನ್ನು ಎತ್ತಿ ತರಲು ಹೊರಟರು. ಆಗ ಪಾರ್ವತಿ ಅವರನ್ನು ತಡೆದು, ನೋಡಿ ‘ನನ್ನ ಪತಿ ಯಾವುದೇ ಪಾಪ ಕಾರ್ಯ ಮಾಡದ ಮಹಾ ಪುಣ್ಯವಂತ ನಾಗಿದ್ದಾನೆ. ಅವರನ್ನು ಮುಟ್ಟುವವ ರು ಪಾಪರಹಿತರಾಗಿರಬೇಕು. ಇಲ್ಲದಿದ್ದರೆ ಅವರನ್ನು ಮುಟ್ಟುತ್ತಲೇ ಭಸ್ಮವಾಗುವರು’ ಎಂದಾಗ ಬಂದ ಜನ ಹೆದರಿ ಹಿಂದೆ ಸರಿದರು ಏಕೆಂದರೆ ಅವರ್ಯಾರಿಗೂ ಸಾಯಲು ಇಷ್ಟವಿರಲಿಲ್ಲ.

ಶಿವ ಪಾರ್ವತಿಗೆ ಹೇಳಿದ, ನೋಡಿದೆಯಾ? ದೇವಿ ಯಾರೊಬ್ಬರೂ ಮೇಲೆ ಎತ್ತಲು ಬರಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಗಂಗೆ ಪಾಪನಾಶಿನಿ ಎಂಬ ನಂಬಿಕೆ ಇರಲಿಲ್ಲ, ನಂಬಿಕೆ ಇದ್ದವರು ನನ್ನನ್ನು ಮೇಲೆತ್ತಲು ಬಂದರೆ, ಎನ್ನುತ್ತಿದ್ದಂತೆ ಒಬ್ಬ ಯುವಕ ಮುದುಕನನ್ನು ಮೇಲೆತ್ತಲು ಬಂದಾಗ, ಪಾರ್ವತಿ ಅವನನ್ನು ತಡೆದು, ಆತನಿಗೂ ನಿಬಂಧನೆ ಹೇಳಿದಳು.

ಆದರೆ ಯುವಕ ದೃಢ ನಿಶ್ಚಯದಿಂದ ಪಾರ್ವತಿಗೆ ಹೇಳಿದ. ಅಮ್ಮಾ, ನಾನೂ ಪಾಪ ಕಾರ್ಯ ಮಾಡಿರುವೆ ಎಂಬ ಸಂದೇಹ ನಿಮಗೆ ಬಂದಿದೆ. ನಾನು ಅರಿವಿದ್ದು ಅರಿವಿಲ್ಲದೆಯೋ ಪಾಪ ಕಾರ್ಯ ಮಾಡಿದ್ದೇನೆ. ಆದರೂ ಹೇಳುತ್ತೇನೆ ನೀವೇ ನೋಡಿದಂತೆ ನಾನು ಇದೇ ಈಗ ತಾನೇ ಶುದ್ಧ ಮನಸ್ಸಿ ನಿಂದ ಗಂಗೆಯಲ್ಲಿ ಸ್ನಾನ ಮಾಡಿ ಮಡಿಬಟ್ಟೆ ಉಟ್ಟು ಬಂದಿದ್ದೇನೆ. ಇಂಥ ಪವಿತ್ರ ಪಾಪನಾಶಿನಿ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದ ಮೇಲೆ ಇನ್ನು ನನ್ನ ಪಾಪ ಕರ್ಮಗಳು ಉಳಿಯಲು ಹೇಗೆ ಸಾಧ್ಯ? ನೀವು ಹೆದರಬೇಡಿ ನಾನು ನೀರಿನ ಕೊಂಡದಲ್ಲಿ ಸಿಕ್ಕಿಕೊಂಡಿರುವ ನಿಮ್ಮ ಪತಿಯನ್ನು ಮೇಲಕ್ಕೆತ್ತಿ ತರುತ್ತೇನೆ ಎಂದು ಪಾರ್ವತಿಗೆ ಹೇಳಿ ನದಿಗೆ ಇಳಿದು ಆಕೆಯ ಪತಿಯನ್ನು ಹೊಂಡ ದಿಂದ ಮೇಲೆತ್ತಿ ದಡಕ್ಕೆ ತಂದನು.

ಎಲ್ಲಕ್ಕಿಂತ ನಂಬಿಕೆ ಮುಖ್ಯ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಮೊದಲು ಭಕ್ತರಿಗೆ ಇರಬೇಕು. ದಾನ, ಭಗವಂತನ ನಾಮಸ್ಮರಣೆ, ಪೂಜೆ, ಭಜನೆ ಏನೇ ಮಾಡಿದರೂ ಪಾಪ ಕಳೆದು ಕಿಂಚಿತ್ ಪುಣ್ಯದ ಫಲ ಅವಶ್ಯವಾಗಿ ಸಿಗುತ್ತದೆ ಎಂದು ಈಶ್ವರ. ನಿಜವೇ ಅಲ್ಲವೇ ಈ ಮಾತು ನಮ್ಮೆಲ್ಲರಿಗೂ ಅನ್ವಯಿಸುತ್ತದೆ.