ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಭಾರತದ ಆರ್ಥಿಕ ಬೆಳವಣಿಗೆಯನ್ನು ಹೇಗೆ ನೋಡಬೇಕು ?

ಕಳೆದ 5 ತಿಂಗಳಿನಿಂದ ಭಾರತದ ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ಕುಸಿತ‌ ದ್ದೇ ಸುದ್ದಿ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರ್ಗಮನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಟ್ರೇಡ್ ವಾರ್, ಜಾಗತಿಕ ಆರ್ಥಿಕತೆಯ ಮಂದಗತಿ, ಕಾರ್ಪೊರೇಟ್ ವಲಯದ ತಲ್ಲಣಗಳಿಂದ ಸ್ಟಾಕ್ ಮಾರ್ಕೆಟ್ ಬೀಳುತ್ತಿದೆ ಎಂಬ ಹೌಹಾರುವ ವಿಶ್ಲೇಷಣೆ ಯೇ ಹೆಚ್ಚು

ಭಾರತದ ಆರ್ಥಿಕ ಬೆಳವಣಿಗೆಯನ್ನು ಹೇಗೆ ನೋಡಬೇಕು ?

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್‌ ಪ್ರಸಾದ್‌ ಬಿ.

ಮನಿ ಮೈಂಡೆಡ್

ಭಾರತ ಇಂದು ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆ ಯಾಗಿ ಹೊರಹೊಮ್ಮಿದೆ. ಇದು ಕೇವಲ ಸಾಫ್ಟ್‌ ವೇರ್, ಹೊರಗುತ್ತಿಗೆ, ಕಾಲ್ ಸೆಂಟರ್‌ಗಳ ಯಶೋಗಾಥೆಯಿಂದ ಉಂಟಾಗಿದ್ದಲ್ಲ. ದೇಶವಿಂದು ಹಲವಾರು ಕ್ಷೇತ್ರಗಳಲ್ಲಿ ಅಭೂತ ಪೂರ್ವ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ. ವೈದ್ಯ ಕೀಯ, ಔಷಧ ಕ್ಷೇತ್ರಗಳಲ್ಲಿ ಜಗತ್ತಿನ ಮುಂಚೂಣಿಯಲ್ಲಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದಾಪುಗಾಲಿಕ್ಕಿದೆ.

ಎಡರು ವರ್ಷಗಳ ಹಿಂದೆ ಜರ್ಮನಿಯ ಮಂತ್ರಿಯೊಬ್ಬರು ಬೆಂಗಳೂರಿನ ಬೀದಿಬದಿಯ ತರಕಾರಿ ವ್ಯಾಪಾರಿಯ ಬಳಿಗೆ ತೆರಳಿ, ಬೆಳ್ಳುಳ್ಳಿ ಕೊಂಡು, ಯುಪಿಐ ಬಳಸಿ ಹಣ ವರ್ಗಾವಣೆ ಮಾಡಿದ್ದರು. ನೀವೀಗ ‘ಇದರನು ಮಹಾ?’ ಎನ್ನಬಹುದು. ಆದರೆ ಅವರು ಈ ತಂತ್ರಜ್ಞಾನ ಕ್ರಾಂತಿಯನ್ನು ಸ್ವತಃ ತಮ್ಮ ದೇಶದಲ್ಲಿ ಕಂಡಿರಲಿಲ್ಲ.

ಹೀಗಾಗಿ ಮೊಬೈಲ್ ಮೂಲಕ ಕೆಲವೇ ಸೆಕೆಂಡ್ ಗಳಲ್ಲಿ ಹಣ ವರ್ಗಾವಣೆಯದಾಗ ಬೆರಗಾಗಿ ದ್ದರು. ಮಾರನೇ ದಿನ ಪತ್ರಿಕೆಗಳಲ್ಲಿ ಅದು ಫೋಟೊ ಸಮೇತ ವರದಿಯೂ ಆಗಿತ್ತು. ಭಾರ ತದ ಡಿಜಿಟಲ್ ಮೂಲಸೌಕರ್ಯ ಜಗತ್ತಿನ ಗಮನ ಸೆಳೆದಿರುವ ಪರಿಯಿದು.

ಇದನ್ನೂ ಓದಿ: Keshav Prasad B Column: ಯುವ ಉದ್ಯಮಿಗಳು ಮಸ್ಕ್ʼರಿಂದ ಕಲಿಯಬೇಕಾದ ಪಾಠ

ಕಳೆದ 5 ತಿಂಗಳಿನಿಂದ ಭಾರತದ ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ಕುಸಿತ‌ ದ್ದೇ ಸುದ್ದಿ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರ್ಗಮನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಟ್ರೇಡ್ ವಾರ್, ಜಾಗತಿಕ ಆರ್ಥಿಕತೆಯ ಮಂದಗತಿ, ಕಾರ್ಪೊರೇಟ್ ವಲಯದ ತಲ್ಲಣಗಳಿಂದ ಸ್ಟಾಕ್ ಮಾರ್ಕೆಟ್ ಬೀಳುತ್ತಿದೆ ಎಂಬ ಹೌಹಾರುವ ವಿಶ್ಲೇಷಣೆ ಯೇ ಹೆಚ್ಚು.

ಹೀಗಾಗಿ ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಹೂಡಿಕೆ ಮಾಡಿರುವವರು ಆತಂಕದಲ್ಲಿ ದ್ದಾರೆ. ಇನ್ನು ಕೆಲವರು ಷೇರಿನ ಬದಲಿಗೆ ಬಂಗಾರದಲ್ಲಿ ಹೂಡಿಕೆ ಮಾಡಿ ನೋಡಿ ಎಂಬ ಸಲಹೆಯನ್ನೂ ಕೊಡುತ್ತಿದ್ದಾರೆ. ಆದರೆ, ಇತಿಹಾಸ ಏನೆನ್ನುತ್ತದೆ ಎಂಬುದನ್ನು ನೀಡಿದರೆ, ಈಗ ಕಂಡುಬಂದಿರುವ ಶೇ.13-15ರ ಸೂಚ್ಯಂಕ ಕುಸಿತ ನಗಣ್ಯ.

ಏಕೆಂದರೆ, 1986ರಿಂದ 2024ರ ತನಕ ಭಾರತೀಯ ಸ್ಟಾಕ್ ಮಾರ್ಕೆಟ್ ಇತಿಹಾಸವನ್ನು ಗಮನಿಸಿದರೆ, ಈಗ ಉಂಟಾಗಿರುವ ಶೇ.13ರ ಕರೆಕ್ಷನ್ ಖಂಡಿತವಾಗಿಯೂ ದೊಡ್ಡದಲ್ಲ. ನಮ್ಮ ಸ್ಟಾಕ್ ಮಾರ್ಕೆಟ್ ಇದಕ್ಕಿಂತ ಭೀಕರವಾದ ಕುಸಿತಕ್ಕೆ ಸಾಕ್ಷಿಯಾಗಿದೆ ಮತ್ತು ಅಷ್ಟೇ ವೇಗವಾಗಿ ಚೇತರಿಸಿಕೊಂಡಿದೆ.

ಅಂಕಿ ಅಂಶಗಳ ಪ್ರಕಾರ ಇದುವರೆಗಿನ ಇತಿಹಾಸದಲ್ಲಿ ಸೂಚ್ಯಂಕಗಳು ಭಾರಿ ಕುಸಿತದ ಬಳಿಕ 2 ವಾರಗಳಿಂದ 2 ವರ್ಷದೊಳಗೆ ಚೇತರಿಸಿಕೊಂಡಿವೆ, ಜಿಗಿದು ಹೊಸ ಎತ್ತರಕ್ಕೇರಿವೆ. 1986ರಲ್ಲಿ ವಿತ್ತೀಯ ಕೊರತೆ ತೀವ್ರವಾಗಿ ಸ್ಟಾಕ್ ಮಾರ್ಕೆಟ್ ಮೈನಸ್ ಶೇ.41ರಷ್ಟು ಕುಸಿ ದಿತ್ತು.

1991ರಲ್ಲಿ ಬ್ಯಾಲೆ ಆಫ್ ಪೇಮೆಂಟ್ ಬಿಕ್ಕಟ್ಟು ಉಂಟಾಗಿ ಮೈನಸ್ ಶೇ.39ರಷ್ಟು ಕುಸಿದಿತ್ತು. 1996ರಲ್ಲಿ ಹರ್ಷದ್ ಮೆಹ್ತಾ ಹಗರಣದ ಸಂದರ್ಭ ಮೈನಸ್ ಶೇ.54ರಷ್ಟು ಕುಸಿದಿತ್ತು. 2000 ರಲ್ಲಿ ಡಾಟ್ ಕಾಮ್ ವಿವಾದದಿಂದ ಮೈನಸ್ ಶೇ.56ರಷ್ಟು, 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಸ್ಟಾಕ್ ಇಂಡೆಕ್ಸ್‌ ಶೇ.61ರಷ್ಟು ಕುಸಿತಕ್ಕೀಡಾಗಿತ್ತು.

ಇತ್ತೀಚೆಗೆ ಅಂದರೆ ಕೋವಿಡ್ ಸಂದರ್ಭ ಸ್ಟಾಕ್ ಮಾರುಕಟ್ಟೆ ಮೈನಸ್ ಶೇ.38ರಷ್ಟು ಕುಸಿ ದಿತ್ತು. ನಮ್ಮವರಿಗೆ ಹಿತ್ತಲ ಗಿಡ ಮದ್ದಲ್ಲ. ಬೇರೆ ಯಾರಾದರೂ ಹೇಳಿದರೆ ಮೈಯೆಲ್ಲ ಕಿವಿ ಯಾಗಿಸಿ ಕೇಳಬಲ್ಲರು. ಅಮೆರಿಕದ ಬಹುರಾಷ್ಟ್ರೀಯ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಗೋಲ್ಡ್‌ ಮನ್ ಸ್ಯಾಕ್ಸ್‌ನ ಸಿಇಒ ಡೇವಿಡ್ ಸೋಲೊಮನ್ ಇತ್ತೀಚೆಗೆ ‘ಇಟಿ ನೌ’ಗೆ ನೀಡಿದ ಸಂದರ್ಶನ ದಲ್ಲಿ, India is emerging as a key global investment destination, with its economy poised for significant growth over the next decade ಎನ್ನುತ್ತಾರೆ.

ಭಾರತವು ತಾತ್ಕಾಲಿಕವಾಗಿ ಕೆಲವು ಅಡಚಣೆಗಳನ್ನು ಎದುರಿಸಬಹುದು. ಆದರೆ ಇದರ ಹೊರತಾಗಿಯೂ ಜಾಗತಿಕ ಹೂಡಿಕೆಯ ತಾಣವಾಗಿದೆ. ಗ್ಲೋಬಲ್ ಸಿಇಒಗಳು ಈಗಲೂ ಭಾರತವನ್ನು ಹೊಸ ಅವಕಾಶಗಳ ಅದ್ಭುತ ತಾಣವಾಗಿ ಪರಿಗಣಿಸುತ್ತಿದ್ದಾರೆ.

ದೇಶವು ಮಾಡಬೇಕಿರುವುದಿಷ್ಟು. ಬಂಡವಾಳ ಹೂಡಿಕೆ ಹರಿದುಬರಲು ತಪ್ಪನ್ನು ಸರಿಪಡಿ ಸಬೇಕು. ಆಡಳಿತಶಾಹಿಯನ್ನು ಕಡಿಮೆ ಮಾಡಬೇಕು. ನಿಯಂತ್ರಕ ಕ್ರಮಗಳಲ್ಲಿ ಸ್ಪಷ್ಟತೆ ಇರಬೇಕು. ಆಗ ಮತ್ತಷ್ಟು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಆಳವಾಗಿ ಅಸ್ತಿತ್ವವನ್ನು ಕಂಡುಕೊಳ್ಳಲಿವೆ ಎನ್ನುತ್ತಾರೆ ಸೋಲೆಮನ್.

21ನೆಯ ಶತಮಾನ ಭಾರತದ್ದು ಎನ್ನಲು ಹಲವು ಕಾರಣಗಳು ಇವೆ. ಮೊದಲನೆಯದಾಗಿ ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಜನಸಂಪನ್ಮೂಲ ವಿಶ್ವ ದಲ್ಲಿಯೇ ಅತಿ ದೊಡ್ಡದು. ಹೀಗಾಗಿ ಜಗತ್ತಿನ ಅತಿ ದೊಡ್ಡ ಮತ್ತು ಪ್ರಬುದ್ಧ ಮಾರುಕಟ್ಟೆ ಯಾಗಿ ವಿಶ್ವವನ್ನೇ ಆಕರ್ಷಿಸುತ್ತಿದೆ.

2008ರಲ್ಲಿ ಜಗತ್ತಿನ ನಾನಾ ದೇಶಗಳು ಆರ್ಥಿಕ ಹಿಂಜರಿತಕ್ಕೆ ತತ್ತರಿಸಿದರೂ, ಭಾರತದಲ್ಲಿ ಅಂಥದ್ದೇನೂ ಸಂಭವಿಸಿರಲಿಲ್ಲ. ಭಾರತ ತನ್ನ ದೇಶೀಯ ಮಾರುಕಟ್ಟೆಯ ಚಟುವಟಿಕೆ ಗಳಿಂದಲೇ ಜಾಗತಿಕ ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಿತ್ತು. ಸವಾಲು ಗಳನ್ನು ಜೀರ್ಣಿಸಿಕೊಂಡಿತ್ತು.

ಭಾರತ ಇಂದು ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆ ಯಾಗಿ ಹೊರಹೊಮ್ಮಿದೆ. ಇದು ಕೇವಲ ಸಾಫ್ಟ್-ವೇರ್, ಹೊರಗುತ್ತಿಗೆ, ಕಾಲ್ ಸೆಂಟರ್‌ಗಳ ಯಶೋಗಾಥೆಯಿಂದ ಉಂಟಾಗಿದ್ದಲ್ಲ. ದೇಶವಿಂದು ಹಲವಾರು ಕ್ಷೇತ್ರಗಳಲ್ಲಿ ಅಭೂತ‌ ಪೂರ್ವ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ. ವೈದ್ಯಕೀಯ, ಔಷಧ ಕ್ಷೇತ್ರಗಳಲ್ಲಿ ಜಗತ್ತಿನ ಮುಂಚೂಣಿಯಲ್ಲಿದೆ.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದಾಪುಗಾಲಿಕ್ಕಿದೆ. ಸೇವಾ ವಲಯದಲ್ಲಿ ಹೆಸರು ವಾಸಿಯಾಗಿದ್ದ ಭಾರತವು ಉತ್ಪಾದನಾ ವಲಯದಲ್ಲೂ ಛಾಪು ಮೂಡಿಸಿದೆ. ಹತ್ತು ವರ್ಷ ಗಳ ಹಿಂದೆ 11ನೇ ದೊಡ್ಡ ಆರ್ಥಿಕತೆಯಾಗಿದ್ದ ಭಾರತ ಈಗ ಐದಕ್ಕೆ ಏರಿದೆ.

ಪರಂಪರೆಯಿಂದಲೂ ಭಾರತವು ಜಗತ್ತಿಗೆ ನೀಡಿರುವ ಅತಿ ದೊಡ್ಡ ಕೊಡುಗೆ ಅದರ ಆಧ್ಯಾ ತ್ಮಿಕತೆಯಾದರೆ, ಇತ್ತೀಚಿನ ದಶಕಗಳಲ್ಲಿ ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ, ಉತ್ಪಾದನೆ, ಕೃಷಿ, ಆಹಾರ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಕೊಡುಗೆಯನ್ನು ವಿಶ್ವಕ್ಕೇ ನೀಡುತ್ತಿದೆ. ಫಾರ್ಚ್ಯೂನ್ 500 ಪಟ್ಟಿಯಲ್ಲಿರುವ ಬಹುತೇಕ ಕಂಪನಿಗಳು ಭಾರತದಲ್ಲಿ ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿವೆ. ಅಮೆರಿಕದ ಆಪಲ್ ಕಂಪನಿ ತನ್ನ ಐಫೋನ್‌ಗಳನ್ನು ಚೆನ್ನೈ, ಕೋಲಾರದಲ್ಲಿ ತಯಾರಿಸುತ್ತಿದೆ.

ಭಾರತವು 90ರ ದಶಕದಲ್ಲಿ ಆರ್ಥಿಕ ಉದಾರೀಕರಣಕ್ಕೆ ಹೊರಳಿದ ಬಳಿಕ ಇಲ್ಲಿಯವರೆಗೆ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದೆ. ಈ ಹಿಂದೆ ವಿದೇಶಿಯರಲ್ಲಿ ಭಾರತದ ಬಗ್ಗೆ ಇದ್ದ ಕಲ್ಪನೆಯೇ ಬೇರೆ, ಈಗಿನ ಚಿತ್ರಣವೇ ಬೇರೆ. ಅಂದೆಲ್ಲ ಭಾರತ ಎಂದರೆ ಬಡವರ ದೇಶ, ಪ್ರವಾಸಿಗರ ಮುಂದೆ ಭಿಕ್ಷೆಗೆ ನಿಲ್ಲುವವರು, ಹಾವಾಡಿಗರು, ಆನೆ, ಸಿಂಹ ಮತ್ತು ತಾಜ್‌ ಮಹ್. ಆದರೆ ಈಗ ಮಹಾಕುಂಭಮೇಳಕ್ಕೆ 15 ಲಕ್ಷ ವಿದೇಶಿಯರು ಬಂದು ಹೋಗಿದ್ದಾರೆ.

ಅತ್ಯಾಧುನಿಕ ಚಿಕಿತ್ಸೆ ಅಗ್ಗವಾಗುತ್ತದೆ ಎಂದು ಬೆಂಗಳೂರಿಗೆ ಪ್ರತಿ ವರ್ಷ ಸಾವಿರಾರು ವಿದೇಶಿಯರು ಬಂದು ಹೋಗುತ್ತಾರೆ. ಅಮೆರಿಕದಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೆ 30000 ಡಾಲರ್ ನಿಂದ 2 ಲಕ್ಷ ಡಾಲರ್ ತನಕ ಖರ್ಚಾದರೆ, ಬೆಂಗಳೂರಿನಲ್ಲಿ 3 ರಿಂದ 5 ಲಕ್ಷ ರುಪಾಯಿಗೆ ಮುಗಿಯುತ್ತದೆ (30 ಸಾವಿರ ಡಾಲರ್ ಅನ್ನು ರುಪಾಯಿಗೆ ಪರಿವರ್ತಿಸಿದರೆ 25 ಲಕ್ಷ ರುಪಾಯಿಗೂ ಹೆಚ್ಚು).

ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದು ಕೊಂಡರೂ, ದೇಶೀಯ ಹೂಡಿಕೆದಾರರು ಅಷ್ಟೇ ಉತ್ಸಾಹದಿಂದ ಹೂಡಿಕೆ ಮಾಡುವ ಮೂಲಕ ಸೂಚ್ಯಂಕಗಳ ಕುಸಿತದ ವೇಗವನ್ನು ತಡೆಯುತ್ತಾರೆ. ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಏರೋಸ್ಪೇಸ್, ಡಿಫೆನ್ಸ್, ಆಟೊಮೋಟಿವ್, ಬಯೊಟೆಕ್ನಾಲಜಿ, ಕ್ಯಾಪಿಟಲ್ ಗೂಡ್ಸ್, ಟೆಕ್ಸ್‌ಟೈಲ್ಸ್, ಕೆಮಿಕಲ್ಸ್, ಪೆಟ್ರೊ ಕೆಮಿಕಲ್ಸ್, ಇಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ, ರೈಲ್ವೇ, ನಿರ್ಮಾಣ ಸೇರಿದಂತೆ ಹಲವಾರು ವಲಯಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ‌

ವಿಶ್ವ ಬ್ಯಾಂಕ್, ಐಎಂಎಫ್, ಗೋಲ್ಡ್‌ಮನ್ ಸ್ಯಾಕ್ಸ್, ಮೂಡೀಸ್ ಹೀಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭಾರತದ ಬೆಳವಣಿಗೆಯ ಸಾಧ್ಯತೆಗಳ ಬಗ್ಗೆ ಆಶಾವಾದಿಗಳಾಗಿವೆ. ಭರವಸೆಯ ಮುನ್ನೋಟಗಳನ್ನು ಮಂಡಿಸಿವೆ. ಹೀಗಿದ್ದರೂ, ಭಾರತದಲ್ಲಿಯೇ, ಅರಿವಿದ್ದೋ, ಇಲ್ಲದೆಯೋ ನಿರಾಸೆಯ ಮಾತುಗಳು, ಕುಹಕಗಳು, ರಾಜಕೀಯ ಪ್ರೇರಿತ ಆರೋಪಗಳು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತವೆ.

ಆದರೆ ವಸ್ತುನಿಷ್ಠ ಸಂಗತಿ ಏನೆಂಬುದನ್ನು ಮರೆಮಾಚಲು ಸಾಧ್ಯವೇ ಇಲ್ಲ. ಅಂತಾರಾ ಷ್ಟ್ರೀಯ ಹಣಕಾಸು ನಿಧಿ ಪ್ರಕಾರವೇ, 2015-2025ರ ನಡುವೆ, ಭಾರತದ ಆರ್ಥಿಕತೆಯು ಶೇ.66ರಷ್ಟು ಬೆಳವಣಿಗೆ ದಾಖಲಿಸಿದೆ. ಈಗ ದೇಶವು 3.8 ಲಕ್ಷ ಕೋಟಿ ಡಾಲರ್ ಮೌಲ್ಯದ ಆರ್ಥಿಕತೆಯಾಗಿದೆ. ಹೀಗಾಗಿ 5 ಟ್ರಿಲಿಯನ್ ಡಾಲರ್ ಇಕಾನಮಿಯಾಗುವ ಸಾಧ್ಯತೆ ದೂರ ವಿಲ್ಲ.

ನಿಜ, ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಚೀನಾ, ಕೆನಡಾ, ಯುರೋಪ್ ವಿರುದ್ಧ ತೆರಿಗೆ ಸಮರ ಜಾರಿಗೊಳಿಸಿದ್ದಾರೆ. ಏಪ್ರಿಲ್ 2ರಿಂದ ಭಾರತದ ವಿರುದ್ಧವೂ ಕರಸಮರ ಆರಂಭವಾಗಲಿದೆ. ಆದರೆ ಇಂಥ ಸವಾಲುಗಳು ನಮ ಗೇನೂ ಹೊಸತಲ್ಲ.

ಕಳೆದೊಂದು ದಶಕದಿಂದ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ತಸ್ಸಿದ್ಧವಾಗಿದೆ. ಟ್ರಂಪ್ ತೆರಿಗೆಯಿಂದ ವರ್ಷಕ್ಕೆ 60 ಸಾವಿರ ಕೋಟಿ ರುಪಾಯಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆಯಾದರೂ ಭಾರತದ ಈಗಿನ ಇಕಾನಮಿಯ ಗಾತ್ರಕ್ಕೆ ಹೋಲಿಸಿದರೆ, ಇದು ಸಣ್ಣ ಮೊತ್ತ. ತಿಂಗಳೊಂದಕ್ಕೆ ಜಿಎಸ್‌ಟಿ ಸಂಗ್ರಹವೇ ಒಂದೂ ಮಕ್ಕಾಲು ಲಕ್ಷ ಕೋಟಿ ದಾಟುತ್ತಿರುವ ದೇಶವಿದು.

ಭಾರತದ ಉಜ್ವಲ ಮಾರುಕಟ್ಟೆ ಮತ್ತು ಸಾಧ್ಯತೆಗಳನ್ನು ಮನಗಂಡೇ ಇವತ್ತು ಪ್ರತಿ ರಾಷ್ಟ್ರ ವೂ ನಮ್ಮೊಂದಿಗೆ ಆರ್ಥಿಕ-ವಾಣಿಜ್ಯ ಒಪ್ಪಂದಗಳನ್ನು ಬಲಪಡಿಸಲು ಬಯಸುತ್ತಿವೆ. ಇದರ ಲಾಭವನ್ನು ನಮ್ಮ ಉದ್ಯಮ ವಲಯ ಪಡೆಯಬೇಕಾಗಿದೆ. ಅದೇ ರೀತಿ ದೇಶದ ಆರ್ಥಿಕ ಬೆಳವಣಿಗೆಯ ಪ್ರಯೋಜನವನ್ನು ಜನಸಾಮಾನ್ಯರೂ ತಮ್ಮದಾಗಿಸಿಕೊಳ್ಳ ಬೇಕಾಗಿದೆ.

ಇದು ಹೇಗೆನ್ನುತ್ತೀರಾ? ಇದಕ್ಕಾಗಿ ಹೆಚ್ಚೆಚ್ಚು ಜನರು ಉದ್ಯಮಶೀಲರಾಗಬೇಕು. ಸ್ವ-ಉದ್ಯೋಗಿಗಳಾಗಬೇಕು. ಒಂದು ವೇಳೆ ಉದ್ಯಮಿಯಾಗಲು ಸಾಧ್ಯವಿರದಿದ್ದರೆ, ಹಣಕಾಸು ಮಾರುಕಟ್ಟೆಗಳಾದ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಇಟಿಎಫ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಮೂಲಕವೂ ದೇಶದ ಆರ್ಥಿಕ ಅಭಿವೃದ್ಧಿಯ ಲಾಭವನ್ನು ಪಡೆಯ‌ ಬಹುದು.

ಹೀಗಾಗಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಹೇಗೆ ನೋಡುತ್ತಿದ್ದೀರಿ ಮತ್ತು ಅದರ ಲಾಭವನ್ನು ಪಡೆಯಬಲ್ಲಿರಿ ಎಂಬುದು ನಿರ್ಣಾಯಕ ಮತ್ತು ನಿಮ್ಮ ಬದುಕಿನಲ್ಲಿ ಪರಿಣಾ ಮಕಾರಿಯಾಗುತ್ತದೆ. ನೀವು ನಿರಾಶಾವಾದಿಗಳಾಗಿ ಭಾರತದ ಆರ್ಥಿಕತೆಯನ್ನು ಚೀನಾದ ಜತೆಗೆ ಹೋಲಿಸುತ್ತಾ, ಹಳಹಳಿಸಿದರೆ ಅದರಿಂದ ನಷ್ಟ ಚೀನಾ ಅಥವಾ ಭಾರತಕ್ಕಲ್ಲ, ಸ್ವತಃ ನಿಮಗೇ ಆಗಲಿದೆ ಎಂಬುದನ್ನು ಮರೆಯುವಂತಿಲ್ಲ.