CSK vs RR: ಚೆನ್ನೈ-ರಾಜಸ್ಥಾನ್ ಔಪಚಾರಿಕ ಪಂದ್ಯ
ಟೂರ್ನಿಯಿಂದ ಹೊರಬಿದ್ದಿರುವ ಸತ್ಯವನ್ನು ಅರಿತಿರುವ ಚೆನ್ನೈ, ಇದೀಗ ಮುಂದಿನ ಆವೃತ್ತಿಗಾಗಿ ಯುವ ಆಟಗಾರರರನ್ನು ಸಿದ್ಧಪಡಿಸಲು ಕಳೆದ ಕೆಲ ಪಂದ್ಯಗಳಿಂದ ಬೆಂಚ್ ಕಾಯುತ್ತಿದ್ದ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಈ ಮೂಲಕ ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ಕಾರ್ಯ ಮಾಡುತ್ತಿದೆ.


ನವದೆಹಲಿ: ಈವರೆಗೆ ಯಾವುದೇ ಮ್ಯಾಜಿಕ್ ಮಾಡದೆ 10 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್(CSK Vs RR) ಮತ್ತು ಕಳಪೆ ಪ್ರದರ್ಶನದಿಂದಲೇ ಸುದ್ದಿಯಾದ ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ಲೆಕ್ಕ ಭರ್ತಿಯ(IPL 2025) ಪಂದ್ಯವನ್ನು ಆಡಲಿವೆ. ಇತ್ತಂಡಗಳು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಈ ಪಂದ್ಯದಲ್ಲಿ ಯಾವುದೇ ಕುತೂಹಲ ಉಳಿದಿಲ್ಲ. ಇದೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯವಾಗಿದೆ.
ರಾಜಸ್ಥಾನ್ ರಾಯಲ್ಸ್‌ಗೆ ಇದು ಕೊನೆಯ ಲೀಗ್ ಪಂದ್ಯ. ಹೀಗಾಗಿ ಜಯದೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳುವುದಷ್ಟೇ ತಂಡಕ್ಕೆ ಈಗ ಉಳಿದಿರುವ ಅವಕಾಶವಾಗಿದೆ. ಬಲಿಷ್ಠ ಯುವ ಆಟಗಾರರನ್ನೂ ಹೊಂದಿಯೂ ಸ್ಥಿರ ಪ್ರದರ್ಶನ ತೋರುವಲ್ಲಿ ತಂಡ ವಿಫಲವಾಗಿದೆ. ಆಗಾಗ ಯಾರಾದರೊಬ್ಬರು ಸಿಡಿಯುತ್ತಾರೆಯೇ ಹೊರತು ಸಾಂಗಿಕ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಯತ್ನಿಸುತ್ತಿಲ್ಲ. ಒಂದು ಹಂತದ ವರೆಗೆ ಉತ್ತಮ ಪ್ರದರ್ಶನ ತೋರಿ ಹಠಾತ್ ಕುಸಿತ ಕಂಡು ಪಂದ್ಯವನ್ನು ಕೈಚೆಲ್ಲುವುದು ಹವ್ಯಾಸವಾಗಿದೆ. ಇದಕ್ಕೆ ಭಾನುವಾರದ ಪಂದ್ಯವೇ ಸಾಕ್ಷಿ. ಪಂಜಬ್ ವಿರುದ್ಧದ ಪಂದ್ಯದಲ್ಲಿ, ಅಬ್ಬರದ ಬ್ಯಾಟಿಂಗ್ ಮೂಲಕ ರನ್ ರಾಶಿ ಹಾಕಿದರೂ ಆ ಬಳಿಕ ನಾಟಕೀಯ ಕುಸಿತ ಕಂಡು 10 ರನ್ ಅಂತರದಿಂದ ಸೋಲು ಕಂಡಿತ್ತು.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ
ಅತ್ತ ಚೆನ್ನೈ ತಂಡದ ಸ್ಥಿತಿ ಕೂಡ ಇದೇ ಆಗಿದೆ. ಹಿರಿಯ ಅನುಭವಿ ಆಟಗಾರರಿದ್ದರೂ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ತೀರಾ ಕೆಳ ಮಟ್ಟದಲ್ಲಿದೆ. ಯಾರೋಬ್ಬರು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಟೂರ್ನಿಯಿಂದ ಹೊರಬಿದ್ದಿರುವ ಸತ್ಯವನ್ನು ಅರಿತಿರುವ ಚೆನ್ನೈ, ಇದೀಗ ಮುಂದಿನ ಆವೃತ್ತಿಗಾಗಿ ಯುವ ಆಟಗಾರರರನ್ನು ಸಿದ್ಧಪಡಿಸಲು ಕಳೆದ ಕೆಲ ಪಂದ್ಯಗಳಿಂದ ಬೆಂಚ್ ಕಾಯುತ್ತಿದ್ದ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಈ ಮೂಲಕ ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ಕಾರ್ಯ ಮಾಡುತ್ತಿದೆ.
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ಆಯುಷ್ ಮ್ಹಾತ್ರೆ, ಉರ್ವಿಲ್ ಪಟೇಲ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ), ಆರ್ ಅಶ್ವಿನ್, ಮಥೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್(ನಾಯಕ), ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್, ಧ್ರುವ್ ಜುರೆಲ್ (ವಿ.ಕೀ), ಶಿಮ್ರೋನ್ ಹೆಟ್ಮೆಯರ್, ಶುಭಂ ದುಬೆ, ವನಿಂದು ಹಸರಂಗ, ಕ್ವೇನಾ ಮಫಕಾ, ಮಹೇಶ್ ತೀಕ್ಷಣ, ಆಕಾಶ್ ಮಧ್ವಲ್.