People’s Education Society: ಬರೋಬ್ಬರಿ 110 ಕೋಟಿ ರೂ.ಗೆ ಬೆಂಗಳೂರಿನಲ್ಲಿ 2 ಮನೆ ಖರೀದಿಸಿದ ಪಿಇಎಸ್
Bengaluru Real Estate: ಪ್ರತಿಷ್ಠಿತ ವಿದ್ಯಾಸಂಸ್ಥೆ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ಬೆಂಗಳೂರಿನ ಸದಾಶಿವ ನಗರದಲ್ಲಿ ಬರೋಬ್ಬರಿ 110 ಕೋಟಿ ರೂ.ಗೆ 2 ಸ್ವತಂತ್ರ ಮನೆಗಳನ್ನು ಖರೀದಿಸಿದೆ. ಪಿಇಎಸ್ ವಿಶ್ವವಿದ್ಯಾಲಯವನ್ನು ನಡೆಸುತ್ತಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿ ಸದಾಶಿವ ನಗರ ಪ್ರದೇಶದಲ್ಲಿ ಈ ಮನೆಗಳನ್ನು 2025ರ ಜ. 22 ಮತ್ತು ಏ. 1ರಂದು ಖರೀದಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ (People’s Education Society) ಬೆಂಗಳೂರಿನ ಸದಾಶಿವ ನಗರದಲ್ಲಿ ಬರೋಬ್ಬರಿ 110 ಕೋಟಿ ರೂ.ಗೆ 2 ಸ್ವತಂತ್ರ ಮನೆಗಳನ್ನು ಖರೀದಿಸಿದೆ. Zapkey.com ನೀಡಿರುವ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಪಿಇಎಸ್ (PES) ವಿಶ್ವವಿದ್ಯಾಲಯವನ್ನು ನಡೆಸುತ್ತಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿ (PES), ಸದಾಶಿವ ನಗರ ಪ್ರದೇಶದಲ್ಲಿ ಈ ಮನೆಗಳನ್ನು ಖರೀದಿ ಮಾಡಿದೆ. ವಹಿವಾಟುಗಳನ್ನು 2025ರ ಜ. 22 ಮತ್ತು ಏ. 1 ನಡೆಸಲಾಗಿದೆ.
ಏ. 1ರ ವಹಿವಾಟು ಈ ವೇಳೆ ಸದಾಶಿವ ನಗರದ 2ನೇ ಮುಖ್ಯ ರಸ್ತೆಯಲ್ಲಿ 9,840 ಚದರ ಅಡಿ ವಿಸ್ತೀರ್ಣದ ಖಾಲಿ ವಸತಿ ಪ್ಲಾಟ್ ಖರೀದಿಸಲಾಗಿದೆ. ಈ ಆಸ್ತಿಯನ್ನು ವುಡ್‌ಕ್ರಾಫ್ಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನಿಂದ 55.5 ಕೋಟಿ ರೂ. ಸ್ವಾಧೀನಪಡಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
2025ರ ಜ. 22ರಂದು ನಡೆದ ಮತ್ತೊಂದು ವಹಿವಾಟಿನಲ್ಲಿ ಪಿಇಎಸ್ 2ನೇ ಮುಖ್ಯ ರಸ್ತೆಯಲ್ಲಿರುವ ಮತ್ತೊಂದು ಸ್ವತಂತ್ರ ಮನೆಯನ್ನು ಬಿಪಿಎಲ್ ಲಿಮಿಟೆಡ್‌ನಿಂದ 54.1 ಕೋಟಿ ರೂ.ಗೆ ಖರೀದಿಸಿರುವುದು ಕಂಡು ಬಂದಿದೆ. ಈ ಆಸ್ತಿಯು 9,840 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ಹೊಂದಿದೆ.
Sadashiva Nagar: People's Education Society(PES) buys two independent homes for ₹110 crore in Sadashiva Nagar
— Bangalore real estate (@Bangalorereal1) July 2, 2025
The first transaction, registered on April 1, 2025, involves the purchase of a vacant residential plot measuring 9,840 sq ft on 2nd Main Road, Sadashiva Nagar. The… pic.twitter.com/YeibvebNDc
ಈ ಸುದ್ದಿಯನ್ನೂ ಓದಿ: Dr. M.R. Doreswamy: ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ, ಮಾಜಿ ಎಂಎಲ್‌ಸಿ ಪ್ರೊ.ಎಂ.ಆರ್. ದೊರೆಸ್ವಾಮಿ ಇನ್ನಿಲ್ಲ
ಸದಾಶಿವನಗರವು ಉನ್ನತ ದರ್ಜೆಯ ವಸತಿ ಮೂಲ ಸೌಕರ್ಯಗಳಿಗೆ ಹೆಸರುವಾಸಿ. ಇದು ಕೇಂದ್ರ ಬೆಂಗಳೂರಿನ ಸಮೀಪದಲ್ಲೇ ಇರುವುದರಿಂದ ಬೇಡಿಕೆಯೂ ಹೆಚ್ಚುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪಿಇಎಸ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಭೌತಿಕ ಮೂಲಸೌಕರ್ಯ ಮತ್ತು ಕಾರ್ಯತಂತ್ರದ ವಿಸ್ತರಣೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ.
25 ಸಾವಿರ ವಿದ್ಯಾರ್ಥಿಗಳು
ಪೀಪಲ್ಸ್ ಎಜುಕೇಶನ್ ಸೊಸೈಟಿಯನ್ನು 1965ರಲ್ಲಿ ಸ್ಥಾಪಿಸಲಾಯಿತು. ಪಿಇಎಸ್ ವಿಶ್ವ ವಿದ್ಯಾಲಯವು ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಡಿಸೈನ್ಸ್ ಮತ್ತು ಜೀವ ವಿಜ್ಞಾನ...ಹೀಗೆ ವೈವಿಧ್ಯ ಕೋರ್ಸ್‌ಗಳ ಮೂಲಕ ಶಿಕ್ಷಣ ಒದಗಿಸುತ್ತಿದೆ. 5 ದಶಕಗಳ ಹಿಂದೆ ಅಂದರೆ 1973ರಲ್ಲಿ ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೊರೆಸ್ವಾಮಿ ಬಳಿಕ ಪೀಪಲ್ಸ್ ಎಜುಕೇಷನ್ ಸೊಸೈಟಿ ಎಂಬ ಬ್ರ್ಯಾಂಡ್ ಕಟ್ಟಿ, ಬೃಹದಾಕಾರವಾಗಿ ಬೆಳೆಸಿ ದೇಶ-ವಿದೇಶಗಳಲ್ಲಿ ಛಾಪು ಮೂಡಿಸಿದರು. 45 ವಿದ್ಯಾರ್ಥಿಗಳೊಂದಿಗೆ ಆರಂಭವಾದ ವಿದ್ಯಾ ಸಂಸ್ಥೆಯಲ್ಲಿ ಪ್ರಸ್ತುತ ಬರೋಬ್ಬರಿ 25 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. 6 ಸಾವಿರ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಪಿಇಎಸ್ ವಿವಿಯ 3 ಕ್ಯಾಂಪಸ್‌ಗಳಿವೆ. ಅವುಗಳೆಂದರೆ: ಪಿಇಎಸ್ ವಿವಿ- ರಿಂಗ್‌ರೋಡ್ ಕ್ಯಾಂಪಸ್, ಪಿಇಎಸ್ ವಿವಿ -ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ಮತ್ತು ಪಿಇಎಸ್ ವಿವಿ-ಹನುಮಂತ ನಗರ ಕ್ಯಾಂಪಸ್.
ಎಂಜಿನಿಯರಿಂಗ್ ಶಿಕ್ಷಣಕ್ಕೆ ಪಿಇಎಸ್ ಪ್ರಸಿದ್ಧ
1973ರಲ್ಲಿ ಪಿಯು ಕಾಲೇಜಿನಿಂದ ಆರಂಭವಾದ ಪಿಇಎಸ್ ಸಂಸ್ಥೆ ಇಂದು ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಬನಶಂಕರಿ 100 ಅಡಿ ರಸ್ತೆಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದೆ. ಆಂಧ್ರ ಪ್ರದೇಶದ ಕುಪಂನಲ್ಲಿ ಮೆಡಿಕಲ್ ಕಾಲೇಜು ಹೊಂದಿದೆ. ಎಂಜಿನಿಯರಿಂಗ್ ಶಿಕ್ಷಣಕ್ಕೆ ಪಿಇಎಸ್ ವಿವಿ ದೇಶದಲ್ಲೇ ಪ್ರಸಿದ್ಧ.