Shubman Gill: ಗಿಲ್ ದ್ವಿಶತಕದ ಆರ್ಭಟಕ್ಕೆ ಸಚಿನ್, ಕೊಹ್ಲಿ ಸೇರಿ ಹಲವರ ದಾಖಲೆ ಪತನ
ಗಿಲ್ ಅವರಿಗೂ ಮುನ್ನ ದ್ವಿತೀಯ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು. ಸಚಿನ್ 1999ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 26 ವರ್ಷ 189 ದಿನ ಇರುವಾಗ ಈ ಸಾಧನೆಗೈದಿದ್ದರು. ಮಾಜಿ ವಿರಾಟ್ ಕೊಹ್ಲಿ ಅವರು 27 ವರ್ಷದಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು. ಗಿಲ್ ಅವರ ಚೊಚ್ಚಲ ಟೆಸ್ಟ್ ದ್ವಿಶತಕ ಇದಾಗಿದೆ.


ಬರ್ಮಿಂಗ್‌ಹ್ಯಾಮ್: ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್(Shubman Gill) ಅವರು ಇಂಗ್ಲೆಂಡ್(IND vs ENG) ವಿರುದ್ಧದ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಕೂಡ ಮುರಿದಿದ್ದಾರೆ. ಜತೆಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ಭಾರತೀಯ ನಾಯಕ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಭಾರತದ ನಾಯಕನಾಗಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತದ ಕಿರಿಯ ಆಟಗಾರ ಎನಿಸಿಕೊಂಡರು. ದಾಖಲೆ ಮನ್ಸೂರ್ ಅಲಿ ಖಾನ್ ಪಟೌಡಿ ಹೆಸರಿನಲ್ಲಿದೆ. ಪಟೌಡಿ 23 ವರ್ಷ 39 ದಿನ ಇರುವಾಗ ನಾಯಕನಾಗಿ ಟೆಸ್ಟ್ ದ್ವಿಶತಕ ಬಾರಿಸಿದ್ದರು. ಅವರು ಕೂಡ ಈ ದಾಖಲೆಯನ್ನು ಇಂಗ್ಲೆಂಡ್ ವಿರುದ್ಧವೇ ನಿರ್ಮಿಸಿದ್ದರು. ಇದೀಗ ಗಿಲ್(25 ವರ್ಷ 298 ದಿನ) ಕೂಡ ಇಂಗ್ಲೆಂಡ್ ವಿರುದ್ಧವೇ ಈ ಸಾಧನೆ ಮಾಡಿದ್ದು ವಿಶೇಷ.
ಗಿಲ್ ಅವರಿಗೂ ಮುನ್ನ ದ್ವಿತೀಯ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದರು. ಸಚಿನ್ 1999ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 26 ವರ್ಷ 189 ದಿನ ಇರುವಾಗ ಈ ಸಾಧನೆಗೈದಿದ್ದರು. ಮಾಜಿ ವಿರಾಟ್ ಕೊಹ್ಲಿ ಅವರು 27 ವರ್ಷದಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು. ಗಿಲ್ ಅವರ ಚೊಚ್ಚಲ ಟೆಸ್ಟ್ ದ್ವಿಶತಕ ಇದಾಗಿದೆ. ಒಟ್ಟಾರೆಯಾಗಿ ದ್ವಿಶತಕ ಬಾರಿಸಿದ 6ನೇ ಭಾರತೀಯ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾದರು. ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಮೊದಲಿಗರು.
Leading from the front 🫡
— BCCI (@BCCI) July 3, 2025
First Indian Captain to register a double-century in Test cricket in England 👏👏
Updates ▶️ https://t.co/Oxhg97g4BF#ENGvIND | @ShubmanGill pic.twitter.com/Pm7pq7GRA9
2016 ರಲ್ಲಿ ನಾರ್ತ್ ಸೌಂಡ್‌ನಲ್ಲಿ ವಿರಾಟ್ ಕೊಹ್ಲಿ 200 ರನ್ ಗಳಿಸಿದ ನಂತರ, ವಿದೇಶಿ ಟೆಸ್ಟ್‌ನಲ್ಲಿ ಭಾರತದ ನಾಯಕನೊಬ್ಬ ಗಳಿಸಿದ ಎರಡನೇ ದ್ವಿಶತಕ ಇದಾಗಿದೆ. ಸೇನಾ ದೇಶಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ಏಷ್ಯಾದ ನಾಯಕ ಗಿಲ್ ಆಗಿದ್ದಾರೆ. 2011 ರಲ್ಲಿ ಲಾರ್ಡ್ಸ್‌ನಲ್ಲಿ ತಿಲಕರತ್ನೆ ದಿಲ್ಶನ್ 193 ರನ್ ಗಳಿಸಿದ್ದು ಇದುವರೆಗಿನ ಅತ್ಯಧಿಕ ರನ್ ದಾಖಲೆಯಾಗಿತ್ತು.
ಎಡ್ಜ್‌ಬಾಸ್ಟನ್ ಮೈದಾನದಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಕಿಂಗ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. 2018 ರಲ್ಲಿ ಕೊಹ್ಲಿ 149 ರನ್ ಗಳಿಸಿದ್ದರು. ಇದೀಗ ಗಿಲ್ ಅವರು ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.