ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravindra Jadeja: ದಿಗ್ಗಜ ಕಪಿಲ್‌ ದೇವ್‌ ದಾಖಲೆ ಸರಿಗಟ್ಟಿದ ರವೀಂದ್ರ ಜಡೇಜಾ

ಟೆಸ್ಟ್ ವೃತ್ತಿಜೀವನದ 22ನೇ ಅರ್ಧಶತಕ ಪೂರ್ಣಗೊಳಿಸಿದ ಜಡೇಜಾ ಇಂಗ್ಲೆಂಡ್ ನೆಲದಲ್ಲಿ 700ಕ್ಕೂ ಹೆಚ್ಚು ರನ್ ಹಾಗೂ 25 ವಿಕೆಟ್ ಪಡೆದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ದಾಖಲೆಗೂ ಭಾಜನರಾಗಿದ್ದಾರೆ. ಇದು ಮಾತ್ರವಲ್ಲದೆ 7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ದಿಗ್ಗಜ ಕಪಿಲ್‌ ದೇವ್‌ ದಾಖಲೆ ಸರಿಗಟ್ಟಿದ ರವೀಂದ್ರ ಜಡೇಜಾ

Profile Abhilash BC Jul 3, 2025 6:52 PM

ಬರ್ಮಿಂಗ್‌ಹ್ಯಾಮ್‌: ತಂಡದ ಸಂಕಷ್ಟದ ವೇಳೆ ನಾಯಕ ಶುಭಮನ್‌ ಗಿಲ್‌(Shubman Gill) ಜತೆಗೂಡಿ ಅರ್ಧಶತಕ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ(Ravindra Jadeja), ದಿಗ್ಗಜ ಆಟಗಾರ ಕಪಿಲ್‌ ದೇವ್‌(Kapil Dev) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 41 ರನ್‌ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಜಡೇಜಾ 89 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ಕೇವಲ 11 ರನ್‌ ಅಂತರದಿಂದ ಶತಕ ವಂಚಿತರಾದರು.

ಅರ್ಧಶತಕದ ಗಡಿ ದಾಟಿದ ಜಡೇಜಾ ಸೆನಾ ದೇಶಗಳಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಒಟ್ಟು 8 ಬಾರಿ ಐವತ್ತು ಪ್ಲಸ್ ಸ್ಕೋರ್‌ ಬಾರಿಸಿದ್ದಾರೆ. ಗಿಲ್‌ ಮತ್ತು ಜಡೇಜಾ ಜೋಡಿ 5ನೇ ವಿಕೆಟ್‌ಗೆ 203 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿತು. ಗಿಲ್‌ ಜತೆ ವಾಷಿಂಗ್ಟನ್‌ ಸುಂದರ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ವಿಶ್ವ ದಾಖಲೆ ಬರೆದ ಜಡೇಜಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ 2000 ಮತ್ತು 100 ವಿಕೆಟ್‌ಗಳನ್ನು ಕಿತ್ತ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. WTC ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 79 ರನ್‌ಗಳು ಬೇಕಾಗಿದ್ದವು.

ಟೆಸ್ಟ್ ವೃತ್ತಿಜೀವನದ 22ನೇ ಅರ್ಧಶತಕ ಪೂರ್ಣಗೊಳಿಸಿದ ಜಡೇಜಾ ಇಂಗ್ಲೆಂಡ್ ನೆಲದಲ್ಲಿ 700ಕ್ಕೂ ಹೆಚ್ಚು ರನ್ ಹಾಗೂ 25 ವಿಕೆಟ್ ಪಡೆದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ದಾಖಲೆಗೂ ಭಾಜನರಾಗಿದ್ದಾರೆ. ಇದು ಮಾತ್ರವಲ್ಲದೆ 7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಒಟ್ಟು 20 ಅರ್ಧಶತಕ ಬಾರಿಸಿದ್ದಾರೆ. 19 ಅರ್ಧಶತಕ ಬಾರಿಸಿದ್ದ ಪಾಕಿಸ್ತಾನದ ಸರ್ಫರಾಜ್ ಅಹ್ಮದ್‌ ದಾಖಲೆ ಪತನಗೊಂಡಿತು.

ಇದನ್ನೂ ಓದಿ IND vs ENG: ಆಕರ್ಷಕ ಅರ್ಧಶತಕ ಸಿಡಿಸಿ ಎರಡು ದೊಡ್ಡ ದಾಖಲೆ ಬರೆದ ರವೀಂದ್ರ ಜಡೇಜಾ!

ಮೊದಲ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಸಂಪೂರ್ಣ ವೈಫಲ್ಯ ಕಂಡಿದ್ದ ಜಡೇಜಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ ದ್ವಿತೀಯ ಟೆಸ್ಟ್‌ನಿಂದ ಅವರನ್ನು ಕೈಬಿಡುವಂತೆ ಆಗ್ರಹಿಸಲಾಗಿತ್ತು. ಆದರೆ ಇದೀಗ ಜಡೇಜಾ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ತೋರುವ ಮೂಲಕ ಎಲ್ಲ ಟೀಕೆಗೆ ಉತ್ತರ ನೀಡಿದ್ದಾರೆ.