ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test: ಗಿಲ್‌ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದ್ದಲ್ಲಿಂದ ಆಟ ಮುಂದುವರಿಸಿದ ಭಾರತ ತಂಡವು ಭರ್ತಿ 587 ರನ್ ಗಳಿಸಿತು. ಇದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರವಾಸಿ ತಂಡವೊಂದು ಟೆಸ್ಟ್‌ನಲ್ಲಿ 500 ರನ್ ದಾಟಿದ ಆರನೇ ನಿದರ್ಶನ.

ಗಿಲ್‌ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

Profile Abhilash BC Jul 3, 2025 11:16 PM

ಬರ್ಮಿಂಗ್‌ಹ್ಯಾಮ್‌: ನಾಯಕ ಶುಭಮನ್‌ ಗಿಲ್‌(269) ಅವರ ದಾಖಲೆಯ ದ್ವಿಶತಕ ಹಾಹೂ ಆ ಬಳಿಕ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿದ ಸಾಧಿಸಿದೆ. ಭಾರತದ ಬೃಹತ್‌ ಮೊತ್ತ ಬೆನ್ನಟ್ಟುತ್ತಿರುವ ಇಂಗ್ಲೆಂಡ್‌ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 77 ರನ್‌ ಗಳಿಸಿ ಇನ್ನೂ 510ರನ್‌ ಹಿನ್ನಡೆಯಲ್ಲಿದೆ. ಹ್ಯಾರಿ ಬ್ರೂಕ್‌(30) ಮತ್ತು ಜೋ ರೂಟ್‌(18) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದ್ದಲ್ಲಿಂದ ಆಟ ಮುಂದುವರಿಸಿದ ಭಾರತ ತಂಡವು ಭರ್ತಿ 587 ರನ್ ಗಳಿಸಿತು. ಇದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರವಾಸಿ ತಂಡವೊಂದು ಟೆಸ್ಟ್‌ನಲ್ಲಿ 500 ರನ್ ದಾಟಿದ ಆರನೇ ನಿದರ್ಶನ.



ದ್ವಿತೀಯ ದಿನವೂ ಗಿಲ್‌ ಮತ್ತು ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಸರೆಯಾದರು. ಉಭಯ ಆಟಗಾರರು ಸೇರಿಕೊಂಡು ಒಟ್ಟು 5ನೇ ವಿಕೆಟ್‌ಗೆ 203 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿತು. 41 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಜಡೇಜ 89 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ಕೇವಲ 11 ರನ್‌ ಅಂತರದಿಂದ ಶತಕ ವಂಚಿತರಾದರು. 2022ರಲ್ಲಿ ಜಡೇಜಾ ಇದೇ ಮೈದಾನದಲ್ಲಿ ಶತಕ ಬಾರಿಸಿ ಮಿಂಚಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 2000 ಮತ್ತು 100 ವಿಕೆಟ್‌ಗಳನ್ನು ಕಿತ್ತ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. ಈ ಮೈಲುಗಲ್ಲು ತಲುಪಲು ಅವರಿಗೆ 79 ರನ್‌ಗಳು ಬೇಕಾಗಿದ್ದವು.

ಗಿಲ್‌ ಚೊಚ್ಚಲ ದ್ವಿಶತಕ

ಮೊದಲ ದಿನ ಶತಕ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಶುಭಮನ್‌ ಗಿಲ್‌ 2ನೇ ದಿನದಾಟದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ದ್ವಿಶತಕ ಬಾರಿಸಿ ಹಲವು ದಾಖಲೆ ಬರೆದರು. ಟೆಸ್ಟ್‌ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಬಾರಿಸಿದ ಅವರು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ಭಾರತೀಯ ನಾಯಕ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು. ಅಲ್ಲದೆ ಭಾರತದ ನಾಯಕನಾಗಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತದ ಕಿರಿಯ ಆಟಗಾರ ಎನಿಸಿಕೊಂಡರು. ದಾಖಲೆ ಮನ್ಸೂರ್‌ ಅಲಿ ಖಾನ್‌ ಪಟೌಡಿ( 23 ವರ್ಷ 39 ದಿನ) ಹೆಸರಿನಲ್ಲಿದೆ. ಗಿಲ್‌ 25 ವರ್ಷ 298 ದಿನದಲ್ಲಿ ಈ ಮೈಲುಗಲ್ಲು ತಲುಪಿದರು.



8ನೇ ವಿಕೆಟ್‌ ತನಕ ಬ್ಯಾಟಿಂಗ್‌ ನಡೆಸಿದ ಗಿಲ್‌ ಅಂತಿಮವಾಗಿ 387 ಎಸೆತಗಳಿಂದ 30 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 269 ರನ್‌ ಬಾರಿಸಿದರು. ಈ ಮೂಲಕ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಗಿಲ್‌ ಪಾತ್ರರಾದರು. ಇದುವರೆಗೂ ಈ ದಾಖಲೆ ಕಿಂಗ್‌ ವಿರಾಟ್‌ ಕೊಹ್ಲಿಯ ಹೆಸರಿನಲ್ಲಿತ್ತು. 2018 ರಲ್ಲಿ ಕೊಹ್ಲಿ 149 ರನ್ ಗಳಿಸಿದ್ದರು.

ಗಿಲ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್‌ ನೀಡಿದ ವಾಷಿಂಗ್ಟನ್‌ ಸುಂದರ್‌ 42 ರನ್‌ ಕೊಡುಗೆ ಸಲ್ಲಿಸಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇಂಗ್ಲೆಂಡ್‌ ಪರ ಸ್ಪಿನ್ನರ್‌ ಶೋಯೆಬ್ ಬಶೀರ್ 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಜೋಶ್‌ ಟಂಗ್‌ ತಲಾ 2 ವಿಕೆಟ್‌ ಪಡೆದರು.