ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Hara Veera Mallu: ಪವನ್ ಕಲ್ಯಾಣ್ ಚಿತ್ರದ ಟ್ರೈಲರ್ ಸ್ಕ್ರೀನಿಂಗ್‌ಗೆ ನಿರೀಕ್ಷೆಗೂ ಮೀರಿ ಜನದಟ್ಟಣೆ; ಕಾರ್ಯಕ್ರಮವೇ ರದ್ದು

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಹರಿಹರ ವೀರಮಲ್ಲು ಸಿನಿಮಾ ಟ್ರೈಲರ್ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಹೈದರಾಬಾದ್‌ನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಲ್ಲಿ ಪ್ರದರ್ಶನ ಮಾಡುವುದು ಕಾಲ್ತುಳಿತ ಇತ್ಯಾದಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಮನಗಂಡು ಕೂಡಲೇ ಚಿತ್ರತಂಡ ರದ್ದು ಗೊಳಿಸುವ ನಿರ್ಧಾರ ಕೈಗೊಂಡಿದೆ...

ಟ್ರೈಲರ್ ಸ್ಕ್ರೀನಿಂಗ್ ರದ್ದುಗೊಳಿಸಿದ ʼಹರಿ ಹರ ವೀರಮಲ್ಲುʼ ಚಿತ್ರತಂಡ

Hari Hara Veera Mallu

Profile Pushpa Kumari Jul 3, 2025 8:16 PM

ಹೈದರಾಬಾದ್: ಸಿನಿಮಾ ನೋಡಲು ಪ್ರೇಕ್ಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಸಾರ್ವಜನಿಕರ ಸಮ್ಮುಖದಲ್ಲಿ ಸಿನಿಮಾ ಟ್ರೈಲರ್ , ಟೀಸರ್ ಬಿಡುಗಡೆ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ. ಅಂತೆಯೇ ಟಾಲಿವುಡ್‌ ಸ್ಟಾರ್‌ ಪವನ್‌ ಕಲ್ಯಾಣ್‌ (Pawan Kalyan) ನಟನೆಯ 'ಹರಿ ಹರ ವೀರಮಲ್ಲು' (Hari Hara Veera Mallu) ಚಿತ್ರತಂಡ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೈಲರ್ ಸ್ಕ್ರೀನಿಂಗ್ ಮಾಡುವುದಾಗಿ ತಿಳಿಸಿತ್ತು. ಹೈದರಾಬಾದ್‌ನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಚಿತ್ರತಂಡಕ್ಕೆ ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾಯಿತು.

ಹೌದು, ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ʼಹರಿ ಹರ ವೀರಮಲ್ಲುʼ ಸಿನಿಮಾ ಟ್ರೈಲರ್ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಹೈದರಾಬಾದ್‌ನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ಆಯೋಜಿ ಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಲ್ಲಿ ಪ್ರದರ್ಶನ ಮಾಡುವುದು ಕಾಲ್ತುಳಿತ ಇತ್ಯಾದಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಮನಗಂಡು ಕೂಡಲೇ ಚಿತ್ರತಂಡ ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು.

ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ

ಜನಸಂದಣಿ ನಿಯಂತ್ರಣ ಮೀರಿ ಹೆಚ್ಚಾದಾಗ, ಸ್ಥಳೀಯ ಪೊಲೀಸರು ಸಾರ್ವಜನಿಕ ಸುರಕ್ಷತೆಗೆ ಬೇಕಾದ ಅಗತ್ಯಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಸಂಧ್ಯಾ ಥಿಯೇಟರ್‌ನಲ್ಲಿ ಪ್ರದರ್ಶನ ರದ್ದಾದರೂ ಹೈದರಾಬಾದ್‌ನಾದ್ಯಂತ ಆಯ್ದ ಸ್ಥಳಗಳಲ್ಲಿ ʼಹರಿ ಹರ ವೀರ ಮಲ್ಲುʼ ಚಿತ್ರದ ಟ್ರೈಲರ್ ಪ್ರದರ್ಶನ ಮಾಡಲಾಗಿದೆ. ಇನ್ನು ಈ ಸಿನಿಮಾ ಇವೆಂಟ್‌ಗೆ ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿದ್ದ ಕಾರಣ ರಿಲೀಸ್‌ಗೂ ಮೊದಲೇ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ‌.

ಇತ್ತೀಚೆಗಷ್ಟೆ ʼಪುಷ್ಪ 2ʼ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಥಿಯೇಟರ್ ಒಂದರಲ್ಲಿ ಜನದಟ್ಟಣೆ ಏರ್ಪಟ್ಟು ಕಾಲ್ತುಳಿತದಿಂದ ಮಹಿಳೆ ಸಾವನಪ್ಪಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅದೇ ಪರಿಸ್ಥಿತಿ ಪುನರಾವರ್ತಿತವಾಗಬಾರದು ಎಂದು ಚಿತ್ರತಂಡವು ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪವನ್ ಕಲ್ಯಾಣ್ ಅವರ ʼಹರಿ ಹರ ವೀರಮಲ್ಲುʼ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. 16ನೇ ಶತಮಾನದ ಮೊಘಲರ ಆಳ್ವಿಕೆಯ ಕಾಲಘಟ್ಟದ ಕಥೆ ಇರುವ ಚಿತ್ರಕ್ಕೆ ಕ್ರಿಶ್ ಹಾಗೂ ಜೋತಿಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ನರ್ಗೀಸ್ ಫಕ್ರಿ, ಬಾಬಿ ಡಿಯೋಲ್, ನಿಧಿ ಅಗರ್‌ವಾಲ್, ಸತ್ಯರಾಜ್ ಸೇರಿ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.