ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಬ್ಬಾ... ಈಕೆ ಎಂಥಾ ರಾಕ್ಷಸಿ! ತಾನೇ ಸಾಕಿದ್ದ ಬೆಕ್ಕಿನ ಮೇಲೆ ಇದೆಂಥಾ ಕ್ರೌರ್ಯ?

ಮಹಿಳೆಯೊಬ್ಬಳು ತನ್ನ ಸಾಕು ಬೆಕ್ಕಿನ ಮೇಲೆ ಕ್ರೂರವಾಗಿ ದೌರ್ಜನ್ಯ ನಡೆಸಿ ಅದನ್ನು ಪದೇ ಪದೆ ಎತ್ತಿ ನೆಲಕ್ಕೆ ಹೊಡೆದಿದ್ದಾಳೆ. ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದ್ದು ಅನೇಕರು ಮಹಿಳೆಯ ಕ್ರೂರ ಕೃತ್ಯಗಳನ್ನು ಖಂಡಿಸಿದ್ದಾರೆ.

ಬೆಕ್ಕಿನ ಮೇಲೆ ಇದೆಂಥಾ ಕ್ರೌರ್ಯ? ಈ ರಣ ರಾಕ್ಷಸಿಯ ವಿಡಿಯೊ ಇಲ್ಲಿದೆ

Profile pavithra Jul 3, 2025 5:27 PM

ಪ್ರಾಣಿಹಿಂಸೆಯ ವಿಡಿಯೊಗಳು ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಪುಣೆಯಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ಬೆಕ್ಕಿನ(Cat) ಮೇಲೆ ಕ್ರೂರವಾಗಿ ದೌರ್ಜನ್ಯ ನಡೆಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಮಹಿಳೆಯ ಮೇಲೆ ಕಿಡಿಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಮಹಿಳೆ ಬೆಕ್ಕನ್ನು ಪದೇ ಪದೇ ನೆಲಕ್ಕೆ ಹೊಡೆದು, ನಂತರ ಅದನ್ನು ಗಾಳಿಯಲ್ಲಿ ಎಸೆದ ದೃಶ್ಯ ಸೆರೆಯಾಗಿದೆ.

ವಿಡಿಯೊದಲ್ಲಿ, ಮಹಿಳೆ ಕಾರಿಡಾರ್‌ನಲ್ಲಿ ತನ್ನ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದ ಬೆಕ್ಕನ್ನು ಕ್ರೂರವಾಗಿ ಹಿಂಸಿಸುವುದು ಕಂಡುಬಂದಿದೆ. ಕೋಪಗೊಂಡ ಅವಳು ಬೆಕ್ಕನ್ನು ಹಲವು ಬಾರಿ ನೆಲಕ್ಕೆ ಹೊಡೆದು ಎಸೆದಿದ್ದಾಳೆ.ಮಹಿಳೆಯ ವರ್ತನೆಯಿಂದ ಹೆದರಿದ ಬೆಕ್ಕು ಅಲ್ಲಿಂದ ಓಡಿಹೋಗಿದೆ. ಆದರೆ ಮಹಿಳೆ ಅದನ್ನು ಹಿಂಬಾಲಿಸಿಕೊಂಡು ಹೋಗಿ ಮತ್ತೆ ಅದನ್ನು ಕೈಯಲ್ಲಿ ಹಿಡಿದು ಹೊಡೆದು ಎಸೆದಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...

ಆಕೆಯ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆಯಂತೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನೆಟ್ಟಿಗರು ಮಹಿಳೆಯ ಕ್ರೂರ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಒಬ್ಬರು, "ಅವಳನ್ನು ನೋಡಿ! ಅವಳಿಗೆ ಏನಾಗಿದೆ? ಅವಳು ಮಾನಸಿಕವಾಗಿ ಅಸ್ವಸ್ಥಳು. ಸರಿಯಾದ ಮನಸ್ಥಿತಿಯಲ್ಲಿರುವವರು ಈ ರೀತಿ ತಮ್ಮ ಹತಾಶೆಯನ್ನು ಪ್ರಾಣಿಯ ಮೇಲೆ ತೋರಿಸುವುದಿಲ್ಲ” ಎಂದು ಹೇಳಿದ್ದಾರೆ.

"ಇದು ತುಂಬಾ ತಪ್ಪು, ಇಂತಹವರಿಗೆ ಸೂಕ್ತ ಶಿಕ್ಷೆಯಾಗಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ."ಪ್ರಾಣಿ ಅಥವಾ ಮಕ್ಕಳ ಮೇಲಿನ ದೌರ್ಜನ್ಯ ನಡೆಸುವವರ ಗುರುತನ್ನು ಎಂದಿಗೂ ಮರೆಮಾಡಬೇಡಿ. ಅವರು ಯಾವಾಗಲೂ ಬಹಿರಂಗಗೊಳ್ಳಲು ಅರ್ಹರು" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: 60 ಸೆಕೆಂಡ್‌... 20 ಲಕ್ಷದ ಕಾರು ಮಂಗಮಾಯ! ಶಾಕಿಂಗ್‌ ವಿಡಿಯೊ ಇಲ್ಲಿದೆ

ಬೆಕ್ಕಿನ ಸಾವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ 35 ವರ್ಷದ ಪೂಜಾ ಎಂಬ ಮಹಿಳೆ ತಾನು ಸಾಕಿದ ಪ್ರೀತಿಯ ಬೆಕ್ಕಿನ ಸಾವನ್ನು ಸಹಿಸಲಾಗದೇ ಅದು ಸತ್ತ ಮೂರನೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಕ್ಕು ಸತ್ತ ನಂತರ ಮೂರು ದಿನಗಳವರೆಗೆ ಅದರ ದೇಹವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದ ಪೂಜಾ ಕೊನೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಸನ್ಪುರ ಪಟ್ಟಣದ ರಾಹ್ರಾ ರಸ್ತೆಯಲ್ಲಿರುವ ಶಿವ ದೇವಾಲಯದ ಬಳಿ ವಾಸಿಸುತ್ತಿದ್ದ ಪೂಜಾ ಒಂದು ಬೆಕ್ಕಿನ ಮರಿಯನ್ನು ಪ್ರೀತಿಯಿಂದ ಸಾಕಿದ್ದಳು. ಆದರೆ ಇತ್ತೀಚೆಗೆ ಅದು ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಈ ಘಟನೆಯನ್ನು ಸಹಿಸಲಾಗದ ಪೂಜಾ ಕೂಡ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.