Reserve Bank Of India: ಗೃಹ ಸಾಲ ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್; RBI ಹೊಸ ನಿಯಮ ನೋಡಿ
ಗೃಹ ಸಾಲ ಪಡೆಯಬೇಕೆಂದಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ದೊರೆತಿದೆ. ಸಾಲವನ್ನು ಅವಧಿಗಿಂತ ಮುನ್ನ ತೀರಿಸಲು ನೀವು ಹೆಚ್ಚುವರಿ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಮುಂದಿನ ವರ್ಷದಿಂದ ಫ್ಲೋಟಿಂಗ್ ರೇಟ್ನಲ್ಲಿ (floating rate) ಪಡೆದ ಸಾಲಗಳಿಗೆ ಪ್ರೀಪೇಮೆಂಟ್ ಶುಲ್ಕ (Prepayment charge) ವಿಧಿಸುವಂತಿಲ್ಲ ಎಂದು ಆರ್‌ಬಿಐ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.


ಬೆಂಗಳೂರು: ಗೃಹ ಸಾಲ ಪಡೆಯಬೇಕೆಂದಿರುವ ಗ್ರಾಹಕರಿಗೆ ಸಿಹಿ (Reserve Bank Of India) ಸುದ್ದಿಯೊಂದು ದೊರೆತಿದೆ. ಸಾಲವನ್ನು ಅವಧಿಗಿಂತ ಮುನ್ನ ತೀರಿಸಲು ನೀವು ಹೆಚ್ಚುವರಿ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಮುಂದಿನ ವರ್ಷದಿಂದ ಫ್ಲೋಟಿಂಗ್ ರೇಟ್ನಲ್ಲಿ (floating rate) ಪಡೆದ ಸಾಲಗಳಿಗೆ ಪ್ರೀಪೇಮೆಂಟ್ ಶುಲ್ಕ (Prepayment charge) ವಿಧಿಸುವಂತಿಲ್ಲ ಎಂದು ಆರ್‌ಬಿಐ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. 2026ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ. 2026ರ ಜನವರಿ 1 ಹಾಗೂ ನಂತರ ಪಡೆಯುವ ಸಾಲ ಹಾಗೂ ರಿನಿವಲ್ಗೆ ಈ ಪ್ರೀಪೇಮೆಂಟ್ ಶುಲ್ಕ ವಿನಾಯಿತಿ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಫ್ಲೋಟಿಂಗ್ ಇಂಟರೆಸ್ಟ್ ರೇಟ್ನಲ್ಲಿ ಪಡೆದ ಗೃಹಸಾಲ ಹಾಗೂ ಇತರ ಸಾಲಗಳಿಗೆ ಇದು ಅನ್ವಯ ಆಗುತ್ತದೆ. ಎಲ್ಲಾ ಬ್ಯಾಂಕು, ಎನ್ಬಿಐಎಫ್ಸಿ ಇತ್ಯಾದಿ ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಹೊಸ ನಿಯಮದ ಬಗ್ಗೆ ಸೂಚನೆ ನೀಡಿದೆ. ಬ್ಯುಸಿನೆಸ್ ಲೋನ್ಗಳಿಗೆ ಇದು ಅನ್ವಯಿಸುವುದಿಲ್ಲ. ಫ್ಲೋಟಿಂಗ್ ರೇಟ್ ಲೋನ್ ಎಂದರೆ, ಬ್ಯಾಂಕ್ ನೀಡುವ ಸಾಲಕ್ಕೆ ಬಡ್ಡಿದರವು ಬಾಹ್ಯ ಪ್ರಭಾವದಿಂದ ಬದಲಾಗುವ ಅವಕಾಶ ಇರುತ್ತದೆ. ಆರ್ಬೀಐನ ರೆಪೋ ಇತ್ಯಾದಿ ಬೆಂಚ್ ಮಾರ್ಕ್ ರೇಟ್ ಬದಲಾದಾಗ ಬ್ಯಾಂಕುಗಳು ಸಾಲದ ದರಗಳನ್ನು ಬದಲಿಸುತ್ತವೆ. ಫಿಕ್ಸೆಡ್ ರೇಟ್ ಲೋನ್ನಲ್ಲಿ ಇದು ಇರುವುದಿಲ್ಲ. ಒಮ್ಮೆ ಬಡ್ಡಿ ಫಿಕ್ಸ್ ಆದರೆ ಸಾಲ ತೀರುವವರೆಗೂ ಅದೇ ಬಡ್ಡಿದರ ಇರುತ್ತದೆ.
ನಿಯಮ ಯಾವ ಸಾಲಗಳಿಗೆ ಅನ್ವಯಿಸುತ್ತದೆ?
ಈ ಹೊಸ ನಿಯಮವು ಜನವರಿ 1, 2026 ರಂದು ಅಥವಾ ನಂತರ ಅನುಮೋದಿಸಲಾಗುವ ಅಥವಾ ನವೀಕರಿಸಲಾಗುವ ತೇಲುವ ದರದ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಆರ್‌ಬಿಐ ಎಲ್ಲಾ ಬ್ಯಾಂಕುಗಳು ಮತ್ತು ನಿಯಂತ್ರಿತ ಘಟಕಗಳಿಗೆ (ಆರ್‌ಇಗಳು) ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) ಸ್ಪಷ್ಟ ಸೂಚನೆಗಳನ್ನು ನೀಡಿದೆ. ವಾಣಿಜ್ಯ ಬ್ಯಾಂಕುಗಳು ವೈಯಕ್ತಿಕ ವ್ಯವಹಾರಗಳು ಅಥವಾ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (MSEs) ನೀಡಲಾಗುವ ಫ್ಲೋಟಿಂಗ್ ದರ ಸಾಲಗಳಿಗೆ ಪೂರ್ವಪಾವತಿ ಶುಲ್ಕವನ್ನು ವಿಧಿಸದಂತೆ ನಿರ್ದೇಶಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಮೊಬೈಲ್ ವಾಣಿಜ್ಯವನ್ನು ಪುನರ್ ವ್ಯಾಖ್ಯಾನಿಸಲು Glance ಮತ್ತು Samsung Galaxy Store ಪಾಲುದಾರಿಕೆ: ಅಮೆರಿಕದ ಸ್ಯಾಮ್ಸಂಗ್ ಬಳಕೆದಾರರಿಗೆ ಹೊಸ AI ಶಾಪಿಂಗ್ ಅನುಭವ ಆರಂಭ
ಆದಾಗ್ಯೂ, ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಇತ್ಯಾದಿಗಳಂತಹ ಕೆಲವು ಬ್ಯಾಂಕುಗಳು ಈ ವ್ಯಾಪ್ತಿಯಿಂದ ಹೊರಗಿವೆ. ಈ ಸಂಸ್ಥೆಗಳು ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, NBFC-ML ನಂತಹ 50 ಲಕ್ಷ ರೂ.ಗಳವರೆಗಿನ ಸಾಲಗಳಿಗೆ ಸಾಲ ನೀಡಿದರೆ, ಪೂರ್ವಪಾವತಿ ಶುಲ್ಕವನ್ನು ಸಹ ವಿಧಿಸಲಾಗುವುದಿಲ್ಲ.