ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಮುದ್ದು ಸೊಸೆ, ಭಾಗ್ಯ ಲಕ್ಷ್ಮೀ ಹಿಂದಿಕ್ಕಿ ನಂಬರ್ ಒನ್ ಧಾರಾವಾಹಿಯಾದ ಭಾರ್ಗವಿ ಎಲ್.ಎಲ್.ಬಿ

ಕಳೆದ ಕೆಲವು ಸಮಯದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಅಥವಾ ಮುದ್ದು ಸೊಸೆ ಧಾರಾವಾಹಿಗಳು ನಂಬರ್ 1 ಸ್ಥಾನದಲ್ಲಿ ಇರುತ್ತಿತ್ತು. ಆದರೀಗ ಶಾಕಿಂಗ್ ಎಂಬಂತೆ, ನಂಬರ್ 1 ಸ್ಥಾನಕ್ಕೆ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಬಂದಿದೆ.

ನಂಬರ್ ಒನ್ ಧಾರಾವಾಹಿಯಾದ ಭಾರ್ಗವಿ ಎಲ್.ಎಲ್.ಬಿ

Bhargavi LLB

Profile Vinay Bhat Jul 4, 2025 3:49 PM

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial TRP) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಇದೀಗ 25ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾರ್ಗವಿ ಎಲ್​ಎಲ್​ಬಿ ಧಾರಾವಾಹಿ ಹೊಸ ದಾಖಲೆ ಬರೆದಿದೆ.

ಕಳೆದ ಕೆಲವು ಸಮಯದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಅಥವಾ ಮುದ್ದು ಸೊಸೆ ಧಾರಾವಾಹಿಗಳು ನಂಬರ್ 1 ಸ್ಥಾನದಲ್ಲಿ ಇರುತ್ತಿತ್ತು. ಆದರೀಗ ಶಾಕಿಂಗ್ ಎಂಬಂತೆ, ನಂಬರ್ 1 ಸ್ಥಾನಕ್ಕೆ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಬಂದಿದೆ. ಇದು 4.9 ರೇಟಿಂಗ್ ಪಡೆದುಕೊಂಡು ಕಲರ್ಸ್​ನ ನಂಬರ್ ಒನ್ ಧಾರಾವಾಹಿ ಆಗಿದೆ. ಎರಡನೇ ಸ್ಥಾನದಲ್ಲಿ ಮುದ್ದು ಸೊಸೆ, ಮೂರನೇ ಸ್ಥಾನದಲ್ಲಿ ನಿನಗಾಗಿ, ನಾಲ್ಕನೇ ಸ್ಥಾನದಲ್ಲಿ ನಂದಗೋಕುಲ ಇದ್ದರೆ ಭಾಗ್ಯ ಲಕ್ಷ್ಮೀ ಐದನೇ ಸ್ಥಾನಕ್ಕೆ ಕುಸಿದಿದೆ.

ಇನ್ನು ಒಟ್ಟಾರೆಯಾಗಿ ನೋಡುವುದಾದರೆ, 25ನೇ ವಾರದ ನಂಬರ್ ಧಾರಾವಾಹಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಆಗಿದೆ. ಇದು 9.1 ಟಿವಿಆರ್ ಮೂಲಕ ಟಾಪ್​ನಲ್ಲಿದೆ. ಈ ಧಾರಾವಾಹಿ ಇಷ್ಟು ದಿನ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಕಳೆದ ಎರಡು ವಾರದಿಂದ ಟಾಪ್ ಒಂದಕ್ಕೆ ಬಂದಿದೆ. 8.9 ಟಿವಿಆರ್‌ ದಾಖಲಿಸುವ ಮೂಲಕ ನಾ ನಿನ್ನ ಬಿಡಲಾರೆ ಸೀರಿಯಲ್‌ ಎರಡನೇ ಸ್ಥಾನ ಗಿಟ್ಟಿಸಿದೆ.

Bhagya Lakshmi Serial: ಕಿಶನ್ ತುಲಾಭಾರದಲ್ಲಿ ಭಾಗ್ಯ ಯಶಸ್ವಿ: ಮೀನಾಕ್ಷಿ-ಕನ್ನಿಕಾಗೆ ಮುಖಭಂಗ

ಅಣ್ಣಯ್ಯ ಧಾರಾವಾಹಿ 8.2 ಟಿವಿಆರ್‌ನೊಂದಿಗೆ ಮೂರನೇ, ಲಕ್ಷ್ಮೀ ನಿವಾಸ 8.1 ಟಿವಿಆರ್‌ನೊಂದಿಗೆ ನಾಲ್ಕನೇ ಸ್ಥಾನ ಮತ್ತು ಐದನೇ ಸ್ಥಾನದಲ್ಲಿ 7.9 ಟಿವಿಆರ್‌ನೊಂದಿಗೆ ಅಮೃತಧಾರೆ ಸೀರಿಯಲ್‌ ಇದೆ. ಇನ್ನೊಂದು ವಿಶೇಷ ಎಂದರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ನಿನ್ನ ಕಥೆ ನನ್ನ ಜೊತೆ ಇದೀಗ ಅರ್ಬನ್ + ರೂರಲ್‌ ಪ್ರದೇಶದಲ್ಲಿ 5.7 ಟಿವಿಆರ್‌ ಪಡೆದಿದೆ.

ಇನ್ನು ಮಹಾನಟಿ ಸೀಸನ್ 2 ಕಾರ್ಯಕ್ರಮದ ಲಾಂಚ್‌ ಎಪಿಸೋಡ್‌ಗೆ ಗ್ರಾಮೀಣ ಭಾಗದಲ್ಲಿ 10.5 ಟಿವಿಆರ್‌ ಲಭಿಸಿ ದಾಖಲೆ ಬರೆದಿತ್ತು. ಇದೀಗ ಎರಡನೇ ವಾರ ಕೂಡ ಈ ಶೋಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ. ಮಹಾನಟಿ ಶೋಗೆ 7.7 ಟಿವಿಆರ್ ಬಂದಿದೆ. ಹಾಗೆಯೆ ಭರ್ಜರಿ ಬ್ಯಾಚುಲರ್ಸ್ ಶೋಗೆ 8.2 ಟಿವಿಆರ್‌ ಮತ್ತು ಕಲರ್ಸ್​ನ ಹೊ ಕ್ವಾಟ್ಲೆ ಕಿಚನ್ ಕಾರ್ಯಕ್ರಮಕ್ಕೆ 3.1 ಟಿವಿಆರ್‌ ಲಭಿಸಿದೆ.