Betting App Scam: ಮದ್ವೆ ಮಂಟಪಕ್ಕೆ ನುಗ್ಗಿದ ಇಡಿ ಅಧಿಕಾರಿಗಳು; ಸಪ್ತಪದಿ ತುಳಿಯುವ ಮುನ್ನ ವರ ಎಸ್ಕೇಪ್!
ಬಹುಕೋಟಿ ಮೌಲ್ಯದ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿಯಿಂದ ತಪ್ಪಿಸಿಕೊಳ್ಳಲು ವರನೊಬ್ಬನು ತನ್ನ ಮದುವೆಮಂಟಪದಿಂದ ಓಡಿಹೋಗಿದ್ದಾನೆ.5,000 ಕೋಟಿ ರೂ.ಗಳ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು. ಪ್ರಕರಣದಲ್ಲಿ ವರನು ಬೇಕಾಗಿರುವ ಆರೋಪಿಯಾಗಿರುವುದರಿಂದ ಅವನನ್ನು ಬಂಧಿಸಲು ಇಡಿ ಅಧಿಕಾರಿಗಳು ವಿವಾಹ ಸ್ಥಳಕ್ಕೆ ಆಗಮಿಸಿದ್ದರು.ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ವಿವಾಹದ ವೇಳೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಿಂದ ತಪ್ಪಿಸಿಕೊಳ್ಳಲು ವರನು ಮದುವೆ ಮಂಟಪದಿಂದ ಓಡಿಹೋಗಿದ್ದಾನೆ. ಪ್ರಸಿದ್ಧ ಫೇರ್‌ಮಾಂಟ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, 15,000 ಕೋಟಿ ರೂ.ಗಳ ಮಹಾದೇವ್ ಬೆಟ್ಟಿಂಗ್ ಆ್ಯಪ್(Betting App Scam) ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು. ಪ್ರಕರಣದಲ್ಲಿ ವರನು ಬೇಕಾಗಿರುವ ಆರೋಪಿಯಾಗಿರುವುದರಿಂದ ಅವನನ್ನು ಬಂಧಿಸಲು ಇಡಿ ಅಧಿಕಾರಿಗಳು ವಿವಾಹ ಸ್ಥಳಕ್ಕೆ ಆಗಮಿಸಿದ್ದರು. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾದೇವ್ ಬೆಟ್ಟಿಂಗ್ ಹಗರಣದಲ್ಲಿ ಬೇಕಾಗಿರುವ ಆರೋಪಿ ವರ ಸೌರಭ್ ಅಹುಜಾ ಎಂದು ಗುರುತಿಸಲಾಗಿತ್ತು. ಇಡಿ ಅಧಿಕಾರಿಗಳು ಬಂಧಿಸಲು ಸ್ಥಳಕ್ಕೆ ಬಂದಿದ್ದಾರೆ ಎಂಬ ಸುಳಿವು ಸಿಕ್ಕ ವರ ಸಪ್ತಪದಿ ತುಳಿಯುವ ಮೊದಲೇ ಮಂಟಪದಿಂದ ಪರಾರಿಯಾಗಿದ್ದಾನೆ. ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟುಗಳನ್ನು ನಿರ್ವಹಿಸಿದ ಆರೋಪ ವರ ಸೌರಭ್ ಮೇಲಿದೆ ಎಂಬ ವರದಿಗಳಿವೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಕೆಲವು ದಿನಗಳಿಂದ ಸೌರಭ್‌ನನ್ನು ಹುಡುಕುತ್ತಿತ್ತು.
ಸೌರಭ್ ಅಹುಜಾ ಅವನನ್ನು ಬಂಧಿಸಲು ಇಡಿ ಶೋಧ ಕಾರ್ಯಾಚರಣೆ ಶುರುಮಾಡಿದ್ದಾರೆ.ಮಹಾದೇವ್ ಆ್ಯಪ್ ಹಗರಣದ ತನಿಖೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ಬಂಧಿಸಲಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ಒಬ್ಬರಲ್ಲ ಇಬ್ಬರಲ್ಲ, 6 ಯುವಕರೊಂದಿಗೆ ಡೇಟಿಂಗ್! ಈ ಕಿʻಲೇಡಿʼ ಸಿಕ್ಕಿಬಿದ್ದಿದ್ದೇ ರೋಚಕ!
ಈ ಹಿಂದೆ, ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಫಿಟ್‌ನೆಸ್ ಪ್ರಭಾವಿ ಸಾಹಿಲ್ ಖಾನ್ ಅವನನ್ನು ಬಂಧಿಸಲಾಗಿತ್ತು. ಐದು ರಾಜ್ಯಗಳಲ್ಲಿ 40 ಗಂಟೆಗಳ ಮತ್ತು 1800 ಕಿ.ಮೀ.ಗಳ ದೂರ ಚೇಸ್ ಮಾಡಿ ನಂತರ ಅವನನ್ನು ಬಂಧಿಸಲಾಯಿತು. ನಂತರ ಅವನು ಮುಂಬೈನ ಸೆಷನ್ ನ್ಯಾಯಾಲಯದಿಂದ ಜಾಮೀನು ಪಡೆದನು
ಆನ್‌ಲೈನ್ ಬೆಟ್ಟಿಂಗ್; ಒಂದೇ ಕುಟುಂಬದ ಮೂವರು ಸಾವು
ಬೆಟ್ಟಿಂಗ್ ಚಾಳಿಯಿಂದ ಸಾಲಕ್ಕೆ ತುತ್ತಾದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ, ಶರ್ಮಿಳಾ ಅಲಿಯಾಸ್ ಸ್ವಾತಿ ಮೃತ ದುರ್ದೈವಿಗಳು. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್ನಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.