ಎತ್ತಿನಹೊಳೆ ನೀರು ಲಭ್ಯತೆ ವಿಚಾರ : ಸರಕಾರ ರಾಜ್ಯದ ಜನತೆಯ ಮುಂದೆ ಬೆತ್ತಲಾಗಿದೆ : ಆರ್.ಆಂಜನೇಯರೆಡ್ಡಿ
ನೀವು ಪಿಕ್ನಿಕ್ ಗೆ ಬಂದಿದ್ದಿರಾ. ತ್ಯಾಜ್ಯ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ನಿಯಮ ಗಳಿವೆ. ೩ನೇ ಹಂತದ ಶುದ್ಧೀಕರಣ ಬೇಕಿದೆ ಜಲವಿಜ್ಞಾನಿಗಳೇ ಹೇಳುತ್ತಾರೆ.ಇದನ್ನೆಲ್ಲಾ ಪರಿಶೀಲಿಸದೆ ಮೂರನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವರೇ ಹೇಳುವ ಮೂಲಕ ನಮ್ಮ ಜಿಲ್ಲೆಗಳ ಪಾಲಿಗೆ ಸರ್ಕಾರ ಸತ್ತಿದೆ ಎಂಬುದನ್ನು ತೋರಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಆಂಜನೇಯರೆಡ್ಡಿ ಮಾತನಾಡಿದರು.

ನೀರಾವರಿ ಹೋರಾಟ ರಾಜಕೀಯ ಪ್ರೇರಿತ ಎಂಬ ಹೇಳಿಕೆಗೆ ಹೋರಾಟಗಾರರ ತೀವ್ರ ಖಂಡನೆ
ಹೆಚ್.ಎನ್.ವ್ಯಾಲಿ ಸಂವಾದಕ್ಕೆ ಸಚಿವ ಸುಧಾಕರ್‌ಗೆ ಪಂತಾಹ್ವಾನ ನೀಡಿದ ನೀರಾವರಿ ಹೋರಾಟಗಾರರು
ಚಿಕ್ಕಬಳ್ಳಾಪುರ :ಎತ್ತಿನ ಹೊಳೆ ನೀರಿನ ಲಭ್ಯತೆ, ಯೋಜನೆ ಮುಕ್ತಾಯದ ಕುರಿತಂತೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ನಂದಿಬೆಟ್ಟದ ಸಚಿವ ಸಂಪುಟ ಸಭೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ನೀಡಿದ ಉಡಾಫೆಯ ಉತ್ತರದ ಮೂಲಕ ಇಡೀ ರಾಜ್ಯ ಸರಕಾರವೇ ಜನತೆಯ ಎದುರು ಬೆತ್ತಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಗೆ ಬೇಕಾದ ಶಾಶ್ವತ ನೀರಾವರಿ ಯೋಜನೆ ರೂಪಿಸುವಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ಮಾಡಿರುವುದು ಬೇಸರ ತರಿಸಿದೆ. ಎತ್ತಿನಹೊಳೆ ಯೋಜನೆ ಮೂಲಕವೇ ೯ ಜಿಲ್ಲೆಗಳ ೭೫ ಲಕ್ಷ ಜನರಿಗೆ ನೀರು ಒದಗಿಸುವ ಮಾತನ್ನು ಮುಖ್ಯಮಂತ್ರಿಗಳು ಪುನರುಚ್ಚರಿಸಿದ್ದಾರೆ. ಆದರೆ ಈ ಯೋಜನೆಯಿಂದ ೮ ಟಿಎಂಸಿ ಮಾತ್ರ ನೀರು ದೊರೆಯಲಿದೆ ಎಂಬುದನ್ನು ಸ್ವತಃ ಉಪ ಮುಖ್ಯ ಮಂತ್ರಿಗಳು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೇ ಶಾಸಕರ ಪ್ರಶ್ನೆಗೆ ಸದನದಲ್ಲಿ ಲಿಖಿತವಾಗಿ ಉತ್ತರ ನೀಡಿದ್ದಾರೆ.ಹಾಗಾದರೆ ಯಾರ ಮಾತು ಸತ್ಯ ಎಂದು ಪ್ರಶ್ನಿಸಿದರು ಹೇಳಿದ್ದರು.
ಇದನ್ನೂ ಓದಿ: Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ
ಈ ಬಗ್ಗೆ ಮಾಧ್ಯಮದವರು ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದಾಗ ನನಗೆ ನೆನಪಿಲ್ಲ ನೋಡೋಣ ಎಂದು ಉಡಾಫೆ ಮಾತಾಡಿದ್ದಾರೆ. ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯ ಗಳನ್ನು ಕಾನೂನು ಸಚಿವರು ಮಂಡಿಸುವುದು ವಾಡಿಕೆ.ಆದರೆ ಇದೇ ಮೊದಲ ಬಾರಿಗೆ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ವಿಶ್ಲೇಷಣೆ ಮಾಡಿ, ಜತೆಗೆ ಉಸ್ತುವಾರಿ ಮಂತ್ರಿಗಳು, ಸ್ಥಳೀಯ ಶಾಸಕರನ್ನು ಜತೆಗೆಇಟ್ಟುಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ವ್ಯಂಗ್ಯ ವಾಡಿದರು.
ನೀವು ಪಿಕ್ನಿಕ್ ಗೆ ಬಂದಿದ್ದಿರಾ. ತ್ಯಾಜ್ಯ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ನಿಯಮ ಗಳಿವೆ. ೩ನೇ ಹಂತದ ಶುದ್ಧೀಕರಣ ಬೇಕಿದೆ ಜಲವಿಜ್ಞಾನಿಗಳೇ ಹೇಳುತ್ತಾರೆ.ಇದನ್ನೆಲ್ಲಾ ಪರಿಶೀಲಿಸದೆ ಮೂರನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂದು ಉಸ್ತುವಾರಿ ಸಚಿವರೇ ಹೇಳುವ ಮೂಲಕ ನಮ್ಮ ಜಿಲ್ಲೆಗಳ ಪಾಲಿಗೆ ಸರ್ಕಾರ ಸತ್ತಿದೆ ಎಂಬುದನ್ನು ತೋರಿಸಿದ್ದಾರೆ. ಡಾ.ಎಂ.ಸಿ.ಸುಧಾಕರ್ ಮೇಲೆ ನಮಗೆ ಅಪಾರವಾದ ವಿಶ್ವಾಸವಿತ್ತು.ಆದರೆ ಮಂತ್ರಿ ಸ್ಥಾನ ಹೋಗುವ ಭಯದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಟ್ರೆöÊಷರಿ ಟ್ರೀಟ್ಮೆಂಟ್ ಬಗ್ಗೆ ಹಗುರವಾದ ಮಾತಾಡಿದ್ದಾರೆ. ನೀರಾವರಿ ಹೋರಾಟವನ್ನು ರಾಜಕೀಯ ಪ್ರೇರಿತ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಹೆಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ಎಂಬುದು ನಮ್ಮ ಜಿಲ್ಲೆಯ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರದಲ್ಲಿ ೫೪೦೦ಕೆರೆಗಳಿವೆ.ನಿಮಗೆ ರೈತರ ಪರವಾದ ಕಾಳಜಿ ಕಳಕಳಿ ಇದ್ದರೆ ಇವುಗಳ ಪುನಶ್ಚೇತನ ಮಾಡಿ. ಯಾರು ಇದಕ್ಕೆ ಅಡ್ಡಿ ಯಿದ್ದಾರೆ ಎಂದು ಪ್ರಶ್ನಿಸಿದರು.
ಈಗಿನ ಕಾಂಗ್ರೆಸ್ ಸರಕಾರ ಗುತ್ತಿಗೆದಾರರು ನಡೆಸುವ ಸರ್ಕಾರ.ಉಸ್ತುವಾರಿ ಸಚಿವರು ಬಾಲಿಷವಾದ ಹೇಳಿಕೆ ನೀಡಿ ಮುಖ್ಯಮಂತ್ರಿಗಳ ಮುಂದೆ ಹೀರೋ ಆಗಿದ್ದಾರೆ.ಹಿಂದೆ ನಮ್ಮ ಹೋರಾಟಕ್ಕೆ ಬಂದು ನಮ್ಮೊಂದಿಗೆ ಕೈಜೋಡಿಸಿದ್ದರು. ಚುನಾವಣೆ ಮೇಲೆ ಇವರಿಗೆ ಕಣ್ಣಿದೆ. ಆದ್ದರಿಂದ ಜನತೆ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದರೂ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಬೇಸರಿಸಿದ ಅವರು ಜನರ ಬಳಿಗೆ ಹೋಗುವ ಮೊದಲು ಕಟ್ಟಕಡೆಯ ಅವಕಾಶ ನೀಡುತ್ತಿದ್ದೇವೆ. ರೌಂಡ್ ಟೇಬಲ್ ಕಾನ್ಫರೆನ್ಸ್ಗೆ ಕರೆದಿದ್ದೇವೆ.ಅಲ್ಲಿ ಬಂದು ತಮ್ಮ ವಾದ ಮಂಡಿಸಲಿ ಎಂದು ಸವಾಲು ಹಾಕಿದರು.
ನೀರಾವರಿ ಹೋರಾಟಗಳನ್ನು ರಾಜಕೀಯ ಪ್ರೇರಿತವೆಂದು ಟೀಕಿಸಿರುವ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆಯು ಖಂಡನೀಯವಾಗಿದ್ದು, ಸಚಿವರು ದಿನಾಂಕ ನಿಗಧಿಪಡಿಸಿದಲ್ಲಿ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ವಿಜ್ಞಾನಿಗಳೇ ನೀಡಿರುವ ವರದಿಗಳೊಂದಿಗೆ ಹೋರಾಟಗಾರರು ಸಂವಾದ ನಡೆಸಲು ಸಿದ್ಧ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಪಂತಾಹ್ವಾನ ನೀಡಿದರು.
ಕೇಂದ್ರದ ಮಾನದಂಡಗಳನ್ನು ಗಾಳಿಗೆ ತೂರಿ ವಿಜ್ಞಾನಗಳ ಎಚ್ಚರಿಕೆ ನಡುವೆ ಸಂಸ್ಕರಿತ ನೀರನ್ನು ಕೇವಲ ೨ ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುವ ಮೂಲಕ ಜನಜೀವನ ಹಾಗೂ ಆಹಾರ ಸರಪಳಿಯನ್ನು ಹಾಳು ಮಾಡಲು ಮುಂದಾಗಿದ್ದಾರೆ. ಈ ಕುರಿತು ಅರಿವು ಇದ್ದರೂ ಸಚಿವ ಸುಧಾಕರ್ ಆತ್ಮವಂಚನೆ ಮಾಡಿಕೊಂಡು ಅಧಿಕಾರದ ಆಸೆಗಾಗಿಯೂ, ಇನ್ನಾರನ್ನೋ ಮೆಚ್ಚಿಸಲು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕಿಡಿದರು.
ನಂಬಿಕೆಗೆ ದ್ರೋಹ ಮಾಡಿದರು!
ಸರ್ಕಾರ ಯೋಜನೆಗಳನ್ನು ವೈಜ್ಞಾನಿಕ ವರದಿಗಳನ್ನಾದರಿ ಜಾರಿಗೊಳಿಸುವ ಬದಲಿಗೆ ಗುತ್ತಿಗೆ ದಾರರ ಮಾತುಗಳನ್ನು ನಂಬಿ ಜಾರಿಗೊಳಿಸಲಾಗುತ್ತಿದೆ. ಇನ್ನು ಚುನಾವಣೆಯಲ್ಲಿ ಸೋತ ವೇಳೆಯಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಡಾ.ಎಂ.ಸಿ.ಸುಧಾಕರ್ ಗೆದ್ದು ಸಚಿವರಾದ ಬಳಿಕ ಜಿಲ್ಲೆಯ ನೀರಿನ ಬವಣೆ ನೀಗಿಸಬಹುದು, ಹೋರಾಟಗಾರರ ಬೆನ್ನಿಗೆ ನಿಲ್ಲಬಹುದು ಎಂಬ ನಂಬಿಕೆಯಿತ್ತು. ಆದರೆ ೩ ಜಿಲ್ಲೆಗಳ ಮುಂದಿನ ಪೀಳಿಗೆಗಳ ಬಗ್ಗೆ ಲೆಕ್ಕಿಸದೆ ಜಾರಿಯಾಗಿರು ಯೋಜನೆ ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಪೈಪ್‌ಲೈನ್ ಕಾಮಗಾರಿ ಮುಖ್ಯವೇ!
ಇನ್ನು ಮೊದಲ ಹಂತದಲ್ಲಿ ಕೆಸಿ ವ್ಯಾಲಿ ಯೋಜನೆಯಲ್ಲಿ ಚಿಂತಾಮಣಿಯ ಮೂರು ಕೆರೆಗಳಿಗೆ ಸಂಸ್ಕರಿತ ನೀರನ್ನು ಹರಿಸಲು ಅನುಮೋದನೆ ದೊರೆತಿತ್ತು. ಆದರೆ ಇದುವರೆಗೂ ಅಲ್ಲಿಗೆ ನೀರು ಹರಿದಿಲ್ಲ. ಅಲ್ಲದೆ ಎಚ್‌ಎನ್ ವ್ಯಾಲಿಯ ಕೆರೆಗಳಿಗೂ ಸಂಪೂರ್ಣವಾಗಿ ಹರಿಸಲಿಲ್ಲ. ಆದರೆ ಕೇವಲ ಪೈಪ್‌ಲೈನ್ ಕಾಮಗಾರಿ ಮುಖ್ಯ ಎಂಬAತೆ ಶಿಡ್ಲಘಟ್ಟ ಹಾಗೂ ಚಿಂತಾಮಣಿಯ ೧೬೪ ಕೆರೆಗಳಿಗೆ ಸಂಸ್ಕರಿತ ನೀರನ್ನು ಹರಿಸಲು ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಸವಾಲು ಸ್ವೀಕರಿಸಿದರೆ ರಾಜಿ ಆಗಲು ಸಿದ್ಧ!
೨ನೇ ಹಂತದ ಶುದ್ಧೀಕರಣವೇ ಸಾಕು, ೩ನೇ ಹಂತದಲ್ಲಿ ಶುದ್ಧೀಕರಿಸಿದಲ್ಲಿ ಕುಡಿಯಬಹುದು ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ೩ ಕಡೆಗಳಲ್ಲಿ ೩ನೇಬಾರಿ ಶುದ್ಧೀಕರಿಸಿದ ನೀರನ್ನು ವಿಧಾನಸೌಧದ ಶೌಚಾಲಯ ಬಳಕೆಗೆ, ಪಾರ್ಕ್ ಹಾಗೂ ವಿಮಾನನಿಲ್ದಾಣದ ಇತರೆ ಕಾರ್ಯಗಳಿಗೆ ಬಳಸುತ್ತಿದ್ದಾರೆ ಎಂಬುದನ್ನು ಅವರು ತಿಳಿಯಬೇಕು. ವಿಜ್ಞಾನಿಗಳ ವರದಿಗಳನ್ನು ನಂಬದೆ ೨ನೇ ಹಂತವೇ ಸಾಕು ಎನ್ನುವವರು ತಮ್ಮ ಮನೆಗಳಿಗೆ ಕಾವೇರಿ, ಇತರೆ ನೀರನ್ನು ಬಂದ್ ಮಾಡಿಸಿ ೩ನೇ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಬಳಸಿದಲ್ಲಿ ನಮಗೆ ೨ನೇ ಹಂತದ ನಿರೇ ಸಾಕು ಎಂದು ನಾವು ರಾಜಿ ಆಗುತ್ತೇವೆ ಎಂದು ನುಡಿದರು.
ಅಪ್‌ಗ್ರೇಡ್‌ನಿಂದ ಹೆಚ್ಚಿನ ನೀರು!
ಬೆಂಗಳೂರಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಳೆಯ ಎಸ್‌ಟಿಪಿ ಯಂತ್ರಗಳನ್ನು ಅಪ್‌ಗ್ರೇಡ್ ಮಾಡುವ ಮೂಲಕ ಸಂಸ್ಕರಿತ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿದಲ್ಲಿ ೧೫ ರಿಂದ ೧೬ ಟಿಎಂಸಿ ನೀರು ಲಭ್ಯವಾಗಲಿದೆ. ಈ ಕುರಿತಾಗಿ ಯೋಚಿಸದ ಅವರು ಮೂರು ಜಿಲ್ಲೆಗಳ ಜೀವಸಂಕುಲಕ್ಕೆ ಮಾರಕಾವಾಗಿರುವ ಯೋಜನೆಯನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ನೀರನ್ನು ಒದಗಿಸಲು ಸಾಧ್ಯವಾಗದ ರಾಜಕಾರಣಿಗೆಳಿಗೆ ಹೋರಾಟಗಾರರನ್ನು ತೇಜೋವಧೆ ಮಾಡುವುದು ಅವರ ರಾಜಕೀಯ ದಿವಾಳಿಯನ್ನು ಎತ್ತಿ ತೋರುವುದು ಎಂದು ಕಿಡಿಕಾರಿದರು.
ಸರ್ಕಾರವನ್ನು ನಂಬಿ ಇನ್ನು ಉಪಯೋಗವಿಲ್ಲ. ಹಾಗಾಗಿ ವಿವಿಧ ತಂಡಗಳ ಮೂಲಕ ಕೋಲಾರ ಮತ್ತು ಜಿಲ್ಲೆಯ ಪ್ರತಿ ಹಳ್ಳಿಗೆ ಭೇಟಿ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಜನರಿಗೆ ಈ ಸರ್ಕಾರಗಳು ನಿರಂತರವಾಗಿ ಮಾಡುತ್ತಿರುವ ಮೋಸದ ಬಗ್ಗೆ ತಿಳಿ ಹೇಳಲಾಗು ವುದು. ಆ ಮೂಲಕ ಇವರ ಬಣ್ಣ ಬಯಲು ಮಾಡಿ, ಮುಂದಿನ ಹೋರಾಟವನ್ನು ತೀವ್ರಗೊಳಿಸುವ ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಿದರು.
ಮಳ್ಳೂರು ಹರೀಶ್, ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್, ಲಕ್ಷ್ಮೀನಾರಾಯಣಸ್ವಾಮಿ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಉಷಾರೆಡ್ಡಿ, ಮಂಚನಬಲೆ ಶ್ರೀನಿವಾಸ್, ರವಿಕುಮಾರ್ ಇದ್ದರು.
*
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ನೀರಿನ ಬವಣೆಯನ್ನು ಗಂಭೀರವಾಗಿ ಪರಿಗಣಿಸದೆ ಸರ್ಕಾರ, ರಾಜ್ಯದಲ್ಲಿ ಜಲಸಂಪನ್ಮೂಲ ಯಥೇಚ್ಚವಾಗಿ ಇದ್ದರೂ ನೀರನ್ನು ಒದಗಿಸದೆ ಎತ್ತಿನ ಹೊಳೆ ಎಂಬ ಭ್ರಮಾ ಯೋಜನೆಯ ಮೂಲಕ ಇಲ್ಲಿನ ಜನರನ್ನು ಮೋಸ ಮಾಡುತ್ತಲೇ ಬರುತ್ತಿದೆ ಎಂದು ಆರ್.ಆಂಜನೇಯರೆಡ್ಡಿ ಟೀಕಿಸಿದರು.
ಸದನದಲ್ಲಿ ನೀಡಿದ ಉತ್ತರದ ಬಗ್ಗೆ ತಮಗೆ ನೆನಪಿಲ್ಲ ಎಂದು ಹೇಳುವ ಮೂಲಕ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯ ಸರ್ಕಾರಕ್ಕಿರುವ ಬದ್ಧೆಯನ್ನು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ರಾಜ್ಯಸರ್ಕಾರ ಜಿಲ್ಲೆಯ ಜನತೆ ಮುಂದೆ ಬೆತ್ತಲಾಗಿದೆ. ನೀರಾವರಿ ವಿಚಾರದಲ್ಲಿ ಯಾವುದೇ ಪ್ರಶ್ನೆಗೂ ಸ್ಪಷ್ಟ ಉತ್ತರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೆ ವಿನಾಕಾರಣ ಜನರ ದೃಷ್ಟಿ ಬೇರೆಡೆಗೆ ತಿರುಗಿಸುವ ಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಮಳ್ಳೂರು ಹರೀಶ್ ಮಾತನಾಡಿ ಮೂರನೇ ಹಂತದ ಶುದ್ಧೀಕರಣ ,ಕೃಷ್ಣಾನದಿ ನೀರನ್ನು ಈ ಭಾಗಕ್ಕೆ ತರುವ ಬೇಡಿಕೆ ಇತ್ತು. ಆದರೆ ನಮ್ಮ ಈ ಭಾಗದ ಸಚಿವರು ಕೃಷ್ಣ ನದಿಯ ಬಗ್ಗೆ ಪ್ರಸ್ತಾಪವೇ ಇಲ್ಲದಂತೆ ಧಿಕ್ಕರಿಸಿದ್ದಾರೆ. ಎರಡು ಹಂತದ ಶುದ್ಧೀಕರಣ ಸಾಕು, ೩ನೇ ಹಂತದ ಶುದ್ದೀಕರಣ ಬೇಡ ಎನ್ನುವ ಸಚಿವರ ಹೇಳಿಕೆ ನಾಚಿಕೇಗೇಡಿನದ್ದಾಗಿದೆ.ಈ ಮೂಲಕ ಇಡೀ ಜೀವಸಂಕುಲದ ನಾಶಕ್ಕೆ ಸರ್ಕಾರದ ನಡೆದಿರುವುದನ್ನು ಖಂಡಿಸುತ್ತೇವೆ ಎಂದರು.
*
ಹಿಂದೆ ಎಚ್‌ಎನ್ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇದೀಗ ಮೂರನೇ ಹಂತದ ಶುದ್ಧೀಕರಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರದಿರುವುದು ದುರಂತವಾಗಿದ್ದು, ಕ್ಷೇತ್ರದ ಜನರಿಗೆ ಆಂಬುಲೆನ್ಸ್ಗಳ ಬದಲಿಗೆ ಆರೋಗ್ಯವಾಗಿ ಜೀವಿಸಲು ಶುದ್ಧ ನೀರನ್ನು ನೀಡಬೇಕೆಂಬ ಸಾಮಾನ್ಯ ಜ್ಞಾನ ಅವರಿಗೆ ಇರಬೇಕಿದೆ.
- ಸುಷ್ಮಾ ಶ್ರೀನಿವಾಸ್