Viral Video: ಅಳಿವಿನಂಚಿನಲ್ಲಿರುವ ಒರಾಂಗುಟಾನ್‌ಗೆ ವೇಪ್ ನೀಡಿದ ಬಾಕ್ಸರ್; ಮುಂದೇನಾಯ್ತು ವಿಡಿಯೊ ನೋಡಿ!
ರಷ್ಯಾದ ಬಾಕ್ಸರ್ ಅನಸ್ತಾಸಿಯಾ ಲುಚ್ಕಿನಾ ಕ್ರೈಮಿಯಾದ ಸಫಾರಿ ಪಾರ್ಕ್‌ನಲ್ಲಿ ಅಳಿವಿನಂಚಿನಲ್ಲಿರುವ ಡಾನಾ ಎಂಬ ಒರಾಂಗುಟಾನ್‌ಗೆ ವೇಪ್ ನೀಡಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದೀಗ ಆ ಪ್ರಾಣಿಯ ಆರೋಗ್ಯ ಹದಗೆಟ್ಟಿದ್ದರಿಂದ ಆಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದಾಳೆ.


ಮಾಸ್ಕೋ: ಕ್ರೈಮಿಯಾದ ಸಫಾರಿ ಪಾರ್ಕ್‌ನಲ್ಲಿ ಅಳಿವಿನಂಚಿನಲ್ಲಿರುವ ಡಾನಾ ಎಂಬ ಒರಾಂಗುಟಾನ್‌ಗೆ(Orangutan) ವೇಪ್(Vape) ನೀಡಿದ್ದಕ್ಕಾಗಿ ರಷ್ಯಾದ ಬಾಕ್ಸರ್ ಅನಸ್ತಾಸಿಯಾ ಲುಚ್ಕಿನಾ ಟೀಕೆಗೆ ಗುರಿಯಾಗಿದ್ದಾಳೆ. ಆಕೆ ಒರಾಂಗುಟಾನ್‌ಗೆ ವೇಪ್ ನೀಡಿದ ದೃಶ್ಯಗಳು ಸೋಶಿಯಲ್ ವೈರಲ್(Viral Video) ಆಗಿವೆ. ವೈರಲ್ ವಿಡಿಯೊದಲ್ಲಿ ಒರಾಂಗುಟಾನ್ ವೇಪ್ ಸೇವಿಸಿದ ದೃಶ್ಯ ಸೆರೆಯಾಗಿದೆ. 24 ವರ್ಷದ ಅನಸ್ತಾಸಿಯಾ ಲುಚ್ಕಿನಾ, ವೇಪ್ ಎಳೆದುಕೊಂಡು, ನಂತರ ಅದನ್ನು ಪಂಜರದಲ್ಲಿದ್ದ ಒರಾಂಗುಟನ್‌ಗೆ ನೀಡಿದ್ದಾಳೆ.
ವೇಪ್ ಸೇವನೆಯಿಂದ ಡಾನಾಗೆ ಹಸಿವು ಕಡಿಮೆಯಾಗಿದ್ದು, ದಿನದ ಹೆಚ್ಚಿನ ಸಮಯವನ್ನು ಮಲಗುವುದರಲ್ಲೇ ಕಳೆಯುತ್ತಿದೆಯಂತೆ. ಪಶುವೈದ್ಯರು ಅದು ವೇಪ್‌ನಿಂದ ನಿಕೋಟಿನ್ ಕಾರ್ಟ್ರಿಡ್ಜ್ ಅನ್ನು ನುಂಗಿರಬಹುದು ಎಂದು ಶಂಕಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
Russian boxer Anastasia Luchkina lets an endangered orangutan take a hit from her vape pen.
— Collin Rugg (@CollinRugg) July 2, 2025
The 24-year-old boxer is under fire after having the orangutan use her e-cigarette in Crimea.
According to local outlets, the orangutan displayed "disturbing" behavior after consuming… pic.twitter.com/oRjhq59XLa
ಸಫಾರಿ ಪಾರ್ಕ್‌ನ ಪಶುವೈದ್ಯ ವಾಸಿಲಿ ಪಿಸ್ಕೋವೊಯ್, "ಡಾನಾ ಕ್ಯಾಪ್ ನುಂಗಿರಬಹುದು ಎಂಬ ಅನುಮಾನವಿದೆ. ಏಕೆಂದರೆ ಈ ಪ್ಲಾಸ್ಟಿಕ್ ಕರುಳಿನ ಅಡಚಣೆ ಮತ್ತು ವಾಂತಿಗೆ ಕಾರಣವಾಗಬಹುದು. ಅದು ಈಗಾಗಲೇ ಸರಿಯಾಗಿ ತಿನ್ನುತ್ತಿಲ್ಲ. ಡಾನಾಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ." ಎಂದಿದ್ದಾರೆ.
ಲುಚ್ಕಿನಾ ವಿರುದ್ಧ ಸೋಶಿಯಲ್ ಮಿಡಿಯಾಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಬ್ಬರು "ಅಸಹ್ಯಕರ ನಡವಳಿಕೆ ಮತ್ತು ಅವಳನ್ನು ಮತ್ತೆ ಇಲ್ಲಿಗೆ ಬರಲು ಬಿಡಬಾರದು" ಎಂದು ಬರೆದಿದ್ದಾರೆ. “ಈ ಮುಗ್ಧ ಪ್ರಾಣಿಗೆ ಅಪಾಯ ತಂದಿಟ್ಟಿದ್ದಕ್ಕಾಗಿ ಅವಳನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಚೀನಾದ ಗುವಾಂಗ್ಕ್ಸಿ ಪ್ರದೇಶದ ನಾನಿಂಗ್ ಮೃಗಾಲಯದಲ್ಲಿ ಚಿಪ್ಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಶ್ಚರ್ಯದ ಜತೆಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಚೀನಾದ ಗುವಾಂಗ್ಕ್ಸಿ ಪ್ರದೇಶದ ನಾನಿಂಗ್ ಮೃಗಾಲಯದಿಂದ ಈ ವಿಡಿಯೊವನ್ನು ಸೆರೆಹಿಡಿಯಲಾಗಿದೆ. ವಿಡಿಯೊದಲ್ಲಿ ಬಂಡೆಗಳ ಕೆಳಗೆ ಕುಳಿತಿರುವ ಚಿಂಪಾಂಜಿಯೊಂದು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಧೂಮಪಾನ ಮಾಡಿದೆ. ಅದು ಮನುಷ್ಯರಂತೆ ಹೊಗೆಯನ್ನು ಉಗುಳುತ್ತಾ ಸಿಗರೇಟು ಸೇದುವುದನ್ನು ನೋಡಿದವರು ಆಶ್ಚರ್ಯಗೊಂಡಿದ್ದಾರೆ. ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ತರಗತಿಯಲ್ಲಿ ಫ್ಯಾಷನ್ ಶೋ ನಡೆಸಿದ ಶಿಕ್ಷಕ; ಮಕ್ಕಳ ಕಣ್ಣಲ್ಲಿ ಖುಷಿಯ ಕಾಮನಬಿಲ್ಲು! ವಿಡಿಯೊ ನೀವೂ ನೋಡಿ
ಇಲ್ಲಿ ಚಿಂಪಾಂಜಿಗೆ ಸಿಗರೇಟು ಹೇಗೆ ಸಿಕ್ಕಿದೆ? ಅದನ್ನು ಯಾರು ನೀಡಿದ್ದಾರೆ? ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ. ಮೃಗಾಲಯಕ್ಕೆ ಭೇಟಿ ನೀಡಿದವರ್ಯಾರೋ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ತಮ್ಮ ಸಿಗರೇಟನ್ನು ಪ್ರಾಣಿಗಳ ಆವರಣಕ್ಕೆ ಎಸೆದಿರಬಹುದು ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಚೀನಾ ಮೃಗಾಲಯದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.