ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Crime: ಕತ್ತು ಸೀಳಿದ ಸ್ಥಿತಿಯಲ್ಲಿ ಸಿಕ್ತು ಯುವತಿಯ ಶವ; ಪಾಗಲ್‌ ಪ್ರೇಮಿ ಕಥೆ ಕೇಳಿದ್ರೆ ಶಾಕ್‌ ಆಗ್ತೀರಾ

UP Crime: ಮದುವೆಆಗುವಂತೆ ಒತ್ತಡ ಹೇರಿ, ಹಣಕ್ಕೆ ಬೇಡಿಕೆ ಇಟ್ಟಿದ್ದಕೆ ಪ್ರೀತಿಸಿದ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಗುರುವಾರದಂದು ಮಿರ್ಜಾಮುರಾದ್ ಡಾಬಾದ ರೂಮ್‌ನಲ್ಲಿ 22 ವರ್ಷದ ಅಲ್ಕಾ ಬಿಂದ್‌ ಎಂಬ ಯುವತಿಯ ಮೃತದೇಹ ಪತ್ತೆಯಾಗಿತ್ತು.

ಪ್ರೇಯಸಿಯ ಕತ್ತನ್ನೇ ಸೀಳಿ ಕೊಂದ ಪ್ರಿಯಕರ!

ಅಲ್ಕಾ ಬಿಂದ್‌, ಮೃತಪಟ್ಟ ಯುವತಿ

Profile Sushmitha Jain Jul 4, 2025 10:48 PM

ವಾರಣಾಸಿ: ಮದುವೆ (Marriage) ಆಗುವಂತೆ ಒತ್ತಡ ಹೇರಿ, ಹಣಕ್ಕೆ (Money) ಬೇಡಿಕೆ ಇಟ್ಟಿದ್ದಕೆ ಪ್ರೀತಿಸಿದ ಯುವತಿಯನ್ನು ಆಕೆಯ ಪ್ರಿಯಕರನೇ (Lover) ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿ (Varanasi) ನಡೆದಿದೆ. ಗುರುವಾರದಂದು ಮಿರ್ಜಾಮುರಾದ್ ಡಾಬಾದ ರೂಮ್‌ನಲ್ಲಿ 22 ವರ್ಷದ ಅಲ್ಕಾ ಬಿಂದ್‌ ಎಂಬ ಯುವತಿಯ ಮೃತದೇಹ ಪತ್ತೆಯಾಗಿತ್ತು. ಯುವತಿಯ ಗಂಟಲು ಕೊಯ್ದು ಬ್ಲಾಂಕೆಟ್‌ನಲ್ಲಿ ಯುವತಿಯ ಶವವನ್ನು ಸುತ್ತಿಡಲಾಗಿತ್ತು.


ಎಂಎಸ್‌ಸಿ ವಿದ್ಯಾರ್ಥಿನಿಯಾಗಿದ್ದ ಅಲ್ಕಾ, ಬುಧವಾರ ಬೆಳಗ್ಗೆ ಕಾಲೇಜಿಗೆಂದು ಮನೆಯಿಂದ ಹೊರಟಿದ್ದಳು, ಆದರೆ ವಾಪಸ್ ಬಾರದ ಕಾರಣ ಮನೆಯವರು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ಕೆಲವೇ ಗಂಟೆಗಳಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಸಹೋದರಿಯ ಮನೆಯಲ್ಲಿದ್ದ ಆರೋಪಿ ಸಹಾಬ್ ಬಿಂದ್‌ನನ್ನು ಗುರುವಾರ ಬಂಧಿಸಲಾಯಿತು.

“ಆರೋಪಿ ಪೊಲೀಸರಿಂದ ಬಂದೂಕು ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿದ, ಆದರೆ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ವಾರಣಾಸಿಯ ಡಿಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಆಕಾಶ್ ಪಟೇಲ್ ತಿಳಿಸಿದ್ದಾರೆ. ಅಲ್ಕಾ ಬುಧವಾರ ಬೆಳಿಗ್ಗೆ 9:30ಕ್ಕೆ ಕಾಲೇಜಿಗೆಂದು ಹೊರಟಿದ್ದಳು, ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಆಕೆಯ ಕಾಲ್ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಆರೋಪಿ ಸಹಾಬ್ ಬಿಂದ್‌ನನ್ನು ಗುರುತಿಸಲು ಸಹಾಯವಾಯಿತು. ವಿಚಾರಣೆಯ ವೇಳೆ, ಸಹಾಬ್ ಬಿಂದ್, ಅಲ್ಕಾಳ ಮದುವೆಗೆ ಒತ್ತಾಯ ಮತ್ತು ಹಣಕ್ಕೆ ಬೇಡಿಕೆಯಿಂದ ಬೇಸತ್ತು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: UP Crime: ಯಾರು ಇಲ್ಲ ಮನೆಗೆ ಬಾ ಎಂದು ಕರೆದ್ಳು ಮಳ್ಳಿ- ಓಡಿ ಬಂದ ಪ್ರಿಯಕರನಿಗೆ ಈಕೆ ಮಾಡಿದ್ದೇನು ಗೊತ್ತಾ...?

2024ರಲ್ಲಿ ನಡೆದ ಮದುವೆಯೊಂದರಲ್ಲಿ ಈ ಇಬ್ಬರು ಭೇಟಿಯಾಗಿದ್ದರು. ಆ ಬಳಿಕ ಇಬ್ಬರೂ ಸಂಬಂಧದಲ್ಲಿದ್ದರು. ಆದರೆ, ಅಲ್ಕಾ ನಿರಂತರವಾಗಿ ಹಣಕ್ಕೆ ಬೇಡಿಕೆಯಿಡುತ್ತಿದ್ದುದರಿಂದ ಸಂಬಂಧ ಕಷ್ಟವಾಯಿತು ಎಂದು ಆರೋಪಿ ಹೇಳಿದ್ದಾನೆ. ಬುಧವಾರ, ಸಹಾಬ್ ಧಾಬಾದ ಕೊಠಡಿಯಲ್ಲಿ ಅಲ್ಕಾಳನ್ನು ಭೇಟಿಯಾಗಿ, ಆಕೆಯ ಗಂಟಲು ಕೊಯ್ದು, ಆಕೆಯ ಮೊಬೈಲ್ ಮತ್ತು ಪ್ರವೇಶ ಪತ್ರವನ್ನು ಕದ್ದು ಪರಾರಿಯಾಗಿದ್ದಾನೆ.

ಡಾಬಾದ ಸಿಬ್ಬಂದಿಯೊಬ್ಬರು ಕೊಠಡಿಯನ್ನು ಸ್ವಚ್ಛಗೊಳಿಸಲು ಬಂದಾಗ ಶವವನ್ನು ಕಂಡುಹಿಡಿದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗುರುವಾರ, ಪೊಲೀಸರ ನಿರ್ಲಕ್ಷ್ಯ ಆರೋಪಿಸಿ ಯುವತಿಯ ಕುಟುಂಬವು ಪ್ರತಿಭಟನೆ ನಡೆಸಿದೆ. ವಿರೋಧ ಪಕ್ಷದ ನಾಯಕ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಈ ಘಟನೆಯ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. "ದುರಂತದ ಘಟನೆ, ತನಿಖೆ ನಡೆಸಿ ನ್ಯಾಯ ಒದಗಿಸಬೇಕು" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.