ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Street Dog Attack: 6 ವರ್ಷದ ಬಾಲಕಿಯ ಕರಳು ಕಿತ್ತು ಬರುವಂತೆ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು; ತಿಪಟೂರಿನಲ್ಲೊಂದು ಶಾಕಿಂಗ್‌ ಘಟನೆ

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಎನ್.ಎಚ್. 206 ರಸ್ತೆಯಲ್ಲಿರುವ ಅಯ್ಯನಬಾವಿ ಗ್ರಾಮದ 6 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳ ಗುಂಪು ಆಕೆಯನ್ನು ಸಾಯಿಸಿದ ಆಘಾತಕಾರಿ ಘಟನೆ ನಡೆದಿದೆ. ಮಹಲಿಂಗಯ್ಯ ಅವರ ಪುತ್ರಿ 1ನೇ ತರಗತಿಯ ನವ್ಯಾ ಮೃತ ಬಾಲಕಿ. ನವ್ಯಾ ಮನೆ ಮುಂದಿನ ಬೀದಿಯಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ನಾಯಿಗಳು ಹಠಾತ್ ದಾಳಿ ನಡೆಸಿವೆ.

ಬೀದಿ ನಾಯಿ ದಾಳಿಗೆ 6 ವರ್ಷದ ಬಾಲಕಿ ಬಲಿ

ಸಾಂದರ್ಭಿಕ ಚಿತ್ರ.

Profile Ramesh B May 24, 2025 9:52 PM

ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಎನ್.ಎಚ್. 206 ರಸ್ತೆಯಲ್ಲಿರುವ ಅಯ್ಯನಬಾವಿ ಗ್ರಾಮದ 6 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳ ಗುಂಪು ಆಕೆಯನ್ನು ಸಾಯಿಸಿದ ಆಘಾತಕಾರಿ ಘಟನೆ ನಡೆದಿದೆ (Street Dog Attack). ನಾಯಿಗಳ ದಾಳಿಗೆ ಬಾಲಕಿಯ ಕರುಳೇ ಕಿತ್ತು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಹಲಿಂಗಯ್ಯ ಅವರ ಪುತ್ರಿ 1ನೇ ತರಗತಿಯ ನವ್ಯಾ ಮೃತ ಬಾಲಕಿ. ನವ್ಯಾ ಮನೆ ಮುಂದಿನ ಬೀದಿಯಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಹಠಾತ್ ದಾಳಿ ನಡೆಸಿದ ನಾಲ್ಕೈದು ಕ್ರೂರಿ ನಾಯಿಗಳ ಹಿಂಡು ಅವಳ ತಲೆ ಕಚ್ಚಿ ಎಳೆದಾಡಿದೆ.

ಏಕಾಏಕಿ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮೊದಲು ಮಗುವಿನ ತಲೆ ಭಾಗವನ್ನು ಕಿತ್ತು ಹಾಕಿದೆ. ನಂತರ ಕರುಳು ಹೊರಬರುವಂತೆ ಎಳೆದಾಡಿದೆ. ಈ ಘಟನೆ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಶನಿವಾರ (ಮೇ 24)ರ ಅಪರಾಹ್ನ ನವ್ಯಾ ಅಯ್ಯನಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದಾಗ ಆಕೆಯ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Dog Attack: 4 ವರ್ಷದ ಮಗನ ಮುಂದೆಯೇ ತಂದೆಯನ್ನು ಬರ್ಬರವಾಗಿ ಕಚ್ಚಿ ಕೊಂದ ಸಾಕು ನಾಯಿಗಳು; ಶಾಕಿಂಗ್‌ ವಿಡಿಯೊ ವೈರಲ್‌

ದಾಳಿ ನಡೆಸಿದ ನಾಯಿಗಳು ಮಗುವಿನ ತಲೆಯ ಚರ್ಮವನ್ನ ಸಂಪೂರ್ಣವಾಗಿ ಕಿತ್ತು ಹಾಕಿದ್ದು, ಕರುಳು ಆಚೆ ಬಂದಿದೆ. ಜತೆಗೆ ಮಗುವಿನ ಮುಖ, ಕೈ, ಕಾಲು, ತೊಡೆ ಭಾಗಗಳನ್ನ ಕಿತ್ತು ಹಾಕಿವೆ. ಕೂಡಲೇ ಸ್ಥಳೀಯರು ನಾಯಿಗಳನ್ನು ಓಡಿಸಿ, ರಕ್ತದ ಮಡುವಿನಲ್ಲಿ ಬಿದ್ದು, ಚೀರಾಡುತ್ತಿದ್ದ ಮಗುವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ತೀವ್ರ ಸ್ವರೂಪದ ಗಾಯವಿದ್ದರಿಂದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಕಳೆದ ವಾರದ ಹಿಂದೆ ಇದೇ ಗ್ರಾಮದ ಕ್ರೂರಿ ನಾಯಿಗಳ ಹಿಂಡು ಇಲ್ಲಿನ ಹಿಟಾಚಿ ಕುಮಾರಣ್ಣ ಎಂಬವವರ 2 ಹಸುಗಳನ್ನು ಕಚ್ಚಿ ಕೊಂದು ಹಾಕಿತ್ತು.

ಬೀದಿನಾಯಿಗಳ ದಾಳಿಗೆ ಗಜೇಂದ್ರಗಡದಲ್ಲಿ ಮಹಿಳೆ ಬಲಿ

ಗದಗ: ಕೆಲವು ದಿನಗಳ ಹಿಂದೆ ಬೀದಿನಾಯಿಗಳ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಗದಗದಲ್ಲಿ ನಡೆದಿತ್ತು. ಗಜೇಂದ್ರಗಡ ಪಟ್ಟಣದಲ್ಲಿ ಬೀದಿ ನಾಯಿಗಳ ಅಟ್ಯಾಕ್‌ ಮಾಡಿ ಪ್ರೇಮವ್ವ ಚೋಳಿನ (52) ಅವರನ್ನು ಬಲಿ ತೆಗೆದುಕೊಂಡಿದ್ದವು. ಹೂವು ತರಲು ಹೋಗಿದ್ದಾಗ ಪ್ರೇಮವ್ವ ಮೇಲೆ ಬೀದಿನಾಯಿಗಳು ಗುಂಪಾಗಿ ದಾಳಿ ಮಾಡಿದ್ದು, ತೀವ್ರವಾಗಿ ಘಾಸಿಗೊಳಿಸಿದ್ದವು. ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಪ್ರೇಮವ್ವ ಸಾವನ್ನಪ್ಪಿದ್ದರು.

ಬೀದಿನಾಯಿಗಳ ದಾಳಿಗೆ ಸಾರ್ವಜನಿಕರು ಬಲಿಯಾಗುವ ಪ್ರಕರಣಗಳು ರಾಜ್ಯದಲ್ಲಿ ಆಗಾಗ ನಡೆಯುತ್ತವೇ ಇವೆ. ಬೀದಿನಾಯಿಗಳಿಗೆ ಮಾಂಸದ ತ್ಯಾಜ್ಯ ಸುಲಭವಾಗಿ ದೊರೆಯುತ್ತಿರುವುದರಿಂದ ಅವು ಕೊಬ್ಬಿವೆ. ಅವು ಸಿಗದೆ ಹೋದಾಗ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಇವುಗಳ ಸಂಖ್ಯೆ ಎಲ್ಲ ಕಡೆ ವೃದ್ಧಿಸಿದ್ದು, ಬೀದಿ ನಾಯಿಗಳ ಸಂತಾನಹರಣ ಪ್ರಕ್ರಿಯೆ ಸ್ಥಳೀಯ ಆಡಳಿತದಿಂದ ಸರಿಯಾಗಿ ನಡೆಯುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.