IND-PAK Ceasefire: 2025ರ ಐಪಿಎಲ್ ಟೂರ್ನಿಯನ್ನು ಪುನರಾರಂಭಿಸಲು ಬಿಸಿಸಿಐ ಚಿಂತನೆ!
IPL 2025 Resumption: ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಒಂದು ವಾರದ ಕಾಲ ಸ್ಥಗಿತಗೊಂಡಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪುನರಾರಂಭದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತಿಸುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.

2025ರ ಐಪಿಎಲ್ ಪುನರಾರಂಭ ಯಾವಾಗ?

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಮುಂದಿನ ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿಯ ಇನ್ನುಳಿದ ಪಂದ್ಯಗಳು ಪ್ರಾರಂಭವಾಗುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಗಡಿ ಉದ್ವಿಗ್ನತೆಯಿಂದಾಗಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ಸಂಜೆ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಗಿದ್ದು, ಅಭಿಮಾನಿಗಳು ಶೀಘ್ರದಲ್ಲೇ ಟೂರ್ನಿಯನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ತಮ್ಮ ತಂಡಗಳಿಗೆ ಸೇರಿಕೊಳ್ಳಬೇಕೆಂದು ವಿದೇಶಿ ಆಟಗಾರರಿಗೆ ಕೇಳಿಕೊಳ್ಳಲಾಗುತ್ತಿದೆ.
ಟೂರ್ನಿಯ ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ರೂಪಿಸುವಲ್ಲಿ ಬಿಸಿಸಿಐ ನಿರತವಾಗಿದೆ. ಧರ್ಮಶಾಲಾ ಹೊರತುಪಡಿಸಿ ಭಾರತದಾದ್ಯಂತ ಪಂದ್ಯಗಳು ನಡೆಯಬಹುದು. ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ 2025ರ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸಾಮಾನ್ಯವಾಗುತ್ತಿದೆ. ಹಾಗಾಗಿ ವಿದೇಶಿ ಆಟಗಾರರು ಸಹ ಸಮಯಕ್ಕೆ ಸರಿಯಾಗಿ ಭಾರತಕ್ಕೆ ಮರಳಬಹುದು. ವರದಿಯ ಪ್ರಕಾರ, ವಿದೇಶಿ ಆಟಗಾರರು ವಿಮಾನ ನಿಲ್ದಾಣಗಳ ಸ್ಥಿತಿಯ ಬಗ್ಗೆ ಭಯಭೀತರಾಗಿದ್ದರು. ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ತನ್ನ ಪ್ರಯಾಣಕ್ಕೆ ಅಡ್ಡಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ಪ್ರತಿಯೊಂದು ಫ್ರಾಂಚೈಸಿ ತನ್ನದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಿದೆ ಮತ್ತು ಬಿಸಿಸಿಐನಿಂದ ವಿವರವಾದ ಸೂಚನೆಗಳಿಗಾಗಿ ಕಾಯುತ್ತದೆ.
IPL 2025: ಬೆಂಗಳೂರಿಗೆ ಸುರಕ್ಷಿತವಾಗಿ ಆಗಮಿಸಿದ ಆರ್‌ಸಿಬಿ ಆಟಗಾರರು!
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, "ವಿದೇಶಿ ಆಟಗಾರರು ಗಡಿಯಲ್ಲಿನ ಉದ್ವಿಗ್ನತೆಯಿಂದ ಭಯಭೀತರಾಗಿದ್ದರು, ಆದರೆ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿದ್ದರಿಂದಾಗಿ ಅವರು ಫ್ರಾಂಚೈಸಿಗಳ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿದರು ಮತ್ತು ಆತ್ಮವಿಶ್ವಾಸ ಹೊಂದಿದ್ದರು, ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಚ್ಚಲ್ಪಡುವ ಸಾಧ್ಯತೆಯ ಬಗ್ಗೆ ಆತಂಕಗೊಂಡಿದ್ದರು. ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಮುಂದಿನ ವಾರ ಟೂರ್ನಿಯನ್ನು ಪುನರಾರಂಭಿಸಿದಾಗ, ಆ ಪಂದ್ಯವನ್ನು 10.1 ಓವರ್‌ಗಳಿಂದ ಮುಂದುರಿಸಬಹುದು."
IPL 2025: ʻಇನ್ನುಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಿಸಿʼ-ಬಿಸಿಸಿಐಗೆ ಮೈಕಲ್ ವಾನ್ ಸಲಹೆ!
ಯಾವುದೇ ಅಡೆತಡೆಯಿಲ್ಲದೆ ಐಪಿಎಲ್ ಟೂರ್ನಿಯನ್ನು ಪುನರಾರಂಭಿಸಲು ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸುತ್ತದೆ. 2025ರ ಐಪಿಎಲ್ ಉಳಿದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಎಲ್ಲಾ ತಂಡಗಳು ಮತ್ತು ಆಟಗಾರರು ಈಗ ಸೂಚನೆಗಳಿಗಾಗಿ ಕಾಯುತ್ತಿದ್ದಾರೆ. ಐಪಿಎಲ್‌ನ ಉತ್ಸಾಹ ಶೀಘ್ರದಲ್ಲೇ ಮತ್ತೆ ಕಾಣುವ ಭರವಸೆ ಇದೆ. ಪ್ರೇಕ್ಷಕರು ಕೂಡ ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಯಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದನ್ನು ಅಭಿಮಾನಿಗಳು ವೀಕ್ಷಿಸುತ್ತಾರೆ.
ಇನ್ನು 17 ಪಂದ್ಯಗಳು ಬಾಕಿ ಇವೆ
ಮೇ 7ರವರಗೆ 2025ರ ಐಪಿಎಲ್ ಟೂರ್ನಿಯಲ್ಲಿ ಒಟ್ಟು 57 ಪಂದ್ಯಗಳು ಮುಕ್ತಾಯವಾಗಿದ್ದವು. ಇದೀಗ ಒಟ್ಟು 13 ಲೀಗ್ ಪಂದ್ಯಗಳು ಸೇರಿದಂತೆ ಒಟ್ಟು 17 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಮೊದಲನೇ ಕ್ವಾಲಿ ಫೈಯರ್, ಎರಡನೇ ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳು ಬಾಕಿ ಇವೆ.