Viral News: ಮತ್ತೆ ವೈರಲ್ ಆಯ್ತು ಸೂರ್ಯ-ಜ್ಯೋತಿಕಾ ಪುತ್ರಿಯ 12ನೇ ತರಗತಿ ಅಂಕಪಟ್ಟಿ
Viral News: ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳು ದಿಯಾ 12ನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಂದು ಚಿತ್ರದಲ್ಲಿ ದಿಯಾ 600ಕ್ಕೆ 581 ಅಂಕಗಳನ್ನು ಪಡೆದಿರುವುದು ಕಂಡುಬಂದಿದೆ. ತಮಿಳು – 96, ಇಂಗ್ಲಿಷ್ – 97, ಅಕೌಂಟ್ಸ್ – 94, ಭೌತಶಾಸ್ತ್ರ – 99, ರಸಾಯನಶಾಸ್ತ್ರ – 98, ಕಂಪ್ಯೂಟರ್ ಸೈನ್ಸ್ – 97 ಅಂಕ ಪಡೆದಿರುವುದು ಕಂಡುಬಂದಿದೆ.

ಸೂರ್ಯ ಮತ್ತು ಜ್ಯೋತಿಕಾ


ತಮಿಳು ಚಿತ್ರರಂಗ(Tamil cinema)ದ ಅತ್ಯಂತ ಜನಪ್ರಿಯ ಸ್ಟಾರ್ ಜೋಡಿ(Star Couple)ಗಳಲ್ಲಿ ಸೂರ್ಯ(Suriya) ಮತ್ತು ಜ್ಯೋತಿಕಾ(jyothika) ದಂಪತಿಗಳು ಒಬ್ಬರು. ಇವರು 2006ರಲ್ಲಿ ವಿವಾಹವಾಗಿದ್ದು, ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಅವರ ಹಿರಿಯ ಮಗಳು ದಿಯಾ ಮತ್ತು ಕಿರಿಯ ಮಗ ದೇವ್. 1999ರಲ್ಲಿ ‘ಪೂವೆಲ್ಲಂ ಕೆಟ್ಟುಪ್ಪಾರ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಯಲ್ಲಿ ಬಿದ್ದ ಈ ಜೋಡಿ, ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ತಮ್ಮ ಬಿಡುವಿಲ್ಲದ ಶೆಡ್ಯೂಲ್ ನಡುವೆಯೂ, ಸೂರ್ಯ ಮತ್ತು ಜ್ಯೋತಿಕಾ ಯಾವಾಗಲೂ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ.

ಈ ದಂಪತಿ ಈ ಹಿಂದೆ ಚೆನೈನಲ್ಲಿ ವಾಸಿಸುತ್ತಿದ್ದರು, ಆದರೆ ಕೆಲವು ವರ್ಷಗಳ ಹಿಂದೆ ಮಕ್ಕಳೊಂದಿಗೆ ಮುಂಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತೀಚೆಗೆ ಸೂರ್ಯ ತಮ್ಮ ಕುಟುಂಬದೊಂದಿಗೆ ಒಂದು ಮದುವೆಯ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ದಿಯಾ ಮತ್ತು ದೇವ್ ಎಷ್ಟು ಬೆಳೆದಿದ್ದಾರೆ ಎಂದು ಗಮನಿಸಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು.ವಿವಾಹದ ನಂತರ ಕುಟುಂಬಕ್ಕೆ ಒತ್ತು ನೀಡಿದ್ದ ನಟಿ ಜ್ಯೋತಿಕಾ, 2024ರಲ್ಲಿ ಬಿಡುಗಡೆಯಾದ ‘ಶೈತಾನ್’ ಎಂಬ ಚಿತ್ರದ ಮೂಲಕ 25 ವರ್ಷಗಳ ನಂತರ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ.

ಸೂರ್ಯ ಅವರ ಇತ್ತೀಚಿನ ಚಿತ್ರ ‘ರೆಟ್ರೋ’ (2025) ಅಭಿಮಾನಿಗಳಿಂದ ಸಿಕ್ಕ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಕಮರ್ಷಿಯಲಿ ಹಿಟ್ ಆಗಿದೆ. ಕಾರ್ತಿಕ್ ಸುಬ್ಬರಾಜ್ ಅವರ ನಿರ್ದೇಶನ ಮತ್ತು ಸೂರ್ಯ ಅವರ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ಅವರ ಮಗಳು ದಿಯಾ 12ನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(viral) ಆಗಿವೆ. ಒಂದು ಚಿತ್ರದಲ್ಲಿ ದಿಯಾ 600ಕ್ಕೆ 581 ಅಂಕಗಳನ್ನು ಪಡೆದಿರುವುದು ಕಂಡುಬಂದಿದೆ. ತಮಿಳು – 96, ಇಂಗ್ಲಿಷ್ – 97, ಅಕೌಂಟ್ಸ್ – 94, ಭೌತಶಾಸ್ತ್ರ – 99, ರಸಾಯನಶಾಸ್ತ್ರ – 98, ಕಂಪ್ಯೂಟರ್ ಸೈನ್ಸ್ – 97 ಅಂಕ ಪಡೆದಿರುವುದು ಕಂಡುಬಂದಿದೆ

ಆದರೆ, ಈ ಫೋಟೋ ಹಳೆಯದು ಎಂದು ಅನೇಕರು ಹೇಳಿದ್ದಾರೆ. ಕಳೆದ ವರ್ಷ, ಸೂರ್ಯ ಮತ್ತು ಜ್ಯೋತಿಕಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮುಂಬೈಗೆ ಸ್ಥಳಾಂತರಗೊಂಡ ಸಮಯದಲ್ಲಿ ಈ ಚಿತ್ರ ಮೊದಲ ಬಾರಿಗೆ ವೈರಲ್ ಆಗಿತ್ತು. ಪ್ರತಿ ವರ್ಷ 12ನೇ ತರಗತಿಯ ಫಲಿತಾಂಶ ಘೋಷಣೆಯಾದಾಗ ಈ ಚಿತ್ರ ಮತ್ತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತದೆ.