ಎರಡನೇ ಆವೃತ್ತಿಯ "ಹ್ಯಾಪಿಯೆಸ್ಟ್ ಹರ್ 2025" ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ ಹ್ಯಾಪಿಯೆಸ್ಟ್ ಹೆಲ್ತ್
ಮಾವೇಶವನ್ನು ಹ್ಯಾಪಿಯೆಸ್ಟ್ ಹೆಲ್ತ್ ನ ಕೋ- ಚೇರ್ ಮನ್ ಡೇವಿಸ್ ಕರೆಡನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹ್ಯಾಪಿ ಯೆಸ್ಟ್ ಹೆಲ್ತ್ - ನಾಲೆಡ್ಜ್ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘು ಕೃಷ್ಣನ್, ಮತ್ತು ಹ್ಯಾಪಿಯೆಸ್ಟ್ ಹೆಲ್ತ್ - ನಾಲೆಡ್ಜ್ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ಜೋಶಿ ಮತ್ತು 250ಕ್ಕೂ ಮಂದಿ ಉಪಸ್ಥಿತರಿದ್ದರು


ಸಮಾವೇಶದಲ್ಲಿ ಭಾರತದ ಯುವ ವೃತ್ತಿಪರ ಮಹಿಳೆಯರ ಆರೋಗ್ಯ ಸವಾಲುಗಳ ಕುರಿತ ಪರಿಣತರಿಂದ ಗೋಷ್ಠಿ ಮತ್ತು ಸಂವಾದ ನಡೆಯಿತು.
ಬೆಂಗಳೂರು: ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಮಹಿಳೆಯರ ಯೋಗಕ್ಷೇಮ ಕುರಿತ ತನ್ನ ಪ್ರಮುಖ ಸಮಾವೇಶವಾದ "ಹ್ಯಾಪಿಯೆಸ್ಟ್ ಹರ್ 2025" ನ ಎರಡನೇ ಆವೃತ್ತಿಯನ್ನು ಇಂದು ಬೆಂಗಳೂರಿನ ಕೋರಮಂಗಲದ ಸೇಂಟ್ ಜಾನ್ಸ್ ಕ್ಯಾಂಪಸ್ ನ ಪೋಪ್ ಪಾಲ್ VI ಆಡಿಟೋರಿಯಂನಲ್ಲಿ ಯಶಸ್ವಿ ಯಾಗಿ ನಡೆಸಿತು. ದಿನಪೂರ್ತಿ ನಡೆದ ಈ ಸಮಾವೇಶದಲ್ಲಿ ವೃತ್ತಿಪರ ಮಹಿಳೆಯರ ದೈಹಿಕ, ಮಾನಸಿಕ ಮತ್ತು ಜೀವನಶೈಲಿ ಆರೋಗ್ಯ ಸವಾಲುಗಳ ಕುರಿತು ವೈದ್ಯಕೀಯ ತಜ್ಞರು, ಪರಿಣತರು ಸಂವಾದ ನಡೆಸಿದರು.
ಈ ಸಮಾವೇಶವನ್ನು ಹ್ಯಾಪಿಯೆಸ್ಟ್ ಹೆಲ್ತ್ ನ ಕೋ- ಚೇರ್ ಮನ್ ಡೇವಿಸ್ ಕರೆಡನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹ್ಯಾಪಿ ಯೆಸ್ಟ್ ಹೆಲ್ತ್ - ನಾಲೆಡ್ಜ್ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘು ಕೃಷ್ಣನ್, ಮತ್ತು ಹ್ಯಾಪಿಯೆಸ್ಟ್ ಹೆಲ್ತ್ - ನಾಲೆಡ್ಜ್ ನ ಸಹ-ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ಜೋಶಿ ಮತ್ತು 250ಕ್ಕೂ ಮಂದಿ ಉಪಸ್ಥಿತರಿದ್ದರು.
ಒತ್ತಡ ಹೆಚ್ಚುತ್ತಿರುವ ಈ ಸಮಾಜದಲ್ಲಿ ಮಹಿಳೆಯರ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ. ಇಂಥಾ ಸಂದರ್ಭದಲ್ಲಿ ಈ ಸಮಾವೇಶವು ಪಿಸಿಓಎಸ್, ಒತ್ತಡ ಮತ್ತು ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸುವ ಮಹತ್ವದ ವೇದಿಕೆಯಾಗಿ ಮೂಡಿ ಬಂದಿದೆ. ಜೊತೆಗೆ ಸಮಾವೇಶದಲ್ಲಿ ಫಿಟ್‌ನೆಸ್, ಪೌಷ್ಟಿಕ ಆಹಾರ, ನಿದ್ರೆ ಮತ್ತು ಆರ್ಥಿಕತೆ ವಿಚಾರಗಳ ಕುರಿತು ಸೂಕ್ತ ಚರ್ಚೆಗಲು ನಡೆದುವು.
ಇದನ್ನೂ ಓದಿ: Vishweshwar Bhat Column: ಆ ಅದೃಶ್ಯ ಹಸ್ತ
ಕಾರ್ಯಕ್ರಮದಲ್ಲಿ ಮಾತನಾಡಿದ ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು, “ಪ್ರೌಢಾವಸ್ಥೆಯು ನಮ್ಮ ಜೀವನದಲ್ಲಿನ ಅತ್ಯಂತ ಪ್ರೊಡಕ್ಟಿವ್ ಹಂತವಾಗಿದೆ. ಈ ಹಂತದಲ್ಲಿ ದೊಡ್ಡ ಜವಾಬ್ದಾರಿಗಳು ಮತ್ತು ಬದಲಾವಣೆ ಹೊಂದಬೇಕಾದ ಅಗತ್ಯ ಕೂಡ ಎದುರಾಗುತ್ತವೆ. ವಯಸ್ಸಾದಂತೆ ಒಂಟಿತನ, ಬೆಂಬಲದ ಕೊರತೆ ಕಾಡುತ್ತದೆ ಮತ್ತು ಮೆದುಳಿನ ಚಟುವಟಿಕೆ ಕಡಿಮೆ ಯಾಗುತ್ತಾ ಬರುತ್ತದೆ.
ಇಂತ ಸವಾಲುಗಳು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಈ ಸವಾಲು ಗಳಿದ್ದರೂ ದೈಹಿಕ ಆರೋಗ್ಯವನ್ನು ಕಡೆಗಣಿಸಬಾರದು. ಉತ್ತಮ ಆಹಾರ ಕ್ರಮ ಹೊಂದಬೇಕು ಮತ್ತು ವ್ಯಾಯಾಮ ಮಾಡಬೇಕು. ಅದರಿಂದ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸಬಹುದಾಗಿದೆ. ‘ಜೀನ್ ಗಳು ಬಂದೂಕಿಗೆ ಲೋಡ್ ಮಾಡುತ್ತವೆ. ಜೀವನಶೈಲಿ ಅದರ ಟ್ರಿಗರ್ ಒತ್ತುತ್ತದೆ’ ಎಂಬ ಮಾತೊಂದಿದೆ. ಅದೇ ಥರ ನಮ್ಮ ದೈನಂದಿನ ಬದುಕಿನ ಕ್ರಮವೇ ನಮ್ಮ ದೀರ್ಘಕಾಲದ ಆರೋಗ್ಯವನ್ನು ನಿರ್ಧರಿಸುತ್ತವೆ” ಎಂದರು.
‘ಮಹಿಳೆಯರ ಆರೋಗ್ಯ: ಚಯಾಪಚಯ ಮತ್ತು ಜೀವನಶೈಲಿಯ ತಪ್ಪು ಆಯ್ಕೆಗಳು’ ಎಂಬ ಕುರಿತು ಗೋಷ್ಠಿ ನಡೆದಿದ್ದು, ಈ ಚರ್ಚೆಯಲ್ಲಿ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರದ ಸ್ತ್ರೀರೋಗ ತಜ್ಞೆ ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಮಾಜಿ ಅಧ್ಯಕ್ಷೆ ಡಾ. ವಿದ್ಯಾ ವಿ. ಭಟ್, ದಿ ಆಲ್ಟರ್ನೇಟಿವ್ ಸ್ಟೋರಿಯ ನಿರ್ದೇಶಕ ಡಾ. ಪರಾಸ್ ಶರ್ಮಾ, ಪವರ್‌ಲಿಫ್ಟರ್, ಅಥ್ಲೀಟ್, ರಿವರ್ ಮೊಬಿಲಿಟಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಸರಸ್ವತಿ ಆನಂದ್ ಮತ್ತು ಬೆಂಗಳೂರು ಸರ್ಜಾಪುರದ ಮದರ್‌ಹುಡ್ ಹಾಸ್ಪಿಟಲ್ ನ ಸ್ತ್ರೀರೋಗ ತಜ್ಞೆ ಮತ್ತು ಫರ್ಟಿಲಿಟಿ ತಜ್ಞೆ ಡಾ.ಶಾರ್ವರಿ ಮುಂಡೆ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಸರ್ಜಾಪುರದ ಮದರ್‌ಹುಡ್ ಹಾಸ್ಪಿಟಲ್ ನ ಸ್ತ್ರೀರೋಗ ತಜ್ಞೆ ಮತ್ತು ಫರ್ಟಿಲಿಟಿ ತಜ್ಞೆ ಡಾ. ಶಾರ್ವರಿ ಮುಂಡೆ ಅವರು, “ಚಯಾಪಚಯ ಕ್ರಿಯೆ ಎಂದರೆ ಕೇವಲ ಕ್ಯಾಲೊರಿ ಬರ್ನ್ ಮಾಡುವುದು ಮಾತ್ರವೇ ಅಲ್ಲ, ಕರುಳಿನ ಆರೋಗ್ಯದಿಂದ ಹಿಡಿದು ಹಾರ್ಮೋನ್ ಸಮತೋಲನದವರೆಗೆ ಎಲ್ಲದರ ಮೇಲೂ ಈ ಕ್ರಿಯೆ ಪರಿಣಾಮ ಬೀರುತ್ತದೆ. ಆಗಾಗ್ಗೆ ಬರುವ ತಲೆನೋವನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ ಅಥವಾ ಸಾಮಾನ್ಯ ಔಷಧಿ ಗಳನ್ನು ಪಡೆದು ಸುಮ್ಮನೆ ಇದ್ದುಬಿಡಲಾಗುತ್ತದೆ. ಆದರೆ ಇವು ದೊಡ್ಡ ಸಮಸ್ಯೆಯ ಆರಂಭಿಕ ಎಚ್ಚರಿಕೆ ಸಂಕೇತಗಳಾಗಿರಬಹುದು. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಪ್ರ-ಡಯಾಬಿಟಿಸ್ ಹಂತವು ಸೈಲೆಂಟ್ ವಾರ್ನಿಂಗ್ ಆಗಿದ್ದು, ಸಾಮಾನ್ಯವಾಗಿ ಈ ಹಂತವನ್ನು ಪರಿಸ್ಥಿತಿ ಕೈಮೀರು ವವರೆಗೆ ಕಡೆಗಣಿಸಲಾಗುತ್ತದೆ. ಆಹಾರದ ಕಡೆಗೆ ಗಮನ ನೀಡುವ ಮೂಲಕ ಮತ್ತು ಸ್ಥಿರವಾಗಿ ವ್ಯಾಯಾಮ ಮಾಡುವುದು ಇತ್ತೀಚಿನ ಡಯಟ್ ಟ್ರೆಂಡ್ ಗಳನ್ನು ಅನುಸರಿಸುವುದಕ್ಕಿಂತ ಹೆಚ್ಚು ಮುಖ್ಯ” ಎಂದು ಹೇಳಿದರು.
ಮತ್ತೊಬ್ಬ ಸಂಪನ್ಮೂಲ ತಜ್ಞೆ ಪವರ್‌ಲಿಫ್ಟರ್, ಅಥ್ಲೀಟ್, ರಿವರ್ ಮೊಬಿಲಿಟಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಸರಸ್ವತಿ ಆನಂದ್ ಅವರು, “ಅವಳಿ ಜವಳಿ ಮಕ್ಕಳ ತಾಯಿ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥೆಯಾಗಿರುವ ನನಗೆ ಜನರು ಯಾವಾಗಲೂ ನಿಮಗೆ ಅಷ್ಟೊಂದು ಸಮಯ ಎಲ್ಲಿಂದ ಸಿಗುತ್ತದೆ ಎಂದು ಕೇಳುತ್ತಾರೆ. ನಾನು ಅವರಿಗೆ ನನ್ನ ಸ್ಕ್ರೀನ್ ಟೈಮ್ ನಾಲ್ಕು ಗಂಟೆ ಇದ್ದರೆ, 20 ನಿಮಿಷ ಟ್ರೈನಿಂಗ್ ಗೆ ಕೊಡುತ್ತೇನೆ ಎಂದು ಹೇಳುತ್ತೇನೆ. ನಾನು ಲೈಟ್ ವೇಯ್ ಲಿಫ್ಟಿಂಗ್ ನಿಂದ ಶುರು ಮಾಡಿದೆ, ಆಮೇಲೆ ಒಬ್ಬರು ಕೋಚ್ ಸಿಕ್ಕರು. ನಂತರ ಶೀಘ್ರದಲ್ಲೇ ರಾಜ್ಯ, ರಾಷ್ಟ್ರೀಯ, ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಶ್ವ ದಾಖಲೆ ಸ್ಥಾಪಿಸಿದೆ. ಬಹಳ ಬೇಗ ಸ್ಟ್ರೆಂಥ್ ಟ್ರೈನಿಂಗ್ ಅನ್ನು ಪ್ರಾರಂಭಿಸುವುದು ಉತ್ತಮ ಸ್ನಾಯುವನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ಆಧುನಿಕ ಜೀವನಶೈಲಿ ಕಾಯಿಲೆಗಳ ವಿರುದ್ಧ ಈ ಕ್ರಮವು ಅತ್ಯುತ್ತಮ ರಕ್ಷಣೆಯಾಗಿದೆ” ಎಂದು ಹೇಳಿದರು.
ಮಹಿಳೆಯರು ಸಾಮಾನ್ಯವಾಗಿ ಮಾಡುವ ಪೌಷ್ಠಿಕ ಆಹಾರದ ತಪ್ಪುಗಳು ಮತ್ತು ಪರಿಹಾರ ವಿಚಾರ ಕುರಿತು ಮಾತನಾಡಿದ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಮತ್ತು ಹೆಲ್ತ್ ಕೋಚ್ ಹಾಗೂ ಬೆಂಗಳೂರಿನ ಕ್ವಾ ನ್ಯೂಟ್ರಿಷನ್ ನ ಸಂಸ್ಥಾಪಕರಾದ ರ್‍ಯಾನ್ ಫೆರ್ನಾಂಡೋ ಅವರು, “ದುರದೃಷ್ಟವೆಂದರೆ ಭಾರತವು ಆರೋಗ್ಯ ಕುರಿತು ಪ್ರೀತಿ ತೋರಿಸುತ್ತದೆ, ಆದರೆ ಆರೋಗ್ಯ ಪಾಲನೆಗೆ ಸರಿಯಾದ ಕ್ರಮ ಪಾಲಿಸುವು ದಿಲ್ಲ. ಎಲ್ಲರಿಗೂ ಸ್ನಾಯು ಬೆಳೆಸಿಕೊಳ್ಳಬೇಕೆಂದು ತಿಳಿದಿದೆ, ಆದರೆ ಅದಕ್ಕಾಗಿ ಎಷ್ಟು ಜನರು ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಳ್ಳುತ್ತಾರೆ ಹೇಳಿ. ದಯವಿಟ್ಟು ಎಲ್ಲರೂ ಸ್ನಾಯುಗಳ ಮೇಲೆ ಗಮನ ಕೇಂದ್ರೀಕರಿಸಿ. ಸ್ನಾಯುಗಳೇ ನಿಮ್ಮ ನಿಮ್ಮ ದೇಹದ ನಿಜವಾದ ನಾಯಕ. ಮುಂದಿನ ವರ್ಷಗಳಲ್ಲಿ ನೀವು ಫಿಟ್, ಆರೋಗ್ಯವಂತ ಮತ್ತು ತಾರುಣ್ಯಪೂರ್ಣರಾಗಿರಲು ನೀವು ನಿಮ್ಮ ಸ್ನಾಯುಗಳ ಮೇಲೆ ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಮೆಂಟ್ ಪ್ಲಾನ್ (ಎಸ್ ಐ ಪಿ) ನಲ್ಲಿ ಹೂಡಿಕೆ ಮಾಡಬೇಕು. ಈ ಯಾರೂ ಹೇಳದ ರಹಸ್ಯವನ್ನು ನೀವು ಪಾಲಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಉತ್ಯಮ ಆರೋಗ್ಯ ಹೊಂದಲು ಕರುಳಿನ ಆರೋಗ್ಯ ಮತ್ತು ಸ್ಟ್ರೆಂಥ್ ಟ್ರೈನಿಂಗ್ ಬಹಳ ಮುಖ್ಯ ಎಂದು ಹೇಳಿದರು. ಹ್ಯಾಪಿಯೆಸ್ಟ್ ಹೆಲ್ತ್ ನಲ್ಲಿ ನಾವು ಈ ಕುರಿತು ಸಂವಾದ ಮುಂದುವರೆಸಲು ಬದ್ಧರಾಗಿದ್ದೇವೆ. ನಮ್ಮ ಪ್ರಸ್ತುತ ಮ್ಯಾಗಜೀನ್ ಸಂಚಿಕೆಯು ಸ್ಟ್ರೆಂಥ್ ಟ್ರೇನಿಂಗ್ ಗೆ ಮೀಸಲಾಗಿದೆ. ಜೊತೆಗೆ ಹ್ಯಾಪಿಯೆಸ್ಟ್ ಡಯಾ ಗ್ನೋಸ್ಟಿಕ್ಸ್ ಈಗ ಭಾರತದಾದ್ಯಂತ ಕರುಳಿನ ಮೈಕ್ರೊಬಯೋಮ್ ಪರೀಕ್ಷಾ ಸೌಲಭ್ಯವನ್ನು ಒದಗಿಸುತ್ತಿದೆ. ಇದು ವ್ಯಕ್ತಿಗಳಿಗೆ ತಮ್ಮ ಕರುಳಿನ ಆರೋಗ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯವನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.