Pahalgam terror attack: ಕೇಂದ್ರದ ನಿರ್ಧಾರದಿಂದ ಸಾನಿಯಾ ಮಿರ್ಜಾ ಪುತ್ರ ಭಾರತ ತೊರೆಯಬೇಕೆ?
2010 ರಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ವಿವಾಹವಾಗಿತ್ತು. 2018 ರಲ್ಲಿ ದಂಪತಿ ಇಜಾನ್ ಮಿರ್ಜಾ ಮಲಿಕ್ ಎಂಬ ಗಂಡು ಮಗುವಿಗೆ ತಂದೆ -ತಾಯಿಯಾಗಿದ್ದರು. 2024ರಲ್ಲಿ ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು.


ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam terror attack)ಯ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಗಡೀಪಾರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಖಡನ್ ಸೂಚನೆ ನೀಡಿದ ಬೆನ್ನಲ್ಲೇ ಭಾರತದಲ್ಲಿದ್ದ ಪಾಕಿಸ್ತಾನ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ– ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳುತ್ತಿರುವುದು ಶನಿವಾರ ಕೂಡ ಮುಂದುವರಿದಿದೆ. ಈ ಮಧ್ಯೆ ಕೆಲ ನೆಟ್ಟಿಗರು ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ(sania mirza) ಮತ್ತು ಅವರ ಪುತ್ರ ಇಜಾನ್ ಮಿರ್ಜಾ ಮಲಿಕ್(Izhaan Mirza Malik)ಗೂ ಈ ನಿಯಮ ಅನ್ವಯವಾಗುತ್ತಾ ಎಂದು ಪ್ರಶ್ನಿಸಿದ್ದಾರೆ.
2010 ರಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ವಿವಾಹವಾಗಿತ್ತು. 2018 ರಲ್ಲಿ ದಂಪತಿ ಇಜಾನ್ ಮಿರ್ಜಾ ಮಲಿಕ್ ಎಂಬ ಗಂಡು ಮಗುವಿಗೆ ತಂದೆ -ತಾಯಿಯಾಗಿದ್ದರು. 2024ರಲ್ಲಿ ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಸಾನಿಯಾ ವಿಚ್ಛೇದನ ಪಡೆದಿದ್ದರೂ, ಇಜಾನ್ ಮಿರ್ಜಾ ತಂದೆ(ಶೋಯೆಬ್ ಮಲಿಕ್) ಪಾಕಿಸ್ತಾನದವರಾಗಿರುವ ಕಾರಣ ಇಜಾನ್ ಭಾರತ ತೊರೆಯಬೇಕೆ? ಎಂಬ ಚರ್ಚೆಗಳು ಶುರುವಾಗಿದೆ.
ಸಾನಿಯಾ ಮತ್ತು ಅವರ ಪುತ್ರನಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಸಾನಿಯ ಅವರು ಪಾಕಿಸ್ತಾನ ಪೌರತ್ವ ಪಡೆದಿಲ್ಲ. ಜತೆಗೆ ತಮ್ಮ ಪುತ್ರನಿಗೂ ಭಾರತದ ಪೌರತ್ವವಿದೆ. ಆತ ಹುಟ್ಟಿದ್ದು ಕೂಡ ಭಾರತದಲ್ಲಿ. ಹೀಗಾಗಿ ಸಾನಿಯ ಮತ್ತು ಅವರ ಪುತ್ರ ಭಾರತದಲ್ಲಿ ನಿಶ್ಚಿಂತೆಯಿಂದ ಇರಬಹುದಾಗಿದೆ. ಕೆಲ ನೆಟ್ಟಿಗರು ಪಾಕಿಸ್ತಾನದ ಮಲಿಕ್ ಅವರನ್ನು ಮದುವೆಯಾದ ಕಾರಣಕ್ಕೆ ಸಾಮಿಯಾ ಕೂಡ ಭಾರತ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ Pahalgam Attack: ಪ್ರವಾಸಿಗರ ನರಮೇಧಕ್ಕೆ ದಿಟ್ಟ ಪ್ರತೀಕಾರ; ಮತ್ತೆ ಐವರು ಉಗ್ರರ ಮನೆಗಳು ಧ್ವಂಸ
ಪಾಕಿಸ್ತಾನ ಮೂಲದವರು ದೀರ್ಘಕಾಲ ನೆಲೆಸುವ ವೀಸಾ (ಲಾಂಗ್ ಟರ್ಮ್ ವೀಸಾ- ಎಲ್‌ಟಿವಿ) ಅಡಿ ಭಾರತಕ್ಕೆ ಆಗಮಿಸಿ ಇಲ್ಲಿನವರನ್ನು ವರಿಸಿದ್ದಾರೆ. ಕಾಲಕಾಲಕ್ಕೆ ಆ ವೀಸಾಗಳನ್ನು ನವೀಕರಣ ಮಾಡಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಇಂತಹ ವೀಸಾ ಪಡೆದು ಬಂದಿರುವ ಪಾಕಿಸ್ತಾನದ ಹಿಂದುಗಳಿಗೆ ವಿನಾಯಿತಿ ಇರುತ್ತದೆ. ಆದರೆ ಹತ್ತಿಪ್ಪತ್ತು ವರ್ಷಗಳಿಂದ ಇಲ್ಲೇ ಸಂಸಾರ ಮಾಡುತ್ತಿರುವವರ ಭವಿಷ್ಯ ಏನು ಎಂಬುದರ ಬಗ್ಗೆ ಏನೆಂದು ಗೊತ್ತಾಗುತ್ತಿಲ್ಲ.