ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diogo Jota: 10 ದಿನದ ಹಿಂದೆ ಮದುವೆಯಾಗಿದ್ದ ಖ್ಯಾತ ಫುಟ್ಬಾಲಿಗ ಅಪಘಾತದಲ್ಲಿ ಸಾವು

ವರದಿಗಳ ಪ್ರಕಾರ, ಜೋಟಾ ಮತ್ತು ಅವರ ಸಹೋದರ ಲ್ಯಾಂಬೋರ್ಘಿನಿಯ ಕಾರಿನಲ್ಲಿದ್ದರು, ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ಆ ಕಾರಿನ ಟೈರ್ ಸ್ಫೋಟಗೊಂಡಿತು. ಕಾರು ರಸ್ತೆಯಿಂದ ಹೊರಗುಳಿದು ಸ್ವಲ್ಪ ಸಮಯದ ನಂತರ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮವಾಗಿ ಇಬ್ಬರೂ ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದರು ಎನ್ನಲಾಗಿದೆ.

ರಸ್ತೆ ಅಪಘಾತ; ಪೋರ್ಚುಗಲ್‌ನ ಖ್ಯಾತ ಫುಟ್ಬಾಲಿಗ ಡಿಯೋಗೊ ಸಾವು

Profile Abhilash BC Jul 3, 2025 4:54 PM

ಮ್ಯಾಡ್ರಿಡ್‌: ಪೋರ್ಚುಗಲ್ ಮತ್ತು ಲಿವರ್‌ಪೂಲ್(Liverpool) ತಂಡ ಯುವ ಫಾರ್ವರ್ಡ್ ಆಟಗಾರ ಡಿಯೋಗೊ ಜೋಟಾ(Diogo Jota) ಜುಲೈ 3 ರಂದು ಸ್ಪೇನ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದಾರೆ(Jota dies in car accident). 28 ವರ್ಷದ ಜೋಟಾ ಅವರ ವಿವಾಹ 10 ದಿನಗಳ ಹಿಂದಷ್ಟೇ ನಡೆದಿತ್ತು. ಅವರ ಸಹೋದರ, 26 ವರ್ಷದ ವೃತ್ತಿಪರ ಫುಟ್‌ಬಾಲ್ ಆಟಗಾರ ಆಂಡ್ರೆ ಫಿಲಿಪ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಅವರ ಸಾವಿಗೆ ಫುಟ್ಬಾಲ್‌ ಕುಟುಂಬ, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ವರದಿಗಳ ಪ್ರಕಾರ, ಜೋಟಾ ಮತ್ತು ಅವರ ಸಹೋದರ ಲ್ಯಾಂಬೋರ್ಘಿನಿಯ ಕಾರಿನಲ್ಲಿದ್ದರು, ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ಆ ಕಾರಿನ ಟೈರ್ ಸ್ಫೋಟಗೊಂಡಿತು. ಕಾರು ರಸ್ತೆಯಿಂದ ಹೊರಗುಳಿದು ಸ್ವಲ್ಪ ಸಮಯದ ನಂತರ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮವಾಗಿ ಇಬ್ಬರೂ ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದರು ಎನ್ನಲಾಗಿದೆ.

ಜೂನ್ 22 ರಂದು ಪೋರ್ಟೊದಲ್ಲಿ ನಡೆದ ಸಮಾರಂಭದಲ್ಲಿ ಜೋಟಾ ತನ್ನ ದೀರ್ಘಕಾಲದ ಸಂಗಾತಿ ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು. ಇದೀಗ ಹತ್ತು ದಿನಗಳ ನಂತರ ಈ ಅಪಘಾತ ಸಂಭವಿಸಿದೆ.

ಸಹ ಆಟಗಾರ ಜೋಟಾ ಸಾವಿಗೆ ಭಾವನಾತ್ಮಕ ಸಂತಾಪ ಸೂಚಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ, "ನಾವು ರಾಷ್ಟ್ರೀಯ ತಂಡದೊಂದಿಗೆ ಇದ್ದೆವು, ನೀವು ಈಗಷ್ಟೇ ಮದುವೆಯಾಗಿದ್ದೀರಿ. ನಿಮ್ಮ ಕುಟುಂಬ, ನಿಮ್ಮ ಪತ್ನಿ ಮತ್ತು ಮಕ್ಕಳಿಗೆ, ನಾನು ನನ್ನ ಸಂತಾಪ ಸೂಚಿಸುತ್ತೇನೆ ಮತ್ತು ಅವರಿಗೆ ಜಗತ್ತಿನ ಎಲ್ಲಾ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ನೀವು ಯಾವಾಗಲೂ ಅವರೊಂದಿಗೆ ಇರುತ್ತೀರಿ ಎಂದು ನನಗೆ ತಿಳಿದಿದೆ. ಡಿಯೋಗೊ ಮತ್ತು ಆಂಡ್ರೆ, ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ನಾವೆಲ್ಲರೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ರೊನಾಲ್ಡೊ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.