Thug Life: ಸೋತ ಬೆನ್ನಲ್ಲೇ ಸೈಲೆಂಟ್ ಆಗಿ ಒಟಿಟಿಗೆ ಎಂಟ್ರಿ ಕೊಟ್ಟ ಥಗ್ ಲೈಫ್! ಯಾವಾಗ ಸ್ಟ್ರೀಮಿಂಗ್?
'ಥಗ್ ಲೈಫ್’ ಸಿನಿಮಾ ಈಗಾಗಲೇ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿ ನೀರಸ ಪ್ರತಿಕ್ರಿಯೆ ಪಡೆದು ಕೊಂಡಿತ್ತು. ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಸಿನಿಮಾವನ್ನು ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಆದರೆ ಈಗ ಸಿನಿಮಾ ಸದ್ದಿಲ್ಲದ್ದೇ ಒಟಿಟಿಗೆ (OTT) ಪ್ರವೇಶ ನೀಡಿದೆ.


ನವದೆಹಲಿ: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ (Thug Life)ಸಿನಿಮಾ ಈಗಾಗಲೇ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾದ ಪ್ರಚಾರ ಸಂದ ರ್ಭದಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟ ಕದಲ್ಲಿ ಸಿನಿಮಾವನ್ನು ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ.ಆದರೆ ಈಗ ಸಿನಿಮಾ ಸದ್ದಿಲ್ಲದ್ದೇ ಒಟಿಟಿಗೆ (OTT) ಪ್ರವೇಶ ನೀಡಿದೆ. ಚಿತ್ರ ಮಂದಿರಗಳಲ್ಲಿ ಕಳಪೆ ಪ್ರದರ್ಶನದ ನಂತರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಅವರ 'ಥಗ್ ಲೈಫ್' ಸಿನಿಮಾವು ಭಾರಿ ನಿರೀಕ್ಷೆ ಯನ್ನು ಹುಟ್ಟುಹಾಕಿತ್ತು. ಸುಮಾರು 38 ವರ್ಷಗಳ ಬಳಿಕ ಕಮಲ್ ಮತ್ತು ಮಣಿರತ್ನಂ ಅವರು 'ಥಗ್ ಲೈಫ್' ಸಿನಿಮಾಕ್ಕಾಗಿ ಒಂದಾಗಿದ್ದರು. ಹೀಗಾಗಿ ಪ್ರೇಕ್ಷಕರು ಕೂಡ ಈ ಸಿನಿ ಮಾಕ್ಕಾಗಿ ಹೆಚ್ಚು ಆಸಕ್ತಿ ವಹಿಸಿದ್ದರು..ಆದರೆ ಮಣಿ- ಕಮಲ್ ಫರ್ಪಮೆನ್ಸ್ ಬಗೆ ಫ್ಯಾನ್ಸ್ ಬೇಸರಗೊಂಡಿದ್ದರು.ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಬೇಸರಗೊಂಡು ಟ್ರೋಲ್ ಮಾಡಿದ್ದರು.
ಜೂನ್ 5ಕ್ಕೆ ತೆರೆಗೆ ಬಂದಿದ್ದ 'ಥಗ್ ಲೈಫ್' ಚಿತ್ರ ತಿಂಗಳಿಗೂ ಮುನ್ನ ಓಟಿಟಿಗೆ ಲಗ್ಗೆ ಇಟ್ಟಿದೆ. ಯಾವುದೇ ಸುಳಿವು ನೀಡದೇ ಏಕಾಏಕಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನವೇ ಒಟಿಟಿಗೆ ಮಾರಾಟವಾಗಿತ್ತು. ನೆಟ್ಫ್ಲಿಕ್ಸ್, ಬರೋಬ್ಬರಿ 110 ಕೋಟಿ ರೂಪಾಯಿ ಹಣ ನೀಡಿ ‘ಥಗ್ ಲೈಫ್’ ಸಿನಿಮಾ ಖರೀದಿ ಮಾಡಿತ್ತು.ಆದರೆ ಸಿನಿಮಾ ಸೋತಿದ್ದರಿಂದ ಆ ಮೊತ್ತವನ್ನು ಕಡಿಮೆ ಮಾಡಲಾಗಿದೆ ಎನ್ನಲಾಗ್ತಿದೆ.
ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ
ಥಗ್ ಲೈಫ್’ ಸಿನಿಮಾ ಇಂದಿನಿಂದ ಅಂದರೆ ಜುಲೈ 3 ರಿಂದ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ನೆಟ್ಫ್ಲಿಕ್ಸ್ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ. 'ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ ಕೃಷ್ಣನ್, ಅಭಿರಾಮಿ, ಜೋಜು ಜಾರ್ಜ್, ನಾಸರ್, ಮಹೇಶ್ ಮಂಜ್ರೇಕರ್ ಇನ್ನೂ ಹಲವಾರು ಸ್ಟಾರ್ ನಟರು ನಟಿಸಿದ್ದಾರೆ.ಇದನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿದ್ದು, ಖ್ಯಾತ ನಟ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ