Sonu Sood: ಬಡ ರೈತನ ಕಷ್ಟಕ್ಕೆ ಸಹಾಯಹಸ್ತ ಚಾಚಿದ ಬಾಲಿವುಡ್ ನಟ- ಮತ್ತೆ ಹೃದಯಗೆದ್ದ ನಟ ಸೋನು ಸೂದ್!
ಮಹಾರಾಷ್ಟ್ರದ ಲಾತೂರ್‌ನಲ್ಲಿ ಬರಗಾಲ ಪೀಡಿತ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ವೃದ್ಧ ದಂಪತಿಗಳು ಉಳುಮೆ ಮಾಡಲು ಎತ್ತುಗಳಿಲ್ಲದೆ ತಾವೇ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗಷ್ಟೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ದೃಶ್ಯ ಕಂಡ ನಟ ಸೋನು ಸೂದ್ ಕೃಷಿಗಾಗಿ ಜಾನುವಾರುಗಳ ಖರೀದಿಗೆ ಸಹಾಯ ಮಾಡುವುದಾಗಿ ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ.


ನವದೆಹಲಿ: ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ವಿಲನ್ ಆಗಿ ಕಾಣಿಸಿಕೊಂಡರು ರಿಯಲ್ ಲೈಫ್ ನಲ್ಲಿ ಹೀರೋ ಆದ ಅನೇಕ ಸೆಲೆಬ್ರಿಟಿಗಳನ್ನು ನಾವು ಕಂಡಿದ್ದೇವೆ. ಅಂತವರಲ್ಲಿ ನಟ ಸೋನು ಸೋದ್ (Sonu Sood) ಕೂಡ ಒಬ್ಬರು. ಬಡಜನರಿಗೆ, ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ, ರೈತರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿರುತ್ತಾರೆ. ಈ ಬಾರಿ ವೃದ್ಧ ರೈತ ದಂಪತಿಗಳಿಗೆ ಕೃಷಿಗಾಗಿ ಜಾನುವಾರು ಖರೀದಿಸಲು ಸಹಾಯ ಮಾಡುವುದಾಗಿ ನಟ ಸೋನು ಸೂದ್ ತಿಳಿಸಿದ್ದು, ಈ ಸಾಮಾಜಿಕ ಸೇವೆಯು ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಪಡೆಯುವಂತಾಗಿದೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಬರಗಾಲ ಪೀಡಿತ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟದಿಂದ ಬಳ ಲುತ್ತಿರುವ ವೃದ್ಧ ದಂಪತಿಗಳು ಉಳುಮೆ ಮಾಡಲು ಎತ್ತುಗಳಿಲ್ಲದೆ ತಾವೇ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗಷ್ಟೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ದೃಶ್ಯ ಕಂಡ ನಟ ಸೋನು ಸೂದ್ ಕೃಷಿಗಾಗಿ ಜಾನುವಾರುಗಳ ಖರೀದಿಗೆ ಸಹಾಯ ಮಾಡು ವುದಾಗಿ ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ಟರ್ ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು ನಟ ಸೋನು ಸೋದ್ ಪ್ರತಿಕ್ರಿಯೆ ಬಳಕೆ ದಾರರ ಮೆಚ್ಚುಗೆ ಪಾತ್ರವಾಗಿದೆ. ಅಂತೆಯೇ ನಟ ಸೋನು ಅವರ ಕಾಮೆಂಟ್ ಕಂಡು ನೆಟ್ಟಿ ಗರೊಬ್ಬರು ಅವರ ಬಳಿ ವಿಶೇಷ ಮನವಿ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಎತ್ತುಗಳನ್ನು ಯಾರು ಓಡಿಸುತ್ತಾರೆ?, ನೀವು ಕೊಡುವುದಾದರೆ ಒಂದು ಟ್ರ್ಯಾಕ್ಟರ್ ಕಳುಹಿಸಿ ಕೊಡಿ ಸರ್, ಅದು ಅವರಿಗೆ ಅನುಕೂಲ ಆಗಲಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು.
ಇದನ್ನು ಓದಿ:Ramayana Movie: ಯಶ್ ನಟನೆಯ ರಾಮಾಯಣ ಸಿನಿಮಾದ ಫಸ್ಟ್ ಗ್ಲಿಂಬ್ಸ್ ರಿಲೀಸ್
ಈ ಕಾಮೆಂಟ್ ಗೆ ಪ್ರತಿಕ್ರಿಯಿಸಿದ ನಟ ಸೋನು ಸೂದ್ ಅವರು, ನಿಮ್ಮ ಸಲಹೆ ಸರಿ ಇರಬಹುದು ಆದರೆ ಅವರಿಗೆ ಟ್ರ್ಯಾಕ್ಟರ್ ಓಡಿಸುವುದು ಹೇಗೆಂದು ತಿಳಿದಿಲ್ಲ. ಹೀಗಾಗಿ ಜಾನುವಾರುಗಳು ನೀಡು ವುದೇ ಉತ್ತಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಪರದೆಯಲ್ಲಿ ವಿಲನ್ ಆದರೂ ನೀವೇ ನಿಜವಾದ ಹೀರೋ ಸರ್ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಟನ ಈ ಸಮಾಜ ಸೇವೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಹಿಂದಿ, ತಮಿಳು, ತೆಲುಗು , ಕನ್ನಡ ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ತೊಡಗಿ ಕೊಂಡು ನಟ ಸೋನು ಸೋದ್ ಖ್ಯಾತಿ ಪಡೆದಿದ್ದಾರೆ. ಅರುಂಧತಿ, ದಬಂಗ್, ಸ್ಯಾಂಡಲ್ ವುಡ್ ನ ವಿಷ್ಣುವರ್ಧನ ನಂತಹ ಹಿಟ್ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಕ್ರಿಯವಾಗಿರುವ ಇವರು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಕೂಡ ಹೊಂದಿದ್ದಾರೆ.