Vastu Tips: ನೆಮ್ಮದಿಯ ನಿದ್ರೆಗಾಗಿ ಪಾಲಿಸಬೇಕು ವಾಸ್ತು ನಿಯಮ
Vastu for sleep: ಆಸ್ತಿ ಸಂಪತ್ತು ಯಾವುದು ಇಲ್ಲದಿದ್ದರೂ ಚಿಂತೆಯಿಲ್ಲ. ನೆಮ್ಮದಿಯ ನಿದ್ರೆ ಒಂದಿದ್ದರೆ ಸಾಕು ಎನ್ನುತ್ತಾರೆ ಅನುಭವಿಗಳು. ಜೀವನದಲ್ಲಿ ಸುಖ, ಶಾಂತಿ ನೆಮ್ಮದಿಯ ನಿದ್ರೆಗಾಗಿ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ಯಾಕೆಂದರೆ ನಿದ್ರೆ ಎನ್ನುವುದು ಕೇವಲ ನಾವು ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕೊಡುವ ವಿಶ್ರಾಂತಿ. ಇದರಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ನಿದ್ರೆ ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಭಾಗ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿದ್ರೆ (Vastu for sleep) ಹೆಚ್ಚಾದರೂ ತೊಂದರೆಯೇ ಕಡಿಮೆಯಾದರೂ ಸಮಸ್ಯೆಯೇ. ಪ್ರತಿಯೊಬ್ಬರ ದಿನಚರಿ, ಆರೋಗ್ಯ, ವಯಸ್ಸಿಗೆ ಅನುಗುಣವಾಗಿ ನಿದ್ರೆ (vastu for peaceful sleep) ಮಾಡಲೇಬೇಕು. ಇಲ್ಲವಾದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣತೊಡಗುತ್ತವೆ. ಇದರೊಂದಿಗೆ ನಿತ್ಯದ ಕೆಲಸ ಕಾರ್ಯಗಳಲ್ಲೂ ವ್ಯತ್ಯಾಸಗಳಾಗುತ್ತವೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಬಯಸಿದರೆ ನಿದ್ರೆಯ ಅಭ್ಯಾಸಗಳಲ್ಲಿ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ವಾಸ್ತು (vastu Tips) ತಜ್ಞರು.
ವಾಸ್ತು ಶಾಸ್ತ್ರದ ಪ್ರಕಾರ ನಾವು ಮಲಗುವ ದಿಕ್ಕು ನಮ್ಮ ದೇಹದ ಶಕ್ತಿ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಸರಿಯಾದ ದಿಕ್ಕು, ಸರಿಯಾದ ಪರಿಸರದಲ್ಲಿ ಮಲಗುವುದರಿಂದ ಜೀವನದಲ್ಲಿ ಸಕಾರಾತ್ಮಕತೆಯನ್ನು ತಂದುಕೊಳ್ಳಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.
ನಿದ್ರೆಯ ದಿಕ್ಕು ಮತ್ತು ಕೆಲವು ಅಭ್ಯಾಸಗಳು ನಮ್ಮ ಶಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಕುರಿತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಹೇಳುವುದು ಹೀಗೆ:
ದೇಹದ ಕಾಂತಿ ಮತ್ತು ಭೂಮಿಯ ಕಾಂತಿ ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿದ್ರೆ ಮಾಡಲು ಸರಿಯಾದ ದಿಕ್ಕನ್ನು ಆಯ್ದುಕೊಳ್ಳುವುದು ಬಹುಮುಖ್ಯ. ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ದೇಹ ಮತ್ತು ಮಾನಸಿಕ ಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಮಲಗುವಾಗ ತಲೆಯನ್ನು ಪೂರ್ವ ದಿಕ್ಕಿಗೆ ಇಡುವುದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ವಿಶೇಷವಾಗಿ ಪ್ರಯೋಜನಕಾರಿ. ಪೂರ್ವ ದಿಕ್ಕು ಉದಯಿಸುತ್ತಿರುವ ಸೂರ್ಯನಿಗೆ ಸಂಬಂಧಿಸಿದೆ. ಇದು ಹೊಸ ಅವಕಾಶಗಳನ್ನು ತರುತ್ತದೆ. ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಮಾನಸಿಕ ಸ್ಪಷ್ಟತೆ, ಶಕ್ತಿ ಮತ್ತು ಯಶಸ್ಸಿಗೆ ಉತ್ತೇಜನ ಸಿಗುತ್ತದೆ. ಈ ದಿಕ್ಕಿನಲ್ಲಿ ಮಲಗುವುದು ಧ್ಯಾನ, ಏಕಾಗ್ರತೆಯ ಶಕ್ತಿ ಹೆಚ್ಚಿಸುವುದಕ್ಕೂ ಒಳ್ಳೆಯದು.
ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದು ತಟಸ್ಥ ಪರಿಣಾಮವನ್ನು ಬೀರುತ್ತದೆ. ಇದು ಹೆಚ್ಚು ಪ್ರಯೋಜನಕಾರಿ ಅಥವಾ ಹಾನಿಕಾರಕವಲ್ಲ. ಈ ದಿಕ್ಕು ಮಧ್ಯಮ ಸ್ಥಿರತೆ ಮತ್ತು ಯಶಸ್ಸನ್ನು ಉತ್ತೇಜಿಸುತ್ತದೆ. ಪೂರ್ವ ಅಥವಾ ದಕ್ಷಿಣ ದಿಕ್ಕುಗಳಂತೆ ಪರಿಣಾಮಕಾರಿಯಲ್ಲದಿದ್ದರೂ ಇತರ ದಿಕ್ಕುಗಳು ಲಭ್ಯವಿಲ್ಲದಿದ್ದರೆ ಇದು ಸೂಕ್ತ ಆಯ್ಕೆಯಾಗಿದೆ.
ವಾಸ್ತು ಪ್ರಕಾರ ಯಾವುದೇ ಸಂದರ್ಭವಿರಲಿ ಉತ್ತರದ ಕಡೆಗೆ ತಲೆ ಇಟ್ಟು ಮಲಗಬಾರದು. ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ದೇಹದ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಇದು ಒತ್ತಡ, ಸುಸ್ತು, ನಿದ್ರೆಯ ಸಮಸ್ಯೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ದಿಕ್ಕು ವಿಶೇಷವಾಗಿ ವಯಸ್ಸಾದ ವ್ಯಕ್ತಿಗಳು ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳಿರುವವರಿಗೆ ಹಾನಿಕಾರಕ.
ಇದನ್ನೂ ಓದಿ: Vastu Tips: ಮೊಬೈಲ್ ವಾಲ್‌ಪೇಪರ್ ನಲ್ಲಿ ಬಳಸಲೇಬಾರದ ಚಿತ್ರ, ಬಣ್ಣಗಳು ಯಾವುದು ಗೊತ್ತೇ?
ಇವನ್ನೂ ಗಮನಿಸಿ
- ಇನ್ನು ಮಲಗುವ ಕೋಣೆ ಮನೆಯ ನೈಋತ್ಯ ಮೂಲೆಯಲ್ಲಿರಬೇಕು. ಈಶಾನ್ಯದಲ್ಲಿರುವ ಮಲಗುವ ಕೋಣೆ ಅಸಮತೋಲನವನ್ನು ಉಂಟು ಮಾಡುತ್ತದೆ.
- ಹಾಸಿಗೆಯನ್ನು ಯಾವಾಗಲೂ ಬಲವಾದ ಗೋಡೆಯ ವಿರುದ್ಧ ಇರಿಸಿ. ಹಾಸಿಗೆಯನ್ನು ನೇರವಾಗಿ ಸೂರ್ಯ ಕಿರಣ ಬೀಳುವ ಸ್ಥಳ ಅಥವಾ ಕೋಣೆಯ ಮುಖ್ಯ ಬಾಗಿಲಿನ ಎದುರು ಇಡುವುದನ್ನು ತಪ್ಪಿಸಿ. ಯಾಕೆಂದರೆ ಇದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ಹಾಸಿಗೆಯ ಕೆಳಗೆ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿ. ಅಸ್ತವ್ಯಸ್ತತೆಯು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
- ಕನ್ನಡಿಯನ್ನು ಯಾವತ್ತೂ ನೇರವಾಗಿ ಹಾಸಿಗೆಯ ಮುಂದೆ ಇಡಬೇಡಿ. ಯಾಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.