ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hit And Run Accident: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಕಮರಿತು ಕನಸು

ಅಮೆರಿಕ್ಕೆ ಆಂಧ್ರ ಪ್ರದೇಶದ ಯುವತಿಯೊಬ್ಬರು ಹಿಟ್‌ ಆ್ಯಂಡ್‌ ರನ್‌ಗೆ ಬಲಿಯಾಗಿದ್ದಾರೆ. ಗುಂಟೂರಿನ 24 ವರ್ಷದ ವಿ.ದೀಪ್ತಿ ಮೃತರು. ಸ್ನಾತಕೋತ್ತರ ಪದವಿ ಓದಲು ತೆರಳಿದ್ದ ಅವರು ಟೆಕ್ಸಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿಕ್ಷಣ ಪೂರೈಸಲು ಕೆಲವೇ ದಿನಗಳು ಬಾಕಿ ಇದ್ದಾಗ ಈ ದುರಂತ ಸಂಭವಿಸಿದೆ.

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ಸಾವು

ವಿ.ದೀಪ್ತಿ.

Profile Ramesh B Apr 18, 2025 11:03 PM

ವಾಷಿಂಗ್ಟನ್‌: ಉನ್ನತ ಶಿಕ್ಷಣದ ಕನಸು ಕಂಡು ಅಮೆರಿಕ್ಕೆ ತೆರಳಿದ್ದ ಆಂಧ್ರ ಪ್ರದೇಶದ ಯುವತಿಯೊಬ್ಬರು ಹಿಟ್‌ ಆ್ಯಂಡ್‌ ರನ್‌ಗೆ ಬಲಿಯಾಗಿದ್ದಾರೆ (Hit And Run Accident). ಆಂಧ್ರ ಪ್ರದೇಶದ ಗುಂಟೂರಿನ 24 ವರ್ಷದ ವಿ.ದೀಪ್ತಿ (V Deepthi) ಅಮೆರಿಕದಲ್ಲಿ ಬಲಿಯಾದ ಯುವತಿ. ಸ್ನಾತಕೋತ್ತರ ಪದವಿ ಓದಲು ತೆರಳಿದ್ದ ಅವರು ಟೆಕ್ಸಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿಕ್ಷಣ ಪೂರೈಸಲು ಕೆಲವೇ ದಿನಗಳು ಬಾಕಿ ಇದ್ದಾಗ ಈ ದುರಂತ ಸಂಭವಿಸಿದೆ.

ಟೆಕ್ಸಸ್‌ನ ಡೆಂಟಾನ್‌ನಲ್ಲಿ ನಡೆದ ಅಪಘಾತ ದೀಪ್ತಿ ಅವರ ಜೀವವನ್ನು ಕಸಿದುಕೊಂಡಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ದೀಪ್ತಿ ತಮ್ಮ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಡಿಕ್ಕಿ ಹಡೆಯಿತು ಎಂದು ಮೂಲಗಳು ತಿಳಿಸಿವೆ.

ʼʼಆಂಧ್ರ ಪ್ರದೇಶದ ಗುಂಟೂರಿನಲ್ಲಿ ಹುಟ್ಟಿ ಬೆಳೆದ ದೀಪ್ತಿ ಉನ್ನತ ಶಿಕ್ಷಣಕ್ಕಾಗೆ ಅಮೆರಿಕಕ್ಕೆ ತೆರಳಿದ್ದರು. ಏ. 12ರಂದು ಅವರು ಕ್ಯಾರಿಲ್ ಅಲ್ ಲಾಗೋ ಡ್ರೈವ್‌ 2300 ಬ್ಲಾಕ್ ಬಳಿಯ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Punjab Grenade attack: ಪಂಜಾಬ್‌ ಗ್ರೆನೇಡ್ ದಾಳಿಯ ಹಂತಕ ಹ್ಯಾಪಿ ಪಾಸಿಯಾ ಅರೆಸ್ಟ್‌

ʼʼದೀಪ್ತಿ ಅವರ ತಲೆಗೆ ತೀವ್ರವಾದ ಗಾಯಗಳಾಗಿದ್ದು, ಏ. 15ರಂದು ನಿಧನರಾದರು. ಅವರ ಸ್ನೇಹಿತೆ ಸ್ನಿಗ್ಧಾ ಅವರಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆʼʼ ಎಂದು ದೀಪ್ತಿಯ ಕುಟುಂಬ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ. ದೀಪ್ತಿ ಉತ್ತರ ಟೆಕ್ಸಾಸ್ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೇಯಲ್ಲಿ ಶಿಕ್ಷಣ ಪೂರ್ಣವಾಗುತ್ತಿತ್ತು.

ʼʼದೀಪ್ತಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೆವು. ಅವಳು ಕೂಡ ಈ ಕ್ಷಣಕ್ಕೆ ಬಹು ದಿನಗಳಿಂದ ಕನಸು ಕಂಡಿದ್ದಳು. ಇದಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಳುʼʼ ಎಂದು ಅವರ ಕುಟುಂಬಸ್ಥರು ದುಃಖ ತೋಡಿಕೊಂಡಿದ್ದಾರೆ.

ʼʼನಾನು ಕೊನೆಯ ಬಾರಿಗೆ ಅವಳಿಗೆ ಕರೆ ಮಾಡಿದಾಗ ತರಗತಿಗೆ ಹೋಗುವ ಅವಸರದಲ್ಲಿದ್ದಳು. ಭಾನುವಾರ ಕರೆ ಮಾಡಿ ಮಾತನಾಡುವುದಾಗಿ ತಿಳಿಸಿದ್ದಳುʼʼ ಎಂದು ದೀಪ್ತಿ ಅವರ ತಂದೆ ಹನುಮಂತ ರಾವ್ ಹೇಳಿದ್ದಾರೆ. ತಮ್ಮ ಜಮೀನನ್ನು ಮಾರಾಟ ಮಾಡಿ ಆಕೆಯನ್ನು ಅಮೆರಿಕಕ್ಕೆ ಕಳುಹಿಸಲಾಗಿತ್ತು. ಏ. 21ರಂದು ಆಕೆಯ ಮೃತದೇಹ ಹೈದರಾಬಾದ್‌ಗೆ ತಲುಪುವ ಸಾಧ್ಯತೆ ಇದೆ. ನರಸರಾವ್ ಪೇಟೆ ಎಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿರುವ ದೀಪ್ತಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಬಹುದೊಡ್ಡ ಕನಸಾಗಿತ್ತು.

ಕಳೆದ ತಿಂಗಳು ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು. ಈ ಘಟನೆ ಹಸಿಯಾಗಿರುವಾಗಲೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ವಿಸ್ಕಾನ್ಸಿನ ಮಿಲ್ವಾಕೀಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ತೆಲಂಗಾಣದ ಜಿ.ಪ್ರವೀಣ್ ಮೃತಪಟ್ಟವರು. ಹೈದರಾಬಾದ್‌ನಲ್ಲಿ ಪದವಿ ಪೂರ್ಣಗೊಳಿಸಿದ ನಂತರ 2023ರಲ್ಲಿ ಅವರು ಅಮೆರಿಕಕ್ಕೆ ತೆರಳಿದ್ದರು.