ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli (Tumkur) News: ತಾಲ್ಲೂಕು ಆಡಳಿತದಿಂದ ಶಿಷ್ಟಾಚಾರ ಉಲ್ಲಂಘನೆ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಡಿಸಿ ಆರೋಪ

ಕಾರ್ಯಕ್ರಮಗಳನ್ನು ಬೇಕಾಬಿಟ್ಟಿ ಮಾಡುವುದಾದರೆ ಜನ ಪ್ರತಿನಿಧಿಗಳಾದರೂ ಏಕಿರಬೇಕು. ಕೇವಲ ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣಾ ತಂತ್ರಕ್ಕೆ ಜನರನ್ನು ಸೇರಿಸಿ ಜಾತ್ರೆ ಮಾಡಿದ್ದಾರೆ. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆ ಉದ್ದೇಶದಿಂದ ಜನರನ್ನು ಮರಳು ಮಾಡಲು ಈ ಕಾರ್ಯ ಕ್ರಮ ಮಾಡಿದ್ದಾರೆ

ತಾಲ್ಲೂಕು ಆಡಳಿತದಿಂದ ಶಿಷ್ಟಾಚಾರ ಉಲ್ಲಂಘನೆ

Profile Ashok Nayak May 3, 2025 7:36 PM

ಚಿಕ್ಕನಾಯಕನಹಳ್ಳಿ : ಶಾಸಕರು ಸಿ.ಬಿ.ಸುರೇಶಬಾಬು ಕಂದಿಕೆರೆಯಲ್ಲಿ ನಡೆಸಿದ ಮನೆ ಬಾಗಿಲಿಗೆ-ಮನೆ ಮಗ ಜನಸ್ಪಂದನ ಕಾರ್ಯಕ್ರಮದಲ್ಲಿ ಸರಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಹಾಗು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅರೋಪಿಸಿದರು. ಪತ್ರಿಕೆ ಯೊಂದಿಗೆ ಮಾತನಾಡಿದ ಅವರು ಸರಕಾರಿ ಕಾರ್ಯಕ್ರಮ ನಡೆಸಿದ್ದರೂ ಕ್ರಿಮಿನಲ್ ಹಿನ್ನಲೆ ಯವರು ಮತ್ತು ಆ ಭಾಗದಲ್ಲಿ ಯಾವುದೇ ಸಂವಿಧಾನ ಬದ್ದ, ರಾಜಕೀಯ ಅಧಿಕಾರ ಇಲ್ಲದವರು ಕೂಡ ಶಾಸಕರ ಕಾರ್ಯಕ್ರಮದ ವೇದಿಕೆ ಮೇಲೆ ಕುರ್ಚಿಯಲ್ಲಿ ಆಸೀನರಾಗಿರುವುದು ಇದು ಶಿಷ್ಟಾಚಾರ ಉಲ್ಲಂಘನೆಯಲ್ಲದೆ ಮತ್ತೇನು? ಇದು ಜೆಡಿಎಸ್ ಪಕ್ಷದ ಕಾರ್ಯಕ್ರಮದಂತಿದೆ. ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಜಿಲ್ಲಾ ಮಂತ್ರಿಗಳ ಸಹಿತ ಕೇಂದ್ರ ಸಚಿವರು, ಡಿಸಿ, ಸಿಇಓ ಹಲವರ ಹೆಸರನ್ನು ಹಾಕಿಸಿ ಜೆಡಿಎಸ್ ಪಕ್ಷದವರೇ ಕಾರ್ಯಕ್ರಮ ನಡೆಸಿದ್ದನ್ನು ಗಮನಿಸಿದರೆ ತಾಲ್ಲೂಕು ಆಡಳಿತದ ವೈಫಲ್ಯವನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: Chikkanayakanahalli (Tumkur) News: ಗುಣಮಟ್ಟದ ಹಾಲು ಪೂರೈಕೆಯಲ್ಲಿ ತಾಲ್ಲೂಕು ಉತ್ತಮ ದೃಢತೆ

ಕಾರ್ಯಕ್ರಮಗಳನ್ನು ಬೇಕಾಬಿಟ್ಟಿ ಮಾಡುವುದಾದರೆ ಜನ ಪ್ರತಿನಿಧಿಗಳಾದರೂ ಏಕಿರಬೇಕು. ಕೇವಲ ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣಾ ತಂತ್ರಕ್ಕೆ ಜನರನ್ನು ಸೇರಿಸಿ ಜಾತ್ರೆ ಮಾಡಿದ್ದಾರೆ. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆ ಉದ್ದೇಶದಿಂದ ಜನರನ್ನು ಮರಳು ಮಾಡಲು ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಟೀಕಿಸಿದರು.

ಸರಕಾರಿ ಕಾರ್ಯಕ್ರಮವಲ್ಲ

ಮನೆ ಬಾಗಿಲಿಗೆ-ಮನೆ ಮಗ ಕಾರ್ಯಕ್ರಮವು ಸರಕಾರಿ ಕಾರ್ಯಕ್ರಮವಲ್ಲ. ಶಾಸಕರ ಮೌಖಿಕ ಸೂಚನೆ ಮೇರೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಆ ಸಮಾರಂಭದಲ್ಲಿ ಭಾಗಿಯಾಗಿದ್ದೇವು. ಆಹ್ವಾನ ಪತ್ರಿಕೆಯಲ್ಲಿರುವ ಗಣ್ಯರ ಹೆಸರುಗಳನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳು ಪರಿಷ್ಕರಿಸಿದ್ದರು ಎಂದು ತಹಸೀಲ್ದಾರ್ ಪುರಂದರ್ ತಿಳಿಸಿದರು.