ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸುತ್ತಿರುವ ಗ್ಲಾನ್ಸ್‌: ಮೇ 22ರ ಎಕ್ಸ್ ಕ್ಲೂಸಿವ್ ಕಾರ್ಯಕ್ರಮದಲ್ಲಿ ಟೆಕ್ ದಿಗ್ಗಜರ ಉಪಸ್ಥಿತಿ

ಸ್ಮಾರ್ಟ್‌ ಫೋನ್ ಲಾಕ್ ಸ್ಕ್ರೀನ್‌ಗಳನ್ನು ಪರಿವರ್ತಿಸುವ ಗ್ರಾಹಕ ತಂತ್ರಜ್ಞಾನ ಕಂಪನಿ ಆಗಿರುವ ಗ್ಲಾನ್ಸ್‌ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೇ ತಿಂಗಳಾಂತ್ಯಕ್ಕೆ ನಡೆಯಲಿರುವ ಒಂದು ಉನ್ನತ ಮಟ್ಟದ ಎಕ್ಸ್ ಕ್ಲೂಸಿವ್ ಕಾರ್ಯಕ್ರಮದ ಕುರಿತು ಭಾರತದ ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ಚರ್ಚೆಗಳು ಜೋರಾಗಿವೆ.

ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸುತ್ತಿರುವ ಗ್ಲಾನ್ಸ್‌

Profile Ashok Nayak May 21, 2025 4:06 PM

ಬೆಂಗಳೂರು: ಸ್ಮಾರ್ಟ್‌ ಫೋನ್ ಲಾಕ್ ಸ್ಕ್ರೀನ್‌ಗಳನ್ನು ಪರಿವರ್ತಿಸುವ ಗ್ರಾಹಕ ತಂತ್ರಜ್ಞಾನ ಕಂಪನಿ ಆಗಿರುವ ಗ್ಲಾನ್ಸ್‌ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೇ ತಿಂಗಳಾಂತ್ಯಕ್ಕೆ ನಡೆಯಲಿರುವ ಒಂದು ಉನ್ನತ ಮಟ್ಟದ ಎಕ್ಸ್ ಕ್ಲೂಸಿವ್ ಕಾರ್ಯಕ್ರಮದ ಕುರಿತು ಭಾರತದ ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ಚರ್ಚೆಗಳು ಜೋರಾಗಿವೆ. ಈ ಕಾರ್ಯಕ್ರಮದ ಕುರಿತು ಕುತೂಹಲ ಜಾಸ್ತಿ ಯಾಗುತ್ತಿದ್ದು, ಯಾರೆಲ್ಲಾ ಆಗಮಿಸಲಿದ್ದಾರೆ ಎಂಬ ಕುರಿತು ನಿರೀಕ್ಷೆ ಹುಟ್ಟಿಕೊಂಡಿದೆ. ಈ ನಡುವೆ ಬಲ್ಲ ಮೂಲಗಳು ಗ್ಲಾನ್ಸ್ ಸಂಸ್ಥೆಯು ಮೇ 22ರಂದು ತನ್ನ ವರ್ಷದ ಅತ್ಯಂತ ಎಕ್ಸ್ ಕ್ಲೂಸಿವ್ ಮತ್ತು ಆಪ್ತ ಟೆಕ್ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧವಾಗುತ್ತಿದೆ ಎಂದು ತಿಳಿಸಿವೆ.

ಆಹ್ವಾನಿತರಿಗೆ ಮಾತ್ರ ಸೀಮಿತವಾದ ಈ ವಿಶೇಷ ಔತಣಕೂಟದಲ್ಲಿ ಭಾರತದ ತಂತ್ರಜ್ಞಾನ ಮತ್ತು ಸ್ಟಾರ್ಟ್‌ ಅಪ್ ವಲಯದ ಕೆಲವು ದೊಡ್ಡ ಹೆಸರುಗಳು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಫೌಂಡರ್ ಗಳು, ಸಿಇಓಗಳು, ಹೂಡಿಕೆದಾರರು ಸೇರಿದಂತೆ ಮಹತ್ವದ ವ್ಯಕ್ತಿಗಳೇ ಇದ್ದಾರೆ ಎನ್ನಲಾಗಿದ್ದು, ಆಹ್ವಾನಿತರ ಪಟ್ಟಿಯಲ್ಲಿ ನಂದನ್ ನೀಲೇಕಣಿ, ಭವೀಶ್ ಅಗರವಾಲ್, ನಿಖಿಲ್ ಕಾಮತ್, ಕುನಾಲ್ ಶಾ, ಹರಿ ಮೆನನ್, ಅಭಿಷೇಕ್ ಬನ್ಸಾಲ್, ಆದಿತ್ ಪಾಲಿಚಾ, ಅನಂತ್ ನಾರಾಯಣನ್, ಬಿನ್ನಿ ಬನ್ಸಲ್, ಕಲ್ಯಾಣ್ ಕೃಷ್ಣಮೂರ್ತಿ, ಮೀನಾ ಗಣೇಶ್, ಮತ್ತು ಫಣೀಂದ್ರ ಸಾಮಾ ಸೇರಿದಂತೆ ಇತರ ದಿಗ್ಗಜರು ಇರುವುದಾಗಿ ಮೂಲಗಳು ತಿಳಿಸಿವೆ.

ಈ ಯೋಜನೆಯ ಕುರಿತು ತಿಳಿದಿರುವ ವ್ಯಕ್ತಿಯೊಬ್ಬರು ತಮ್ಮ ಹೆಸರು ಬಹಿರಂಗ ಪಡಿಸಲು ನಿರಾಕರಿಸಿ, "ಈ ಕಾರ್ಯಕ್ರಮ ಬಹು ದೊಡ್ಡ ಕಾರ್ಯಕ್ರಮವಾಗಲಿದೆ, ಬಹುಶಃ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಕ್ಷಣವಾಗಲೂ ಬಹುದು," ಎಂದು ಹೇಳಿದ್ದಾರೆ. ಮತ್ತೊಬ್ಬ ಗಣ್ಯ ಆಹ್ವಾನಿತ ವ್ಯಕ್ತಿಯೊಬ್ಬರು ತಾವು ಇನ್‌ಮೊಬಿ ಮತ್ತು ಗ್ಲಾನ್ಸ್ ಸಂಸ್ಥಾಪಕ ನವೀನ್ ತಿವಾರಿಯಿಂದ ವೈಯಕ್ತಿಕ ಆಹ್ವಾನವನ್ನು ಸ್ವೀಕರಿಸಿರುವುದಾಗಿ ದೃಢಪಡಿಸಿದರೂ, ಆ ಕುರಿತು ಹೆಚ್ಚಿನ ವಿವರ ಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.

ಇದನ್ನೂ ಓದಿ: Bangalore News: ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು

ಕಂಪನಿಯು ಕಾರ್ಯಕ್ರಮದ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳದೆ ಮೌನವಾಗಿದ್ದರೂ, ಗ್ಲಾನ್ಸ್ ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಒಂದು ಪ್ರಮುಖ ಆವಿಷ್ಕಾರವನ್ನು ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದೆ ಎಂಬ ಊಹಾಪೋಹಗಳು ಜೋರಾಗಿವೆ. ಗ್ಲಾನ್ಸ್ ಸಂಸ್ಥೆಯು ಎಐ ಆಧರಿತ ತಂತ್ರಜ್ಞಾನದಲ್ಲಿ ಒಂದು ಪ್ರಮುಖ ಸಂಶೋಧನೆಯನ್ನು ಮಾಡಿದ್ದು, ಸಾರ್ವಜನಿಕ ಬಿಡುಗಡೆಗೂ ಮುನ್ನ ಇದನ್ನು ಪ್ರಮುಖ ಉದ್ಯಮ ಭಾಗೀದಾರರಿಗೆ ಪರಿಚಯಿಸಲಿದೆ ಎಂದು ಮೂಲಗಳು ಹೇಳಿವೆ.

ಈ ಕಾರ್ಯಕ್ರಮಕ್ಕೆ ಮುಂಚಿತವಾಗಿ ತನ್ನ ಬೆಂಗಳೂರಿನ ಕಚೇರಿಗಳ ಸುತ್ತಮುತ್ತ ಗ್ಲಾನ್ಸ್ ಭದ್ರತೆ ಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ಯಾಕೆಂದರೆ ನಗರದ ಕೆಲವು ಉನ್ನತ ಉದ್ಯಮ ನಾಯಕರು ಮತ್ತು ಶ್ರೀಮಂತ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಬರುವುದು ಇದಕ್ಕೆ ಕಾರಣವಾಗಿದೆ. "ಹಲವು ವಾರಗಳಿಂದ ಸಿದ್ಧತೆಗಳು ನಡೆದಿವೆ. ಇದು ಕೇವಲ ಔತಣಕೂಟ ಮಾತ್ರವೇ ಅಲ್ಲ, ಈ ಕಾರ್ಯಕ್ರಮ ಒಂದು ದೊಡ್ಡ ಸ್ಟೇಟ್ ಮೆಂಟ್ ಆಗಿ ಮೂಡಿಬರಲಿದೆ" ಎಂದು ಈ ಏರ್ಪಾಡಿನ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಗೂಗಲ್‌ ನ ಫೌಂಡೇಷನಲ್ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಗಳನ್ನು ಬಳಸಿಕೊಂಡು ಜನರೇಟಿವ್ ಎಐ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಗೂಗಲ್ ಜೊತೆಗೆ ಗ್ಲಾನ್ಸ್ ಕಾರ್ಯತಂತ್ರದ ಸಹಭಾಗಿತ್ವವನ್ನು ಘೋಷಿಸಿತ್ತು. ಹಾಗಾಗಿ ಈ ಹಿನ್ನೆಲೆಯಲ್ಲಿ ಕೆಲವು ಮಾಧ್ಯಮ ಗಳು ಗ್ಲಾನ್ಸ್ ಸಂಸ್ಥೆಯು "ಎಐ ಫರ್ಸ್ಟ್" ಫೋನ್ ಅನುಭವ ಒದಗಿಸುವುದರ ವಿಚಾರದಲ್ಲಿ ಕೆಲಸ ಮಾಡುತ್ತಿರಬಹುದು ಎಂದು ಸುಳಿವು ನೀಡಿದ್ದು, ಇದು ಕಂಪನಿಯ ಮುಂದಿನ ಹಂತದ ದೊಡ್ಡ ಗುರಿಯಾಗಿರಬಹುದು ಎನ್ನಲಾಗಿದೆ.

ಈ ಕಾರ್ಯಕ್ರಮದ ಸಿದ್ಧತೆಯು ಗ್ಲಾನ್ಸ್‌ ನ ಮೂಲ ಕಂಪನಿಯಾದ ಇನ್‌ಮೊಬಿಯ ಬಹಳ ಮಹತ್ವದ ಕಾಲಘಟ್ಟದಲ್ಲಿ ನಡೆಯುತ್ತಿದೆ. ಯಾಕೆಂದರೆ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಇನ್ ಮೊಬಿ ಸಂಸ್ಥೆಯು ಸಾರ್ವಜನಿಕ ಪಟ್ಟಿಗೆ ಸೇರ್ಪಡೆಗೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. 2007ರಲ್ಲಿ ಸ್ಥಾಪನೆಯಾದ ಇನ್‌ ಮೊಬಿ ಭಾರತದ ಮೊದಲ ಟೆಕ್ ಯೂನಿಕಾರ್ನ್ ಎಂಬ ಗೌರವವನ್ನು ಹೊಂದಿದೆ ಮತ್ತು ದೇಶದಲ್ಲಿ ಹುಟ್ಟಿಕೊಂಡ ಕೆಲವು ಲಾಭದಾಯಕ ಉತ್ಪನ್ನ ಕಂಪನಿಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಗಳಿಸಿದೆ. ಇನ್‌ ಮೊಬಿ ಕಂಪನಿಯು ಸಾರ್ವಜನಿಕ ವೇದಿಕೆಗೆ ಯಶಸ್ವಿವಾಗಿ ಪ್ರವೇಶಿಸಿದಲ್ಲಿ ಈ ಬೆಳವಣಿಗೆಯು ಭಾರತದ ಕನ್ಸ್ಯೂಮರ್ ಟೆಕ್ ವಲಯದ ವಿಶ್ವಾಸವನ್ನು ಹೆಚ್ಚಿಸಬಹುದು ಮತ್ತು ಗ್ಲಾನ್ಸ್‌ ನ ಈ ಬೆಳವಣಿಗೆಯು ಈ ವಿಶ್ವಾಸಕ್ಕೆ ಮತ್ತಷ್ಟು ಇಂಬು ನೀಡಬಹುದು ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

ಒಟ್ಟಾರೆಯಾಗಿ ಇದೀಗ ಎಲ್ಲರ ಗಮನ ಮೇ 22ರ ಗ್ಲಾನ್ಸ್ ಕಾರ್ಯಕ್ರಮದತ್ತ ನೆಟ್ಟಿದೆ. ಅಂದು ಏನು ನಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಅವತ್ತು ಉತ್ಪನ್ನ ಬಿಡುಗಡೆ ನಡೆಯಬಹುದು, ಕಾರ್ಯತಂತ್ರದ ಬದಲಾವಣೆಯಾಗಿರಬಹುದು, ಅಥವಾ ಗ್ಲಾನ್ಸ್‌ ನ ಎಐ ಆವಿಷ್ಕಾರಗಳ ಪ್ರದರ್ಶನ ನಡೆಯಬಹುದು ಹೀಗೇ ಏನೇ ನಡೆದರೂ ಇದೊಂದು ಬಹಳ ಕಾಲ ನೆನಪಲ್ಲಿ ಉಳಿಯುವ ರಾತ್ರಿಯಾಗಲಿದೆ ಎಂದು ಬಲ್ಲವರು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ನಿರೀಕ್ಷೆ ಮತ್ತಷ್ಟು ಮಗದಷ್ಟು ಹೆಚ್ಚಾಗಿದೆ.