Pakistan High Commission: ಭಾರತದಿಂದ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಯ ಉಚ್ಚಾಟನೆ; 8 ದಿನಗಳ ಅಂತರದಲ್ಲಿ ಇಬ್ಬರು ಅಧಿಕಾರಿಗಳ ವಜಾ
ದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕ್ ಅಧಿಕಾರಿಯೊಬ್ಬರನ್ನು ಬುಧವಾರ (ಮೇ 21) ಭಾರತದ ಹೊರ ಹಾಕಲಾಗಿದೆ. ಆ ಅಧಿಕಾರಿಗೆ 24 ಗಂಟೆಯ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ. ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಅವರನ್ನು ದೇಶದಿಂದ ಹೊರ ಹಾಕುವ ಆದೇಶ ಹೊರಡಿಸಿದೆ.

ಪಾಕಿಸ್ತಾನ ಹೈಕಮಿಷನ್.

ಹೊಸದಿಲ್ಲಿ: ದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ (Pakistan High Commission) ಕೆಲಸ ಮಾಡುತ್ತಿರುವ ಪಾಕ್ ಅಧಿಕಾರಿಯೊಬ್ಬರನ್ನು ಬುಧವಾರ (ಮೇ 21) ದೇಶದಿಂದ ಹೊರ ಹಾಕಲಾಗಿದೆ. ಆ ಅಧಿಕಾರಿಗೆ 24 ಗಂಟೆಯ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ. ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಅವರನ್ನು ದೇಶದಿಂದ ಹೊರ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ 13ರಂದು ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ನೊಬ್ಬ ಅಧಿಕಾರಿಯನ್ನು ಹೊರ ಕಳುಹಿಸಲಾಗಿತ್ತು. ಈ ಮೂಲಕ 8 ದಿನಗಳ ಅಂತರದಲ್ಲಿ ಇಬ್ಬರು ಅಧಿಕಾರಿಗಳನ್ನು ಹೊರ ಹಾಕಿದಂತಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿ ಮತ್ತು ನಂತರ ಉಂಟಾದ 2 ದೇಶಗಳ ನಡುವಿನ ಮಿಲಿಟರಿ ಘರ್ಷಣೆಯ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ʼʼದಿಲ್ಲಿಯ ಪಾಕ್ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕ್ ಅಧಿಕಾರಿಯೊಬ್ಬರು, ಭಾರತದಲ್ಲಿ ಅವರ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರನ್ನು ಅನುಚಿತ ವ್ಯಕ್ತಿ" ಎಂದು ಭಾರತ ಸರ್ಕಾರ ಘೋಷಿಸಿದೆ ಎಂಬುದಾಗಿ ವಿದೇಶಾಂಗ ಸಚಿವಾಲಯ (Ministry of External Affairs) ತಿಳಿಸಿದೆ. ಅದಕ್ಕಾಗಿ 24 ಗಂಟೆಗಳ ಒಳಗೆ ಭಾರತ ಬಿಟ್ಟು ಹೋಗುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
#BREAKING
— Nabila Jamal (@nabilajamal_) May 21, 2025
India Expels Pakistani Diplomat, Declares Him 'Persona Non Grata'
- Pakistani official at High Commission in Delhi ordered to leave in 24 hrs
- Accused of "activities inconsistent with diplomatic status"
- MEA issues strong demarche to Pak envoy#India #Pakistan pic.twitter.com/shOKyivW6D
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಧ್ಯಾಪಕನಿಗೆ ಮಧ್ಯಂತರ ಜಾಮೀನು
ಆದಾಗ್ಯೂ, ಪಾಕ್ ಅಧಿಕಾರಿಯ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪವನ್ನು ವಿದೇಶಾಂಗ ಸಚಿವಾಲಯ ಬಹಿರಂಗಪಡಿಸಿಲ್ಲ.
ಈ ಹಿಂದೆ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಅಧಿಕಾರಿಯೊಬ್ಬರು ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ದೇಶದಿಂದ ಹೊರ ಹಾಕಲಾಗಿತ್ತು. ಇದೇ ವೇಳೆ ವಿದೇಶಾಂಗ ಸಚಿವಾಲಯವು ನಿರ್ದಿಷ್ಟ ಆರೋಪಗಳನ್ನು ಬಹಿರಂಗಪಡಿಸದಿದ್ದರೂ, ಅವರು ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿರುವ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇ 11ರಂದು ದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಅಧಿಕಾರಿಯೊಂದಿಗೆ ಸಂಬಂಧ ಹೊಂದಿರುವ ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದರು.
ಪಾಕಿಸ್ತಾನದಿಂದ ಪ್ರತೀಕಾರದ ಕ್ರಮ
ಪ್ರತೀಕಾರದ ಕ್ರಮವಾಗಿ ಬಳಿಕ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯೊಬ್ಬರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿ ದೇಶಕ್ಕೆ ವಾಪಸ್ ಕಳುಹಿಸಿತ್ತು.
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡ ಭಾರತ ಮೇ 7ರಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳಲ್ಲಿನ ಮೂಲ ಸೌಕರ್ಯಗಳನ್ನು ನಾಶಪಡಿಸಿತ್ತು. ಪಾಕಿಸ್ತಾನ ಮೂಲದ ನಿಷೇಧಿತ ಎಲ್‌ಇಟಿ ಭಯೋತ್ಪಾದಕ ಗುಂಪಿನ ರೆಸಿಸ್ಟೆನ್ಸ್ ಫ್ರಂಟ್ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಬಳಿಕ ಉಂಟಾದ ಸಂಘರ್ಷದ ವಾತಾವರಣ 2 ದೇಶಗಳ ನಡುವೆ ಯುದ್ಧದ ವಾತಾವರಣ ಮೂಡಿತ್ತು. ಕೊನೆಗೆ ಮೇ 10ರಂದು ಕದನ ವಿರಾಮ ಜಾರಿಗೆ ಬಂದಿತ್ತು.