ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Piyush Goel Column: ಜಿಇಎಂ: ಸಾರ್ವಜನಿಕ ಖರೀದಿಯ ಮಿಂಚು

ಜಿಇಎಂ ನಿಸ್ಸಂದೇಹವಾಗಿ ಸಾರ್ವಜನಿಕ/ಸರಕಾರಿ ಖರೀದಿ ಕ್ಷೇತ್ರದಲ್ಲಿ ತಾಂತ್ರಿಕ ದೈತ್ಯನಾಗಿ ಹೊರ ಹೊಮ್ಮಿದೆ. ವ್ಯವಹಾರದ ಪ್ರಮಾಣವು ಜಿಇಎಂ ಅನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕೊರಿಯಾದ ‘ಕೋನೆಪ್ಸ್’ನಂಥ ಸುಸ್ಥಾಪಿತ ಸಂಸ್ಥೆಗಳನ್ನು ಮೀರಿಸುವ ಮೂಲಕ ವಿಶ್ವದ ಅತಿ ದೊಡ್ಡ ಸಾರ್ವ ಜನಿಕ/ಸರಕಾರಿ ಖರೀದಿ ಪೋರ್ಟಲ್ ಮಾಡುವ ಸಾಧ್ಯತೆಯಿದೆ

ಜಿಇಎಂ: ಸಾರ್ವಜನಿಕ ಖರೀದಿಯ ಮಿಂಚು

Profile Ashok Nayak May 21, 2025 8:07 AM

ಸಾಧನಾಪಥ

ಪಿಯೂಷ್‌ ಗೋಯೆಲ್

‘ಗವರ್ನ್‌ಮೆಂಟ್ ಇ-ಮಾರ್ಕೆಟ್‌ ಪ್ಲೇಸ್’ (ಜಿಇಎಂ) ಬಹಳ ವೇಗವಾಗಿ ಸರಕಾರಿ/ಸಾರ್ವಜನಿಕ ಖರೀದಿಗೆ ಪಾರದರ್ಶಕ, ಸಮಗ್ರ ಮತ್ತು ಪರಿಣಾಮಕಾರಿ ವೇದಿಕೆಯನ್ನು ಒದಗಿಸುವಲ್ಲಿ ವಿಶ್ವ ನಾಯಕನಾಗಿ ಮೂಡಿಬಂದಿದೆ. ಇದು 1.6 ಲಕ್ಷಕ್ಕೂ ಹೆಚ್ಚು ಸರಕಾರಿ ಖರೀದಿದಾರರನ್ನು 23 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರೊಂದಿಗೆ ಬೆಸೆಯುತ್ತದೆ, ಇದು ಪ್ರಧಾನಿ ನರೇಂದ್ರ ಮೋದಿಯವರ 2047ರ ‘ವಿಕಸಿತ್ ಭಾರತ್’ ದೃಷ್ಟಿಕೋನದ ಪ್ರಮುಖ ಎಂಜಿನ್ ಆಗಿದೆ. ‌ಪ್ರಧಾನಿ ಮೋದಿ ಅವರು ಪರಿವರ್ತಕ ಡಿಜಿಟಲ್ ಉಪಕ್ರಮವನ್ನು ಪ್ರಾರಂಭಿಸಿದ ಒಂಬತ್ತು ವರ್ಷಗಳಲ್ಲಿ, ಜಿಇಎಂ ಭ್ರಷ್ಟಾಚಾರವನ್ನು ತೊಡೆದುಹಾಕುವ ಮೂಲಕ ಮತ್ತು ಸಣ್ಣ ಪಟ್ಟಣಗಳಲ್ಲಿನ ನವೋ ದ್ಯಮಗಳು, ಎಂಎಸ್‌ಎಂಇಗಳು, ಮಹಿಳೆಯರು ಮತ್ತು ಉದ್ಯಮಗಳಿಗೆ ವ್ಯಾಪಾರ ಅವಕಾಶಗಳನ್ನು ನೀಡುವ ಮೂಲಕ, ಸರಕಾರವು ಸರಕು ಮತ್ತು ಸೇವೆಗಳನ್ನು ಖರೀದಿಸುವ ವಿಧಾನದಲ್ಲಿ ಕ್ರಾಂತಿ ಯನ್ನುಂಟು ಮಾಡಿದೆ.

ಬಳಕೆದಾರ ಸ್ನೇಹಿ ವೇದಿಕೆಯು ನಿಜವಾದ ರತ್ನವೇ ಆಗಿದ್ದು, ಪೂರೈಕೆ ಮತ್ತು ವಿಲೇವಾರಿ ನಿರ್ದೇಶ ನಾಲಯವನ್ನು ಸ್ಥಳಾಂತರಿಸಿದೆ- ಇದು ಪಾರದರ್ಶಕವಲ್ಲದ ಮತ್ತು ಸ್ಪರ್ಧಾತ್ಮಕವಲ್ಲದ ವ್ಯವಸ್ಥೆ ಗಳನ್ನು ಹೊಂದಿತ್ತು, ಅದು ಸವಲತ್ತು ಹೊಂದಿದ್ದ ಕೆಲವರಿಗೆ ಅನ್ಯಾಯದ ಪ್ರಯೋಜನ ವನ್ನು ನೀಡಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಕಚೇರಿ, ವಾಣಿಜ್ಯ ಭವನವನ್ನು ಹಿಂದೆ ಈ ಸಂಸ್ಥೆಯು ನೆಲೆಗೊಂಡಿದ್ದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ.

ಅದ್ಭುತ ಬೆಳವಣಿಗೆ: 2016ರಲ್ಲಿ ಪ್ರಾರಂಭವಾದಾಗಿನಿಂದ, ಜಿಇಎಂ ಪೋರ್ಟಲ್‌ನಲ್ಲಿ 13.4 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಆರ್ಡರ್‌ಗಳ ವಹಿವಾಟು ಮಾಡಲಾಗಿದೆ. ವೇದಿಕೆಯಲ್ಲಿ ಸರಕಾರಿ ಖರೀದಿಯು 2024-25ರಲ್ಲಿ ದಾಖಲೆಯ 5.43 ಲಕ್ಷ ಕೋಟಿ ರು.ಗೆ ಏರಿತು. ಜಿಇಎಂ ತನ್ನ ವಾರ್ಷಿಕ ವ್ಯವಹಾರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ 7 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Rangaswamy Mookanahalli Column: ಒತ್ತಾಸೆಯಾದವರಿಗೆ ನಾವೂ ಹೆಗಲಾಗಬೇಕಲ್ಲವೇ?

ಜಿಇಎಂ ನಿಸ್ಸಂದೇಹವಾಗಿ ಸಾರ್ವಜನಿಕ/ಸರಕಾರಿ ಖರೀದಿ ಕ್ಷೇತ್ರದಲ್ಲಿ ತಾಂತ್ರಿಕ ದೈತ್ಯನಾಗಿ ಹೊರ ಹೊಮ್ಮಿದೆ. ವ್ಯವಹಾರದ ಪ್ರಮಾಣವು ಜಿಇಎಂ ಅನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕೊರಿಯಾದ ‘ಕೋನೆಪ್ಸ್’ನಂಥ ಸುಸ್ಥಾಪಿತ ಸಂಸ್ಥೆಗಳನ್ನು ಮೀರಿಸುವ ಮೂಲಕ ವಿಶ್ವದ ಅತಿ ದೊಡ್ಡ ಸಾರ್ವ ಜನಿಕ/ಸರಕಾರಿ ಖರೀದಿ ಪೋರ್ಟಲ್ ಮಾಡುವ ಸಾಧ್ಯತೆಯಿದೆ. ಜಿಇಎಂ ಪ್ರಾಮಾಣಿಕ ವ್ಯವಹಾರ ಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದೆ, ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭಾರತದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಿದೆ.

ಈ ಸಂದರ್ಭದಲ್ಲಿ, ಜಿಇಎಂನ ಮಹತ್ವವು ಹಣಕಾಸಿನ ವಿಷಯದಲ್ಲಿ ಅದರ ಅದ್ಭುತ ಬೆಳವಣಿಗೆ ಯನ್ನು ದಾಟಿ ಪಸರಿಸಿದೆ. ಇದು ಯಾವುದೇ ಇ-ಕಾಮರ್ಸ್ ದೈತ್ಯನನ್ನು ಅಸೂಯೆ ಪಡುವಂತೆ ಮಾಡುತ್ತದೆ.

ಸಮಾನ ಬೆಳವಣಿಗೆಯ ಎಂಜಿನ್: ಪ್ರಧಾನಿ ಮೋದಿಯವರ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂಬ ಧ್ಯೇಯಕ್ಕೆ ಅನುಗುಣವಾಗಿ ಜಿಇಎಂ ಸಮಾನ ಬೆಳವಣಿಗೆಯ ನಿರ್ಣಾಯಕ ಎಂಜಿನ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನವೋದ್ಯಮಗಳು, ಸಣ್ಣ ವ್ಯವಹಾರಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಸರಕಾರಿ ಖರೀದಿದಾರರಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ.

ಪ್ರವೇಶಕ್ಕೆ ಇರುವ ಅಡೆತಡೆಗಳನ್ನು ತೆಗೆದು ಹಾಕುವ ಮೂಲಕ, ವೇದಿಕೆಯು ಸಣ್ಣ ಸ್ವದೇಶಿ ವ್ಯವಹಾರೋದ್ಯಮಗಳು ಇ-ಟೆಂಡರ್‌ಗಳಲ್ಲಿ ಭಾಗವಹಿಸಲು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ನೀಡುತ್ತದೆ. ಎಲ್ಲರನ್ನೂ ಒಳಗೊಳ್ಳುವಿಕೆಯ ತತ್ವದಿಂದ ಮಾರ್ಗದರ್ಶನ ಪಡೆದಿರುವ ಜಿಇಎಂ, ಸಣ್ಣ ವ್ಯವಹಾರೋದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ವಿವಿಧ ಕಾರ್ಯತಂತ್ರದ ಉಪಕ್ರಮಗಳನ್ನು ಸಂಯೋಜಿಸಿದೆ.

ಇವುಗಳಲ್ಲಿ ಸರಕಾರಿ ಖರೀದಿದಾರರಿಗೆ ಎಂಎಸ್‌ಇಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳು ನೀಡುವ ಉತ್ಪನ್ನಗಳು ಮತ್ತು ಸೇವೆಗಳನ್ನು ಗುರುತಿಸಲು ಹಾಗೂ ಆಯ್ಕೆ ಮಾಡಲು ಸಹಾಯ ಮಾಡುವ ವ್ಯವಸ್ಥೆಗಳು ಸೇರಿವೆ.

ಗುರಿಗಳನ್ನು ಮೀರುವುದು: ಜಿಇಎಂನಲ್ಲಿ ಸ್ಟಾರ್ಟ್-ಅಪ್ ರನ್‌ವೇ ಮತ್ತು ವೊಮಾನಿಯಾನಂಥ
ಮೀಸಲಾದ ಅಂಗಡಿ ಮುಂಭಾಗಗಳು ಈ ವ್ಯವಹಾರಗಳ ಗೋಚರತೆಯನ್ನು ಮತ್ತು ಸಾರ್ವಜನಿಕ/ಸರಕಾರಿ ಖರೀದಿಯಲ್ಲಿ ಅವುಗಳ ಪಾಲನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿವೆ. ಇದು ಸರಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಂದ (ಎಂಎಸ್‌ಇ) ಶೇ.25ರಷ್ಟು ಮತ್ತು ಮಹಿಳಾ ನೇತೃತ್ವದ ವ್ಯವಹಾರಗಳಿಂದ ಶೇ.3ರಷ್ಟು ಖರೀದಿಯ ಗುರಿಗಳನ್ನು ಈಡೇರಿಸಲು ಮತ್ತು ಮೀರಲು ಸಹಾಯ ಮಾಡಿದೆ. ಜಿಇಎಂನಲ್ಲಿ ನಡೆಯುವ ವಹಿವಾಟಿನಲ್ಲಿ ಸುಮಾರು ಶೇ.38ರಷ್ಟನ್ನು ಎಂಎಸ್‌ಇಗಳಿಗೆ ನೀಡಲಾಗುತ್ತದೆ ಮತ್ತು ಮಹಿಳಾ ಉದ್ಯಮಗಳಿಂದ ಖರೀದಿಯು ಸುಮಾರು ಶೇ.4ರಷ್ಟಿದೆ.

ದೊಡ್ಡ ಉಳಿತಾಯ: ಈ ಬದಲಾವಣೆಗಳು ಕೆಲವು ಆರ್ಡರ್ಗಳಿಗೆ ಶೇ.33ರಿಂದ 96ರವರೆಗಿನ ಉಳಿ ತಾಯಕ್ಕೆ ಕಾರಣವಾಗಿವೆ. ದೇಶದ ಸಾಮಾನ್ಯ ನಾಗರಿಕರ ಪ್ರಯೋಜನಕ್ಕಾಗಿ ವ್ಯಾಪಾರ ಮಾಡಲು ಅನುಕೂಲಕರ ವ್ಯವಸ್ಥೆ ಮತ್ತು ಜೀವನವನ್ನು ಸುಲಭಗೊಳಿಸುವ ಮೋದಿ ಸರಕಾರದ ಧ್ಯೇಯಕ್ಕೆ ಅನುಗುಣವಾಗಿ ಈ ಗಮನಾರ್ಹ ವೆಚ್ಚ ಕಡಿತವು ಸ್ವಾಗತಾರ್ಹ ಬದಲಾವಣೆಯಾಗಿದೆ.

ವಿಶ್ವಬ್ಯಾಂಕ್‌ನ ಸ್ವತಂತ್ರ ಮೌಲ್ಯಮಾಪನವು ಜಿಇಎಂನಲ್ಲಿ ಖರೀದಿದಾರರು ಸರಾಸರಿ ಬೆಲೆಯಲ್ಲಿ ಸುಮಾರು ಶೇ.9.75 ರಷ್ಟು ಉಳಿಸುತ್ತಾರೆ ಎಂದು ತೋರಿಸುತ್ತದೆ. ಇದು ತೆರಿಗೆದಾರರ ಹಣವನ್ನು ಬಳಸಿಕೊಳ್ಳುವ ಸಾರ್ವಜನಿಕ ಖರೀದಿಯಲ್ಲಿ ಅಂದಾಜು 115000 ಕೋಟಿ ರು.ಗಳಷ್ಟು ದೊಡ್ಡ
ಉಳಿತಾಯಕ್ಕೆ ಕಾರಣವಾಗಿದೆ. ಜಿಇಎಂ ಮೂಲಕ ಖರೀದಿಯು ಸರಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ 20000 ಕೋಟಿ ರು. ಗುತ್ತಿಗೆ ಒಪ್ಪಂದದಲ್ಲಿ ಹಿಮ್ಮುಖ ಹರಾಜಿನ ಮೂಲಕ 2000 ಕೋಟಿ ರು. ಉಳಿಸಲು ಸಹಾಯ ಮಾಡಿತು.

ರಕ್ಷಣಾ ಉಪಕರಣಗಳು, ಲಸಿಕೆಗಳು, ಡ್ರೋನ್‌ಗಳು ಮತ್ತು ವಿಮೆಯಂಥ ಸೇವೆಗಳ ಪಾರದರ್ಶಕ ಮತ್ತು ವೆಚ್ಚ-ಪರಿಣಾಮಕಾರಿ ಖರೀದಿಗೆ ಜಿಇಎಂ ಸಹಾಯ ಮಾಡಿದೆ. ಸಣ್ಣ ಉದ್ಯಮಗಳಿಗೆ ಪ್ರಮುಖ ಪರಿಹಾರ ಎಂಬಂತೆ, ಜಿಇಎಂ ಇತ್ತೀಚೆಗೆ ತನ್ನ ವಹಿವಾಟು ಶುಲ್ಕವನ್ನು ಗಣ ನೀಯವಾಗಿ ಕಡಿಮೆ ಮಾಡಿದೆ. 10 ಲಕ್ಷ ರು.ಗಿಂತ ಹೆಚ್ಚಿನ ಮೊತ್ತದ ಆರ್ಡರ್‌ಗಳು ಶೇ.0.30ರಷ್ಟು ಕಡಿಮೆ ವಹಿವಾಟು ಶುಲ್ಕವನ್ನು ಹೊಂದಿರುತ್ತವೆ. ಆದರೆ 10 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ಆರ್ಡರ್‌ ಗಳು 3 ಲಕ್ಷ ರು. ಮಿತಿಯ ಶುಲ್ಕವನ್ನು ಹೊಂದಿರುತ್ತವೆ- ಇದು ಹಿಂದಿನ 72.50 ಲಕ್ಷ ರು.ಗಿಂತ ಗಮನಾರ್ಹ ಇಳಿಕೆಯಾಗಿದೆ.

ತಂತ್ರಜ್ಞಾನ, ಎಐ: ಬಲಿಷ್ಠವಾದ ತಾಂತ್ರಿಕ ಮೂಲಸೌಕರ್ಯದೊಂದಿಗೆ, ತಾಂತ್ರಿಕ ಪರಿಹಾರ ಗಳನ್ನು ಬಳಸಿಕೊಂಡು ವ್ಯವಹಾರ ಮಾಡಲು ಹೊಸ ಮತ್ತು ಸುಲಭವಾದ ಮಾರ್ಗಗಳನ್ನು ನೀಡುವ ಮೂಲಕ ವೇದಿಕೆ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಜಿಇಎಂ GeMAI ಎಂಬ ಕೃತಕ ಬುದ್ಧಿ ಮತ್ತೆ-ಚಾಲಿತ ಚಾಟ್‌ಬಾಟ್ ಅನ್ನು ನಿಯೋಜಿಸಿದೆ.

ಇದು ಸಂವಾದಾತ್ಮಕ ವಿಶ್ಲೇಷಣೆ ಮತ್ತು ವ್ಯವಹಾರ ಬುದ್ಧಿಮತ್ತೆಯಲ್ಲಿ ತರಬೇತಿ ಪಡೆದ ಸಾಧನ ವಾಗಿದೆ. ಸ್ಮಾರ್ಟ್ ಚಾಟ್ ಬಾಟ್ 8 ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಜಿಇಎಂ ಪೋರ್ಟಲ್‌ ನಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಧ್ವನಿ ಆಜ್ಞೆಯ ಕಾರ್ಯವನ್ನು ಒಳಗೊಂಡಂತೆ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿದೆ.

ಜಿಇಎಂ ಕೂಡ ಎಂಎಸ್‌ಇ ಮಾರಾಟಗಾರರಿಗೆ ಹಣಕಾಸು ಉತ್ಪನ್ನಗಳನ್ನು ನೀಡುತ್ತದೆ. ಅರ್ಹ ಖರೀದಿ ಆರ್ಡರ್‌ಗಳಿಗೆ 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಆಸ್ತಿ ಜಾಮೀನು ಇಲ್ಲದೆ ಹಣಕಾಸು ಸಹಾಯ ನೀಡುತ್ತದೆ. ಈ ಪ್ಲಾಟ್ ಫಾರ್ಮ್ 10 ಲಕ್ಷ ರು.ವರೆಗೆ ಸಾಲ ಪಡೆಯುವುದಕ್ಕಾಗಿ ‘ಜಿಇಎಂ ಸಹಾಯ್ 2.0’ (GeM Sahay 2.0) ಅನ್ನು ಅಳವಡಿಸಿದೆ.

ಇದು ಸಾಲಗಳನ್ನು ಪಡೆಯಲು ಏಕಗವಾಕ್ಷದಂತೆ ಕೆಲಸ ಮಾಡುತ್ತದೆ. ಈ ವೇದಿಕೆಯನ್ನು ಹೆಚ್ಚು ಒಳಗೊಳ್ಳಲು ಮತ್ತು ಸ್ಪರ್ಧಾತ್ಮಕವಾಗಿ ಮಾಡಲು ಇನ್ನಷ್ಟು ಉಪಕ್ರಮಗಳು ಮತ್ತು ತಂತ್ರಜ್ಞಾನ ಪರಿಹಾರಗಳು ಕಾರ್ಯಾನುಷ್ಠಾನ ಹಂತದಲ್ಲಿವೆ.

ಜಿಇಎಂ ಪೋರ್ಟಲ್ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಪ್ರಧಾನಿ ಮೋದಿಯವರ ಅಭಿವೃದ್ಧಿ ಉದ್ದೇಶಗಳಿಗೆ ಪ್ರಮುಖ ಎಂಜಿನ್ ಆಗಿ ಒದಗಿಬಂದಿದೆ. ಸಮಾಜದ ದುರ್ಬಲರಿಗೆ ಶಕ್ತಿ ನೀಡಲು, ಅವರನ್ನು ಸಶಕ್ತಗೊಳಿಸಿ ಮೇಲೆತ್ತಲು ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು ಇದು ಇನ್ನಷ್ಟು ಹೆಚ್ಚುವರಿ ಪ್ರಯತ್ನಗಳನ್ನು ಮಾಡುತ್ತದೆ. ಜತೆಗೆ ತೆರಿಗೆ ಪಾವತಿಸುವವರ ಹಣವನ್ನು ಶ್ರೇಷ್ಠ ಗುಣಮಟ್ಟದ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಖರೀದಿಸಲು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸುತ್ತದೆ.

(ಲೇಖಕರು ಕೇಂದ್ರ ಜವಳಿ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಸಚಿವರು)