ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PBKS vs KKR: ಪಂಜಾಬ್‌ ಕಿಂಗ್ಸ್‌ ಪರ ನೂತನ ದಾಖಲೆ ಬರೆದ ಪ್ರಭ್‌ಸಿಮ್ರನ್

ಪ್ರಭ್‌ಸಿಮ್ರನ್‌ಗೂ ಮೊದಲು ಅನ್‌ಕ್ಯಾಪ್ಟ್‌ ಆಟಗಾರನಾಗಿ ಪಂಜಾಬ್ ಕಿಂಗ್ಸ್ ಪರ ಅತ್ಯಧಿಕ ರನ್‌ ಗಳಿಸಿದ ದಾಖಲೆ ಮನನ್ ವೋಹ್ರಾ ಹೆಸರಿನಲ್ಲಿತ್ತು. ವೋಹ್ರಾ 2013 ರಿಂದ 2017 ರವರೆಗೆ ಪಂಜಾಬ್‌ ಪರ ಆಡಿ 957 ರನ್ ಗಳಿಸಿದ್ದರು. ಇದೀಗ ಅವರ ದಾಖಲೆ ಪತನಗೊಂಡಿದೆ.

ಪಂಜಾಬ್‌ ಕಿಂಗ್ಸ್‌ ಪರ ನೂತನ ದಾಖಲೆ ಬರೆದ ಪ್ರಭ್‌ಸಿಮ್ರನ್

Profile Abhilash BC Apr 27, 2025 10:28 AM

ಕೋಲ್ಕತಾ: ಪಂಜಾಬ್‌ ಕಿಂಗ್ಸ್‌ ತಂಡ ಯುವ ಬಲಗೈ ಬ್ಯಾಟರ್‌ ಪ್ರಭ್‌ಸಿಮ್ರನ್ ಸಿಂಗ್‌(Prabhsimran Singh) ಅವರು ಐಪಿಎಲ್‌(IPL 2025)ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಪಂಜಾಬ್ ಕಿಂಗ್ಸ್(PBKS vs KKR) ಪರ ಸಾವಿರ ರನ್‌ ಪೂರ್ತಿಗೊಳಿಸಿದ ಮೊದಲ ಅನ್‌ಕ್ಯಾಪ್ಟ್‌(ಅಂತಾರಾಷ್ಟ್ರೀಯ ಪಂದ್ಯ ಆಡದ) ಆಟಗಾರ ಎನಿಸಿಕೊಂಡಿದ್ದಾರೆ. ಜತೆಗೆ ತಂಡದ ಪರ 1000 ರನ್ ಗಳಿಸಿದ ಒಟ್ಟಾರೆ 10ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪಂಜಾಬ್‌ ಪರ 43 ಪಂದ್ಯ ಆಡಿರುವ ಅವರು ಒಟ್ಟಾರೆ 1048* ರನ್‌ ಬಾರಿಸಿದ್ದಾರೆ.

ಪ್ರಭ್‌ಸಿಮ್ರನ್‌ಗೂ ಮೊದಲು ಅನ್‌ಕ್ಯಾಪ್ಟ್‌ ಆಟಗಾರನಾಗಿ ಪಂಜಾಬ್ ಕಿಂಗ್ಸ್ ಪರ ಅತ್ಯಧಿಕ ರನ್‌ ಗಳಿಸಿದ ದಾಖಲೆ ಮನನ್ ವೋಹ್ರಾ ಹೆಸರಿನಲ್ಲಿತ್ತು. ವೋಹ್ರಾ 2013 ರಿಂದ 2017 ರವರೆಗೆ ಪಂಜಾಬ್‌ ಪರ ಆಡಿ 957 ರನ್ ಗಳಿಸಿದ್ದರು. ಇದೀಗ ಅವರ ದಾಖಲೆ ಪತನಗೊಂಡಿದೆ.



ಮಳೆಯಿಂದ ಅರ್ಧಕ್ಕೆ ರದ್ದುಗೊಂಡ ಕೋಲ್ಕತಾ ವಿರುದ್ಧದ ಶನಿವಾರದ ಐಪಿಎಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಂಜಾಬ್ ಪ್ರಭ್‌ಸಿಮ್ರನ್ ಸಿಂಗ್ (83 ರನ್, 49 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಪ್ರಿಯಾಂಶ್ ಆರ್ಯ (69 ರನ್, 35 ಎಸೆತ, 8 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾಟ ನೆರವಿನಿಂದ 4 ವಿಕೆಟ್‌ಗೆ 201 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಚೇಸಿಂಗ್‌ನಲ್ಲಿ ಕೆಕೆಆರ್ ತಂಡ 1 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 7 ರನ್‌ಗಳಿಸಿದಾಗ ಮಳೆ ಆಡಚಣೆಯಿಂದ ಆಟ ನಿಲ್ಲಿಸಲಾಯಿತು. ಬಳಿಕ ಆಟ ಆರಂಭಿಸಲಾಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಫಲಿತಾಂಶವಿಲ್ಲದೇ ರದ್ದಗೊಂಡ ಮೊದಲ ಪಂದ್ಯ ಇದಾಯಿತು.

ಇದನ್ನೂ ಓದಿ IPL 2025: ಹರಾಜಿನ ಎಡವಟ್ಟು ತಂಡದ ವೈಫಲ್ಯಕ್ಕೆ ಕಾರಣ ಎಂದ ಸಿಎಸ್​ಕೆ ಕೋಚ್​

ಬಿರುಸಿನ ಬ್ಯಾಟಿಂಗ್‌ ನಡೆಸಿದ ಪ್ರಭ್‌ಸಿಮ್ರನ್ 49 ಎಸೆತಗಳಿಂದ ತಲಾ 6 ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ 83 ಗಳಿಸಿದರು. ಪ್ರಿಯಾಂಶ್ ಜತೆಗೂಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಜತೆಯಾಟ ನಡೆಸುವ ಮೂಲಕ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಗರಿಷ್ಠ ರನ್‌ಗಳ ಆರಂಭಿಕ ಜತೆಯಾಟದ ನೀಡಿದ ಪಂಜಾಬ್ ಜೋಡಿ ಎಂಬ ದಾಖಲೆ ಕೂಡ ನಿರ್ಮಿಸಿದರು.