Chikkaballapur News: ಕೋಡಿಗಲ್ ರಮೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ ಗಡಿಪಾರಿಗೆ ಒಕ್ಕಲಿಗ ಸಮುದಾಯ ಒತ್ತಾಯ
ಶಾಂತಿ ಸುವವ್ಯಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಪೊಲೀಸ್ ಬುದ್ದಿ ಏನು ಎಂದು ತೋರಿಸಿಕೊಡಬೇಕು. ಇಲ್ಲವಾದಲ್ಲಿ ಇಂತಹ ವ್ಯಕ್ತಿ ಗಳಿಂದ ಶಾಂತಿ ಸುವ್ಯಸ್ಥೆ ಕಾಪಾಡುವುದು ಬಹಳ ಕಷ್ಟವಾಗುತ್ತದೆ.ಈಗಾಗಲೇ ಕೋಡಿಗಲ್ ರಮೇಶ್ ಹಲವು ಅಮಾಯಕರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ದಾಖಲಿಸಿ ಅವರಿಗೆ ಚಿತ್ರ ಹಿಂಸೆ ಕೊಟ್ಟಿ ರುವ ಸಾಕಷ್ಟು ಉದಾಹರಣೆಗಳು ಇವೆ


ಚಿಂತಾಮಣಿ: ತಾಲೂಕಿನ ಮುಂಗಾನಹಳ್ಳಿ ಹೋಬಳಿ ಅತಿ ಸೂಕ್ಷ್ಮ ಪ್ರದೇಶದ ಹೋಬಳಿಯಾಗಿದೆ ಸದರಿ ಹೋಬಳಿಯಲ್ಲಿ ಅನೇಕ ಅಹಿತಕರ ಪ್ರಕರಣಗಳು ನಡೆದು ಚರಿತ್ರೆಯಲ್ಲಿ ದಾಖಲಾಗಿವೆ. ಕಳೆದ 25 ವರ್ಷಗಳ ನಂತರ ಪೊಲೀಸ್ ಇಲಾಖೆ ವೈಫಲ್ಯದಿಂದ ಮತ್ತೆ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದ್ದು ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ಮುಂದಿನ ಅಹಿತಕರ ಘಟನೆಗಳಿಗೆ ತಿಲಾಂಜೆ ಹಾಕುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಕಳೆದ ವಾರ ಕೋಡಿಗಲ್ ಗ್ರಾಮದ ಕೋಳಿ ಫಾರಂಗೆ ಕೋಳಿ ಫೀಡ್ ಮೂಟೆಗಳನ್ನು ಸಾಗಾಣಿಕೆ ಮಾಡುತ್ತಿದ್ದ ಟೆಂಪೋ ವಾಹನದ ಚಾಲಕ ಸೇರಿದಂತೆ ಅದರಲ್ಲಿದ್ದ ಮೂವರ ಮೇಲೆ ದಲಿತ ಮುಖಂಡ ಕೋಡಿಗಲ್ ರಮೇಶ್ ಮತ್ತು ಆತನ ಮಕ್ಕಳು ಮರಣಾಂತಿಕ ಹಲ್ಲೆ ನಡೆಸಿದ್ದರು.
ಸದರಿ ಗಲಾಟೆಯ ಪ್ರಕರಣವನ್ನು ಬಟ್ಲಹಳ್ಳಿ ಪೊಲೀಸರು ದಾಖಲಿಸದೆ ಮೀನಾಮೇಷ ಎಣಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಒಕ್ಕಲಿಗರ ಸಂಘದ ಗೋ ಪಲ್ಲಿ ಜಿಎಸ್ ರಘುನಾಥ್ ರೆಡ್ಡಿ ನೇತೃತ್ವದಲ್ಲಿ ಹೋಬಳಿಯ ಮುಖಂಡರು ಕಳೆದ ವಾರ ಬಟ್ಲಹಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: IPL 2025: ಲಖನೌ ಎದುರು ಆರ್‌ಸಿಬಿ ಸೋತರೆ ಏನು ಕಥೆ? 4 ತಂಡಗಳ ಅಗ್ರ 2ರ ಲೆಕ್ಕಾಚಾರ!
ಇಂತಹ ಹಲ್ಲೆ ಮತ್ತು ದೌರ್ಜನ್ಯ ನಡೆಸುತ್ತಿರುವ ರಮೇಶ್ ಅವರ ಮೇಲೆ ರೌಡಿ ಹಾಳೆ ಸಹ ಇದ್ದು ಅವರನ್ನು ಗಡಿಪಾರು ಮಾಡುವ ಸಲುವಾಗಿ ಇಂದು ಹೋಬಳಿಯ ಎಲ್ಲಾ ಒಕ್ಕಲಿಗ ಮುಖಂಡರು ಪಕ್ಷ ಬೇಧ ಮರೆತು ಬಟ್ಲಹಳ್ಳಿ ಠಾಣೆ ಮುಂಭಾಗ ಇರುವ ರೈಸ್ ಮಿಲ್ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಒಕ್ಕಲಿಗರ ಸಂಘದ ರಾಜ್ಯ ಮುಖಂಡರಾದ ಕೋನಪ್ಪ ರೆಡ್ಡಿ, ಡಾಕ್ಟರ್ ರಮೇಶ್ ಭಾಗವಹಿಸಿ ಮಾತನಾಡಿದ ಅವರುಗಳು ಶಾಂತಿ ಸುವ್ಯಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಪೊಲೀಸ್ ಬುದ್ದಿ ಏನು ಎಂದು ತೋರಿಸಿಕೊಡಬೇಕು. ಇಲ್ಲವಾದಲ್ಲಿ ಇಂತಹ ವ್ಯಕ್ತಿಗಳಿಂದ ಶಾಂತಿ ಸುವ್ಯಸ್ಥೆ ಕಾಪಾಡುವುದು ಬಹಳ ಕಷ್ಟವಾಗುತ್ತದೆ.ಈಗಾಗಲೇ ಕೋಡಿಗಲ್ ರಮೇಶ್ ಹಲವು ಅಮಾಯಕರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ದಾಖಲಿಸಿ ಅವರಿಗೆ ಚಿತ್ರ ಹಿಂಸೆ ಕೊಟ್ಟಿ ರುವ ಸಾಕಷ್ಟು ಉದಾಹರಣೆಗಳು ಇವೆ.ಈ ಕೂಡಲೇ ಅವರಿಗೆ ಗಡಿಪಾರು ಮಾಡದೆ ಇದ್ದರೆ. ಕಾನೂ ನಾತ್ಮಕವಾಗಿ ಒಕ್ಕಲಿಗರ ಸಂಘ ಹೋರಾಟ ಮಾಡುತ್ತದೆ.ಒಂದು ವೇಳೆ ಪೊಲೀಸ್ ಇಲಾಖೆ ಗಡಿ ಪಾರು ಮಾಡಲು ಶಿಫಾರಸ್ಸು ಮಾಡದೆ ಇದ್ದ ಸಂದರ್ಭದಲ್ಲಿ ಒಕ್ಕಲಿಗರ ಸಂಘ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೆಂಪೇಗೌಡ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರಾದ ಗೋಪಲ್ಲಿ ರಘುನಾಥ್ ರೆಡ್ಡಿ,ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕರಾದ ಡಾ!ರಮೇಶ್, ಜನಾರ್ಧನ್,ಬೈರೆಡ್ಡಿ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸ್ಕೂಲ್ ಸುಬ್ಬಾರೆಡ್ಡಿ, ಮಾದಮಂಗಲ ಚಂದ್ರಪ್ಪ, ನಂದನಾA ಶ್ರೀರಾಮ್ ರೆಡ್ಡಿ,ಅಶ್ವಥ್ ರೆಡ್ಡಿ,ಬೋರ್ ವೆಲ್ ರವಿ, ಚೌಡ ರೆಡ್ಡಿ, ನಾರಾಯಣ್ ಸ್ವಾಮಿ,ಎಂ ವೆಂಕಟರವಣಪ್ಪ,ಕೆ ಬಿ ಆರ್ ಬೈರೆಡ್ಡಿ, ಕಡದನಮರಿ ಮಂಜು ನಾಥ್ ರೆಡ್ಡಿ, ಪಾಲು ನಾರಾಯಣಸ್ವಾಮಿ, ಸದಾಶಿವರೆಡ್ಡಿ,ಬೈರೇಗೌಡ, ಚಂದ್ರಶೇಖರ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.