Jagadish Shettar: 2028ಕ್ಕೆ ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದ ಜಗದೀಶ್ ಶೆಟ್ಟರ್
Jagadish Shettar: ಕಾಂಗ್ರೆಸ್ಸಿನಲ್ಲಿ ಒಳಜಗಳ, ಪ್ರಾಕ್ಸಿ ಯುದ್ಧ ನಡೆದಿದೆ. ಸಿದ್ದರಾಮಯ್ಯರನ್ನು ಇಳಿಸಬೇಕೆಂದು ಕೆಲವರು, ಮುಂದುವರಿಸಬೇಕೆಂದು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಬೇಕೆಂದು ಕೆಲ ಶಾಸಕರು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.


ಬೆಳಗಾವಿ: ಡಾ. ಬಾಬಾಸಾಹೇಬ್ ಅಂಬೇಡ್ಕರರ ಹೆಸರಿನ ಪ್ರಶಸ್ತಿ ಕೊಡುವುದರಲ್ಲಿ ಭ್ರಷ್ಟಾಚಾರ ನಡೆದಿದೆ, ಹಣ ವಸೂಲಿ ಮಾಡಿದ್ದಾರೆ ಎಂದು ಸಾಹಿತಿಯೊಬ್ಬರು ಹೇಳಿದ್ದಾರೆ. ರಾಜ್ಯದಲ್ಲಿರುವುದು ನಾಚಿಕೆ ಪಡುವಂಥ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್ (Jagadish Shettar) ಟೀಕಿಸಿದ್ದಾರೆ. ಇಂದು ಜನಾಕ್ರೋಶ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಮ್ಮ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದೆ. ಎಲ್ಲ ಕಡೆ ಜನಾಕ್ರೋಶ ಹೆಚ್ಚಾಗಿದೆ. 2028ರಲ್ಲಿ ಕಾಂಗ್ರೆಸ್ ಪಕ್ಷ ಮನೆಗೆ ಹೋಗುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವತ್ತು ಅಭಿವೃದ್ಧಿ ಕೆಲಸ ಕಾರ್ಯಗಳಿಲ್ಲ. ಎಲ್ಲವೂ ನಿಂತು ಹೋಗಿವೆ. ಕೇವಲ ಭ್ರಷ್ಟಾಚಾರದ ಸರ್ಕಾರವಿದು. ರಾಜಕೀಯದಲ್ಲಿ ತಮ್ಮ ಕೊನೆಯ ಹಂತದ ಕ್ಷಣಗಳೆಂದು ಸಿದ್ದರಾಮಯ್ಯನವರು ಭಾವಿಸಿರಬೇಕು. ಡಿ.ಕೆ. ಶಿವಕುಮಾರ್ ಕಾದುಕೊಂಡು ನಿಂತಿದ್ದಾರೆ. ಇನ್ನು ನವೆಂಬರೋ, ಡಿಸೆಂಬರೋ ಎಂದು ಸಿದ್ದರಾಮಯ್ಯನವರಿಗೆ ಕನಸು ಬೀಳುತ್ತಿರಬೇಕು ಎಂದು ಅವರು ವ್ಯಂಗ್ಯವಾಡಿದರು.
ಈ ಸುದ್ದಿಯನ್ನೂ ಓದಿ | BY Vijayendra: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು ಕೇಂದ್ರದ ವಿರುದ್ಧ ಅಪಪ್ರಚಾರ: ವಿಜಯೇಂದ್ರ
ಕಾಂಗ್ರೆಸ್ಸಿನಲ್ಲಿ ಒಳಜಗಳ, ಪ್ರಾಕ್ಸಿ ಯುದ್ಧ ನಡೆದಿದೆ. ಸಿದ್ದರಾಮಯ್ಯರನ್ನು ಇಳಿಸಬೇಕೆಂದು ಕೆಲವರು, ಮುಂದುವರಿಸಬೇಕೆಂದು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಬೇಕೆಂದು ಕೆಲ ಶಾಸಕರು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.