Cannes Film Festival 2025: ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅಪ್ಸರೆಯಂತೆ ನೆಟ್ಟಿಗರ ಕಣ್ಮನ ಸೆಳೆದ ನಟಿಯರು
ಕಾನ್ಸ್ ಚಲನಚಿತ್ರೋತ್ಸವ ಆರಂಭವಾಗಿದೆ. ಈ ಉತ್ಸವವನ್ನು ಫ್ರಾನ್ಸ್ನ ಫ್ರೆಂಚ್ ರಿವೇರಿಯಾದ ಕ್ಯಾನೆಸ್ ನಗರದಲ್ಲಿ ಆಯೋಜಿ ಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಫಿಲ್ಮ್ ಫೆಸ್ಟಿವಲ್ನಲ್ಲಿ ಸೆಲೆಬ್ರಿಟಿಗಳು ಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆಯನ್ನಿಟ್ಟ ಸುರಸುಂದರಿಯರು ಯಾರು ಗೊತ್ತೇ?



ಊರ್ವಶಿ ರೌಟೇಲಾ:
ಕಾನ್ಸ್ 2025 ರ ರೆಡ್ ಕಾರ್ಪೆಟ್ನಲ್ಲಿ ಊರ್ವಶಿ ರೌಟೇಲಾ ಆಕರ್ಷಕ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ. ಬಹುವರ್ಣದ ಗೌನ್ ಫಿಶ್ಕಟ್ ಆಫ್ ಶೋಲ್ಡರ್ ಡ್ರೆಸ್ ಧರಿಸಿದ್ದರು. ಅದರ ಜೊತೆ ಡ್ರಾಮ್ಯಾಟಿಕ್ ಹೇರ್ ಸ್ಟೈಲ್ ಮತ್ತು ಕ್ರಿಸ್ಟಲ್ ಕಿವಿಯೋಲೆ ಗಳನ್ನು ಧರಿಸಿದ್ದು ಕಿರೀಟದೊಂದಿಗೆ ತನ್ನ ಲುಕ್ ಅನ್ನು ಪೂರ್ಣಗೊಳಿಸಿದರು.

ಪಾಯಲ್ ಕಪಾಡಿಯಾ:
ಭಾರತೀಯ ನಿರ್ದೇಶಕಿ ಪಾಯಲ್ ಕಪಾಡಿಯಾ"ಬಾಸ್ ಲೇಡಿ" ಲುಕ್ ಮೂಲಕ ಜನರ ಗಮನ ಸೆಳೆದರು. ಅವರು ಬ್ಲಾಕ್ ಬ್ರೌನ್ ಬಣ್ಣದ ಪ್ಲೈಡ್ ಸೂಟ್ ಧರಿಸಿದ್ದರು.

ಬೆಲ್ಲಾ ಹದೀದ್:
ಕಾನ್ಸ್ ಫಿಲ್ಮ್ ಪೆಸ್ಟಿವಲ್ ನಲ್ಲಿ ಬೆಲ್ಲಾ ಹದೀದ್ ಕೂಡ ಡಿಪ್ರೆಂಟ್ ಲುಕ್ ಮೂಲಕ ಮಿಂಚಿದ್ದಾರೆ. ಅವರು ಕಪ್ಪು ಬಣ್ಣದ ಲೆಗ್ ಕಟ್ ಗೌನ್ ಧರಿಸಿದ್ದು ಡ್ರೆಸ್ನಲ್ಲಿ ಕಟ್-ಔಟ್ ಡಿಟೇಲಿಂಗ್, ಕೌಲ್ ನೆಕ್ಲೈನ್ ಡಿಸೈನ್ ಹೆಚ್ಚು ಆಕರ್ಷಕವಾಗಿತ್ತು.

ಇರಿನಾ ಶೈಕ್:
ಪೋಲ್ಕಾ ಡಾಟ್ ಆಫ್-ಶೋಲ್ಡರ್ ಡ್ರೆಸ್ ನಲ್ಲಿ ಇರಿನಾ ಶೈಕ್ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡರು. ಟಾಪ್ನಾಟ್ ಮತ್ತು ಡಾಂಗ್ಲರ್ ಇಯರಿಂಗ್ಗಳು ಅವರ ಲುಕ್ನ್ನು ಪೂರ್ಣಗೊಳಿಸಿದೆ.

ಈವಾ ಲಾಂಗೋರಿಯಾ:
ಬ್ಲಾಕ್ - ಸಿಲ್ವರ್ ಆಫ್ ಶೋಲ್ಡರ್ ಗೌನ್ನಲ್ಲಿ ಹಾಲಿವುಡ್ ನಟಿ ಈವಾ ಲಾಂಗೋರಿಯಾ ಕಾಣಿಸಿಕೊಂಡರು. ಸಿಲ್ವರ್ ಶೈನಿಂಗ್ ಪ್ಯಾನಲ್ಗಳೊಂದಿಗೆ ಸ್ಟ್ರಾಪ್ಲೆಸ್ ಫಿಟ್ ಗೌನ್ ಧರಿಸಿ ಆಭರಣಗಳೊಂದಿಗೆ ಕಂಗೊಳಿಸಿದ್ದರು.

ಹೈಡೀ ಕ್ಲಮ್
ಹೈಡೀ ಕ್ಲಮ್ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಹೂವಿನ ವಿನ್ಯಾಸದ ಗೌನ್ ನಲ್ಲಿ ಆಕರ್ಷಕವಾಗಿ ಕಂಡಿದ್ದಾರೆ. ಲಾರೆನ್ ಶ್ವಾರ್ಜ್ ಡೈಮಂಡ್ಸ್, ಸ್ಮೋಕಿ ಐಸ್, ನ್ಯೂಡ್ ಲಿಪ್ ಸ್ಟಿಕ್ ಮತ್ತು ಫ್ರೀ ಹೇರ್ ಸ್ಟೈಲ್ ಮಾಡಿದ್ದರು.

ಶಾನಿನಾ ಶೈಕ್:
ಜಾರ್ಜಿಯೋ ಅರ್ಮಾನಿ ವಿನ್ಯಾಸದ ಬ್ಲಾಕ್ ಮತ್ತು ವೈಟ್ ಗೌನ್ ರೀತಿಯ ಡ್ರೆಸ್ ಧರಿಸಿದ್ದರು. ವೆಲ್ವೆಟ್ ಓಪೆರಾ ಗ್ಲೋವ್ಸ್, ಡೈಮಂಡ್ ರಿಂಗ್ಸ್ ಮತ್ತು ಅಪ್ಡೋ ಹೆರ್ಸ್ಟೈಲ್ಗಳೊಂದಿಗೆ ಮಿಂಚಿದ್ದರು.

ಅಲೆಸಾಂದ್ರಾ ಅಂಬ್ರೋಸಿಯೋ:
ಅಲೆಸಾಂದ್ರಾ ಅಂಬ್ರೋಸಿಯೋ ಮೋನೋಕ್ರೋಮ್ ಗ್ರೀನ್ ಫ್ಲೋರ್-ಲೆಂಥ್ ಗೌನ್ ನಲ್ಲಿ ಮಿಂಚಿದರು. ಡ್ರೆಸ್ ಗೆ ಹೊಂದಿಕೊಳ್ಳುವಂತೆ ಜ್ಯುವೆಲ್ಲರಿಯನ್ನು ಧರಿಸಿದ್ದರು.

ಫರ್ಹಾನಾ ಬೋದಿ:
ಫರ್ಹಾನಾ ಬೋದಿ ಆಕರ್ಷಕ ಗುಲಾಬಿ ಗೌನ್ ನಲ್ಲಿ ಕಾಣಿಸಿಕೊಂಡರು. ಗೌನ್ ನಲ್ಲಿದ್ದ ಫೀದರ್ ಡಿಟೇಲಿಂಗ್ ಮತ್ತು ಡ್ರಾಮಾಟಿಕ್ ಸಿಲುಯೆಟ್ ವಿನ್ಯಾಸ ವಿಶೇಷತೆಯಾಗಿ ಕಂಡಿದ್ದು ಡಿಫರೆಂಟ್ ಲುಕ್ನಲ್ಲಿ ಮಿಂಚಿದ್ದಾರೆ.