ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು, ಆದರೆ…!: ಮೊಹಕೈಫ್‌ ಕೈಫ್‌

ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಭಾರತೀಯ ಟೆಸ್ಟ್‌ ಕ್ರಿಕೆಟ್‌ಗೆ ಭಾರಿ ನಷ್ಟ ಉಂಟಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಪ್ರತಿಕ್ರಿಯಿಸಿದ್ದು, ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ, ಬಿಸಿಸಿಐ ಜೊತೆಗಿನ ಸಂಗತಿಗಳು ಸರಿಯಾಗಿ ಇಲ್ಲದ ಕಾರಣ ಅವರು ಟೆಸ್ಟ್‌ಗೆ ಅನಿರೀಕ್ಷಿತವಾಗಿ ವಿದಾಯ ಹೇಳಿದ್ದಾರೆ ಎಂದು ಕೈಫ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಟೆಸ್ಟ್‌ ನಿವೃತ್ತಿಯನ್ನು ವಿರೋಧಿಸಿದ ಮೊಹಮ್ಮದ್‌ ಕೈಫ್‌!

ವಿರಾಟ್‌ ಕೊಹ್ಲಿಯ ಟೆಸ್ಟ್‌ ನಿವೃತ್ತಿ ಬಗ್ಗೆ ಕೈಫ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Profile Ramesh Kote May 15, 2025 2:20 PM

ನವದೆಹಲಿ: ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ (Rohith Sharma) ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೆ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಮೇ 12 ರಂದು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದರು. ಕೊಹ್ಲಿಯ ಆಘಾತಕಾರಿ ಟೆಸ್ಟ್‌ ವಿದಾಯದ ಬಗ್ಗೆ ವಿಶ್ವದಾದ್ಯಂತ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಅದರಂತೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ ಅನ್ನು ಮುಂದುವರಿಸಲು ಬಯಸಿದ್ದರು. ಆದರೆ, ಬಿಸಿಸಿಐ ಹಾಗೂ ಅವರ ನಡುವಣ ಸಂಗತಿಗಳಿಂದ ಬಲಗೈ ಬ್ಯಾಟ್ಸ್‌ಮನ್‌ ಟೆಸ್ಟ್‌ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಕೈಫ್‌ ಅಂದಾಜಿಸಿದ್ದಾರೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಐಎನ್‌ಎಸ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿ "ವಿರಾಟ್‌ ಕೊಹ್ಲಿಯವರು ಇನ್ನು ಕೆಲ ದಿನಗಳ ಕಾಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು ಎಂದು ಭಾವಿಸುತ್ತೇನೆ. ಆದರೆ ಇದ್ದಕ್ಕಿದ್ದಂತೆ ವಿದಾಯ ಹೇಳಿರುವ ನಿರ್ಧಾರದ ಹಿಂದೆ ಏನಿರಬಹುದು ಎಂದು ಎಲ್ಲರಿಗೂ ಕುತೂಹಲ ಇದೆ. ಆದರೆ ಏನು ಎಂಬುದು ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ," ಎಂದಿದ್ದಾರೆ.

ʻಶ್ರೇಷ್ಠ ಬ್ಯಾಟ್ಸ್‌ಮನ್‌ʼ: ವಿರಾಟ್‌ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಂಡರ್ಸನ್‌!

"ಬಿಸಿಸಿಐ ಮತ್ತು ಕೊಹ್ಲಿ ನಡುವೆ ಕೆಲವು ಆಂತರಿಕ ಸಂಗತಿಗಳು ಸರಿಯಿಲ್ಲದ ಕಾರಣ ಕಳೆದ 5-6 ವರ್ಷಗಳಲ್ಲಿ ಅವರ ಫಾರ್ಮ್‌ ಬಗ್ಗೆ ಚರ್ಚೆಗಳಾಗಿದ್ದು, ಮುಂದಿನ ದಿನಗಳಲ್ಲಿ ತಂಡದಲ್ಲಿ ಅವರಿಗೆ ಸ್ಥಾನ ನೀಡದೇ ಇರುವುದನ್ನು ಬಿಸಿಸಿಐ ಹೇಳಿರಬಹುದು . ಆದರೆ ನಿರ್ದಿಷ್ಟವಾಗಿ ಏನು ಎಂಬುದು ಯಾರಿಗೂ ತಿಳಿದಿಲ್ಲ. ಬಿಸಿಸಿಐ ಮತ್ತು ಆಟಗಾರರ ನಡುವೆ ಆಂತರಿಕವಾಗಿ ಏನೇ ಮಾತುಕತೆ ನಡೆದರೂ ಅವು ಬೆಳಕಿಗೆ ಬರುವುದಿಲ್ಲ. ಕೊಹ್ಲಿಯವರ ಕೊನೆ ಕ್ಷಣದ ನಿರ್ಧಾರವನ್ನು ಗಮನಿಸಿದರೆ ರಣಜಿ ಟ್ರೋಫಿ ಆಡಿರುವುದರಿಂದ ಅವರು ಮುಂಬರುವ ಟೆಸ್ಟ್‌ಗಳಿಗೆ ತಂಡಕ್ಕೆ ಮರಳುವ ಬಯಕ್ಕೆ ಇತ್ತು ಎಂದು ಭಾವಿಸುತ್ತೇನೆ. ಕಳೆದ ವಾರದ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಬಿಸಿಸಿಐ ಮತ್ತು ಆಯ್ಕೆ ಸಮಿತಿಯಿಂದ ಈ ಕುರಿತು ಬೆಂಬಲ ಸಿಗುತ್ತದೆ ಎಂದು ಭಾವಿಸಿರುವ ಹಾಗೆ ಕಾಣುತ್ತದೆ. ಆದರೆ ಅವರ ನಿರೀಕ್ಷೆಯಂತೆ ಬೆಂಬಲ ದೊರಕದೆ ಇರಬಹುದು," ಎಂದು ಕೈಫ್‌ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ನೀಡಿಲ್ಲ: ಮೈಕಲ್‌ ವಾನ್‌!

"2024-25ರ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅವರಲ್ಲಿ ರನ್‌ ಗಳಿಸುವ ಹಸಿವು ಕಂಡು ಬಂದಿತ್ತು. ನೀವು ಗಂಟೆಗಟ್ಟಲೆ ಹೊರಗೆ ಇದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಬೇಕಾಗುತ್ತದೆ, ಅವರು ಹಿಂದೆಯೂ ಹಾಗೆ ಮಾಡಿದ್ದಾರೆ. ಆದರೆ, ಅವರು ಚೆಂಡನ್ನು ಸತತವಾಗಿ ಎಡ್ಜ್‌ ಮಾಡುತ್ತಿರುವುದನ್ನು ನೋಡಿದರೆ, ಅವರು ಸ್ವಲ್ಪ ತಾಳ್ಮೆಯನ್ನು ಕಳೆದುಕೊಂಡಿದ್ದಾರೆಂದು ಕಾಣಿಸುತ್ತಿದೆ," ಎಂದಿದ್ದಾರೆ.

"ಬಹುಶಃ ಅವರು ಟೆಸ್ಟ್‌ ಕ್ರಿಕೆಟ್‌ನ ವೃತ್ತಿ ಜೀವನದ ಕೊನೆ ಹಂತದಲ್ಲಿರಬಹುದು. ಭರ್ಜರಿ ಶತಕ ಗಳಿಸಿ ಅರ್ಥವೇನು ಎಂದುಕೊಂಡಿರಬಹುದು. ಆದರೆ ಅವರು ಮೊದಲೆಲ್ಲಾ ಹೀಗಿರಲಿಲ್ಲ ಮೈದಾನದಲ್ಲಿ ತುಂಬಾ ತಾಳ್ಮೆಯಿಂದ ನಿಧಾನಗತಿಯಲ್ಲಿ ಆಟ ಆಡುವುದನ್ನು ನೋಡುತ್ತಿದ್ದೆವು. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇದನ್ನು ನೋಡಲು ನಮಗೆ ಸಿಗಲಿಲ್ಲ. ಅವರು ಆ ಪಂದ್ಯದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ಕೊಟ್ಟು ಔಟ್‌ ಆಗಿದ್ದನ್ನು ಗಮನಿಸಿದರೆ ಅವರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಆಡುವ ತಾಳ್ಮೆಯಲ್ಲಿರಲಿಲ್ಲವೆಂದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತು ಕೊಹ್ಲಿಯವರ ನಡುವೆ ಮಾತುಕತೆ ಆಗಿ ಕೊಹ್ಲಿಯವರ ನಿವೃತ್ತಿಗೆ ಮುಖ್ಯ ಕಾರಣವಾಗಿರಬಹುದು," ಎಂದು ಮೊಹಮ್ಮದ್‌ ಕೈಫ್‌ ವಿವರಿಸಿದ್ದಾರೆ.