Viral Video: ಸ್ಕೈಡೈವಿಂಗ್ ಮಾಡಿದ ಸಿಂಹ; ವಿಡಿಯೊ ನೋಡಿ ಶಾಕ್ ಆದ ನೆಟ್ಟಿಗರು ಹೇಳಿದ್ದೇನು?
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊವೊಂದರಲ್ಲಿ ಸಿಂಹವೊಂದು ವ್ಯಕ್ತಿಯೊಬ್ಬನ ಜತೆ ಸ್ಕೈಡೈವಿಂಗ್ ಮಾಡಿದೆ. ಸಿಂಹ ಸ್ಕೈಡೈವಿಂಗ್ ಮಾಡುವುದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಸ್ಕೈಡೈವಿಂಗ್ ಎಂದರೆ ಕೆಲವರಿಗೆ ತುಂಬಾ ಇಷ್ಟ. ಆಕಾಶದೆತ್ತರಕ್ಕೆ ಹಕ್ಕಿಯಂತೆ ಹಾರಬೇಕು ಎಂದು ಬಯಸುವವರು ಸ್ಕೈಡೈವಿಂಗ್ ಮಾಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಂಹವೊಂದು ಸ್ಕೈಡೈವಿಂಗ್ ಮಾಡಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಸಿಂಹವೊಂದು ಸ್ಕೈಡೈವಿಂಗ್ ಮಾಡುತ್ತಿರುವುದು ಸೆರೆಯಾಗಿದೆ. ಅದು ಅಲ್ಲದೇ ಆ ಸಿಂಹ ವ್ಯಕ್ತಿಯೊಬ್ಬನ ಜತೆ ಸಾವಿರ ಅಡಿ ಎತ್ತರದಲ್ಲಿ ಸ್ಕೈಡೈವಿಂಗ್ ಮಾಡುವುದನ್ನು ಕಂಡು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.
ಶಿಲ್ಲಾಂಗ್ ಮೂಲದ @travelling.shillong ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸಿಂಹವು ಸ್ಕೈಡೈವಿಂಗ್ ಮಾಡಿದ ನಿಖರವಾದ ಸ್ಥಳ ತಿಳಿದುಬಂದಿಲ್ಲ. ನಿಜವಾಗಿಯೂ ಸಿಂಹ ಸ್ಕೈಡೈವಿಂಗ್ ಮಾಡಿದೆಯಾ? ಅಥವಾ AI ಬಳಸಿಕೊಂಡು ಎಡಿಟ್ ಮಾಡಿದ್ದೋ? ಎಂದು ಹಲವರು ಕೇಳಿದ್ದಾರೆ.
ಆಕಾಶದಲ್ಲಿ ಹಾರುತ್ತಿರುವ ಸಿಂಹದ ವಿಡಿಯೊ ಇಲ್ಲಿದೆ ನೋಡಿ...
ವಿಶೇಷವೆಂದರೆ ಇದೇ ಸೋಶಿಯಲ್ ಮೀಡಿಯಾ ಪುಟದಲ್ಲಿ ಈ ಹಿಂದೆ ಹುಲಿಗಳು ಮತ್ತು ಬೆಕ್ಕುಗಳಂತಹ ಪ್ರಾಣಿಗಳು ಸ್ಕೈಡೈವ್ ಮಾಡುವಂತಹ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ಹಾಗಾಗಿ ಇದು ಡಿಜಿಟಲ್ ಆಗಿ ಬದಲಾದ ಮತ್ತೊಂದು ವಿಡಿಯೊ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಾಗಿ ಇದು 34 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಅನೇಕರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. “ಇದು ನಿಜ, AI ಅಲ್ಲ. ಅದು ಸಿಂಹ" ಎಂದು ಒಬ್ಬ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. "ಸಿಂಹವು ಎಷ್ಟು ಶಾಂತವಾಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು ತಮಾಷೆಯಾಗಿ, "ಬ್ರೋ, ಒಮ್ಮೆ ಆನೆಯನ್ನು ಪ್ರಯತ್ನಿಸಿ ನೋಡಿ" ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಭಾರತದ ಕ್ವಿಕ್ ಡೆಲಿವರಿ ಸರ್ವಿಸ್ ನೋಡಿ ವಿದೇಶಿ ಮಹಿಳೆ ಹೇಳಿದ್ದೇನು? ವಿಡಿಯೊ ವೈರಲ್!
ಈ ಹಿಂದೆ ಮೆಕ್ಸಿಕೋದ ಜಕಾಟೆಕಾಸ್‌ನಲ್ಲಿ ನಡೆದ ಮೊದಲ ಬಲೂನ್ ಉತ್ಸವದ ಸಮಯದಲ್ಲಿ ಬಿಸಿ ಗಾಳಿಯ ಬಲೂನ್‌ಗೆ ಬೆಂಕಿ ಹೊತ್ತಿಕೊಂಡ ಭಯಾನಕ ಘಟನೆ ನಡೆದಿತ್ತು. ನಂತರ 40 ವರ್ಷದ ಲೂಸಿಯೊ ಎನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಭಯಾನಕ ಕ್ಷಣದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಾಗೇ ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.