India-Pak Tensions: ಭಾರತದ ದಾಳಿಗೆ ಪಾಕ್ ವಾಯುನೆಲೆಯ ಶೇ.20ರಷ್ಟು ಆಸ್ತಿ-ಪಾಸ್ತಿ ಉಡೀಸ್
Pakistan Airbases Destroyed: ಪಾಕಿಸ್ತಾನದ ಸರ್ಗೋಧಾ ಮತ್ತು ಭೋಲಾರಿಯಂತಹ ವಾಯುನೆಲೆ ಮತ್ತು ಶಸ್ತ್ರಾಸ್ತ್ರ ಗೋದಾಮುಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗೆ ಸೇರಿದ ಶೇ.20ರಷ್ಟು ಆಸ್ತಿ ನಾಶವಾಗಿದೆ. ಅಲ್ಲಿ ಎಫ್ -16 ಮತ್ತು ಜೆಎಫ್ -17 ಯುದ್ಧವಿಮಾನಗಳೂ ಇದ್ದವು ಎಂಬ ಮಾಹಿತಿ ಹೊರಬಿದ್ದಿದೆ.


ನವದೆಹಲಿ: ಮೇ 10 ರಂದು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಶೇಕಡಾ 20 ರಷ್ಟುಆಸ್ತಿ-ಪಾಸ್ತಿ ಸಂಪೂರ್ಣವಾಗಿ ನಾಶವಾಗಿದೆ(India-Pak Tensions) ಹಾಗೂ ಸ್ಕ್ವಾಡ್ರನ್ ಲೀಡರ್ ಸೇರಿದಂತೆ 50 ಕ್ಕೂ ಹೆಚ್ಚು ವ್ಯಕ್ತಿಗಳು ಸಾವನ್ನಪ್ಪಿದ್ದರು ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಸರ್ಗೋಧಾ ಮತ್ತು ಭೋಲಾರಿಯಂತಹ ವಾಯುನೆಲೆ ಮತ್ತು ಶಸ್ತ್ರಾಸ್ತ್ರ ಗೋದಾಮುಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಅಲ್ಲಿ ಎಫ್ -16 ಮತ್ತು ಜೆಎಫ್ -17 ಯುದ್ಧವಿಮಾನಗಳೂ ಇದ್ದವು. ದಾಳಿಯ ಪರಿಣಾಮವಾಗಿ ಪಾಕಿಸ್ತಾನದ ವಾಯುಪಡೆಯ ಶೇ.20ರಷ್ಟು ಆಸ್ತಿ ನಾಶವಾಗಿದೆ. ಭೋಲಾರಿ ವಾಯುನೆಲೆಯ ಬಾಂಬ್ ದಾಳಿಯಲ್ಲಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಮತ್ತು ನಾಲ್ವರು ವಾಯುನೆಲೆ ಸಿಬ್ಬಂದಿ ಸೇರಿದಂತೆ 50 ಕ್ಕೂ ಹೆಚ್ಚು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಮೇ 9-10 ರಂದು ಪಾಕಿಸ್ತಾನದ 11 ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು. ಈ ವೇಳೆ ಪಾಕಿಸ್ತಾನದ ಹಲವಾರು ಯುದ್ಧವಿಮಾನಗಳು ಸಹ ನಾಶವಾಗಿವೆ. ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಪ್ರಧಾನ ಕಚೇರಿಗಳ ಮೇಲೆ ನಡೆದ ದಾಳಿಯ ಸಮಯದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದರು. ಇದಾದ ಬಳಿಕ ನಿರಂತರ ದಾಳಿ-ಪ್ರತಿದಾಳಿ ನಡೆದಿದ್ದವು. ಇದಾದ ನಂತರ ಉಭಯ ರಾಷ್ಟ್ರಗಳು ಕದನ ವಿರಾಮ ಘೋಷಿಸಿದ್ದವು. ಆದರೆ ಕುತಂತ್ರಿ ಪಾಕ್ ಅದನ್ನು ಉಲ್ಲಂಘಿಸಿ ಕೆಲವೇ ಕೆಲವು ಗಂಟೆಗಳಲ್ಲಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಮೇ 10 ರಂದು ಪಾಕ್ ಮೇಲೆ ದಾಳಿ ನಡೆಸಿದ ಭಾರತ ಕೇವಲ ಮೂರು ಗಂಟೆಗಳಲ್ಲಿ,ನೂರ್ ಖಾನ್, ರಫೀಕಿ, ಮುರಿಯ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕಾರ್ಡು, ಭೋಲಾರಿ ಮತ್ತು ಜಕೋಬಾದ್ ಸೇರಿದಂತೆ 11 ಮಿಲಿಟರಿ ನೆಲೆಗಳನ್ನು ಪುಡಿಗಟ್ಟಿತ್ತು. ಇದಾದ ಬಳಿಕ ಪಾಕ್ ತನ್ನ ದಾಳಿಯನ್ನು ನಿಲ್ಲಿಸಿತ್ತು.
ಈ ಸುದ್ದಿಯನ್ನೂ ಓದಿ: BrahMos missile: ಆಪರೇಷನ್ ಸಿಂದೂರ್‌ನಲ್ಲಿ ಪರಾಕ್ರಮ ಮೆರೆದಿದ್ದ ಬ್ರಹ್ಮೋಸ್ ಖರೀದಿಗೆ ಕ್ಯೂನಲ್ಲಿವೆ ಘಟಾನುಘಟಿ ದೇಶಗಳು!
ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಹೃದಯಭಾಗವನ್ನೇ ಗುರಿಯಾಗಿಸಿ ಭಾರತದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದವು. ಪಾಕಿಸ್ತಾನಿ ವಾಯುಪಡೆಯ ಆ ವಾಯುನೆಲೆಗಗಳು ಧ್ವಂಸಗೊಂಡಿವೆ. ಭಾರತವು ಮೊದಲ ಮೂರು ದಿನಗಳಲ್ಲಿಯೇ ಪಾಕಿಸ್ತಾನಕ್ಕೆ ಭಾರೀ ಹಾನಿಯನ್ನುಂಟುಮಾಡಿತು. ಒಟ್ಟಿನಲ್ಲಿ ಊಹಿಸಲಾರದಂತಹ ತಿರುಗೇಟನ್ನು ಪಾಕಿಸ್ತಾನಕ್ಕೆ ಭಾರತ ಕೊಟ್ಟಿದೆ ಎಂದು ತಿಳಿಸಿದ್ದಾರೆ.