ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೃಂದಾವನಕ್ಕೆ ಭೇಟಿಕೊಟ್ಟ ವಿರುಷ್ಕಾ ದಂಪತಿ, ಕೊಹ್ಲಿಗೆ ಪ್ರೇಮಾನಂದ ಮಹಾರಾಜ್ ನೀಡಿದ ಉಪದೇಶ ಇಲ್ಲಿದೆ!

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಬೃಂದಾವನಕ್ಕೆ ತೆರಳಿದ್ದರು. ಅವರು ಪ್ರೇಮಾನಂದ ಜಿ ಮಹಾರಾಜ್ ಅವರೊಂದಿಗೆ ಆಧ್ಯಾತ್ಮಿಕ ಸಂಭಾಷಣೆ ನಡೆಸಿ ಅವರ ಆಶೀರ್ವಾದ ಪಡೆದರು. ಈ ವರ್ಷ ವೃಂದಾವನಕ್ಕೆ ಅವರ ಎರಡನೇ ಭೇಟಿ ಇದು.

ವಿರುಷ್ಕಾ ದಂಪತಿಗೆ ಪ್ರೇಮಾನಂದ ಮಹಾರಾಜರು ನೀಡಿದ ಉಪದೇಶ ಇಲ್ಲಿದೆ!

ಬೃಂದಾವನಕ್ಕೆ ಭೇಟಿ ಕೊಟ್ಟ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ.

Profile Ramesh Kote May 13, 2025 8:16 PM

ನವದೆಹಲಿ: ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಒಂದು ದಿನದ ಬೆನ್ನಲ್ಲೆ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ(Virat Kohli) ಮೇ 13 ರಂದು ಮಂಗಳವಾರ ಬೃಂದಾವನಕ್ಕೆ ಭೇಟಿ ನೀಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಬೃಂದಾವನದಲ್ಲಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾದರು. ಈ ವೇಳೆ ಮಹಾರಾಜರೊಂದಿಗೆ ಕೊಹ್ಲಿ ಆಧ್ಯಾತ್ಮಿಕ ಸಂಭಾಷಣೆ ನಡೆಸಿ ಅವರ ಆಶೀರ್ವಾದ ಪಡೆದರು. ಪ್ರಸಕ್ತ ವರ್ಷ ವಿರಾಟ್ ಕೊಹ್ಲಿ ಎರಡನೇ ಬಾರಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿ ತಿಂಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದರು.

ಆಶ್ರಮವನ್ನು ತಲುಪಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಾನಂದ ಜಿ ಮಹಾರಾಜ್ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ ಮಹಾರಾಜರು, ʻನೀವು ಸಂತೋಷವಾಗಿದ್ದೀರಾ?ʼ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, 'ಹೌದು, ಈಗ ಎಲ್ಲವೂ ಚೆನ್ನಾಗಿದೆʼ ಎಂದು ಹೇಳಿದರು. ಮಹಾರಾಜ್ ಜೀ ಕೂಡ ಎಲ್ಲವೂ ಸರಿಯಾಗಬೇಕೆಂದು ಹೇಳಿದರು. ಈ ಸಮಯದಲ್ಲಿ, ಪ್ರೇಮಾನಂದ ಜಿ ಮಹಾರಾಜ್ ಅವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಧರ್ಮೋಪದೇಶ ನೀಡಿದರು. ಮಹಾರಾಜ್ ಜಿ ಅವರ ಮಾತುಗಳನ್ನು ಕೇಳಿದ ನಂತರ ಅನುಷ್ಕಾ ಶರ್ಮಾ ಕೂಡ ಭಾವುಕರಾದರು.

IND vs ENG: ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

ಮಹಾರಾಜ್ ಅವರ ಮಾತುಗಳಲ್ಲಿ ಮಳುಗಿದ ಕೊಹ್ಲಿ

ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾದಾಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಾತುಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಮಹಾರಾಜರು ವಿರಾಟ್ ಮತ್ತು ಅನುಷ್ಕಾಗೆ, "ನಾವು ಪಡೆದಿರುವ ಈ ಸಂಪತ್ತು ಕೇವಲ ದೇವರ ಕೃಪೆಯಿಂದಲ್ಲ. ಇದು ನಿಮ್ಮ ಒಳ್ಳೆಯ ಕಾರ್ಯಗಳ ಫಲಿತಾಂಶ. ನಿಜವಾದ ವಿಷಯವೆಂದರೆ ನಿಮ್ಮ ಆಂತರಿಕ ಆಲೋಚನೆಗಳು ಬದಲಾಗಬೇಕು. ನೀವು ಈಗಿರುವ ರೀತಿಯಲ್ಲೇ ಬದುಕಬೇಕು, ಆದರೆ ನಿಮ್ಮ ಹೃದಯದಲ್ಲಿ ದೇವರ ಮೇಲೆ ಪ್ರೀತಿ ಇರಬೇಕು. ನೀವು ಅನೇಕ ಜನ್ಮಗಳನ್ನು ತೆಗೆದುಕೊಂಡಿದ್ದೀರಿ ಎಂದು ನೀವು ಭಾವಿಸಬೇಕು. ಈಗ ನಿಮಗೆ ದೇವರು ಮಾತ್ರ ಬೇಕು," ಎಂದು ಹೇಳಿದರು. ಮಹಾರಾಜ್ ಅವರ ಈ ಮಾತುಗಳನ್ನು ಕೇಳಿದ ನಂತರ, ಅನುಷ್ಕಾ ಶರ್ಮಾ ಸ್ವಲ್ಪ ಸಮಯದವರೆಗೆ ಭಾವುಕರಾದರು.



ವಿರಾಟ್‌ ಕೊಹ್ಲಿಯ ಟೆಸ್ಟ್‌ ಅಂಕಿಅಂಶ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿದಂತೆ 9230 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ ಆಡಿದ 68 ಟೆಸ್ಟ್‌ ಪಂದ್ಯಗಳಲ್ಲಿ 40 ರಲ್ಲಿ ಗೆಲುವು ಪಡೆದಿದೆ.