ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S\O Muthanna Movie: ʼS/O ಮುತ್ತಣ್ಣʼ ಚಿತ್ರಕ್ಕಾಗಿ ʼಕಮ್ಮಂಗಿ ನನ್ ಮಗನೇʼ ಹಾಡು ಹಾಡಿದ ನಟ ಶರಣ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ

S\O Muthanna Movie: ಪ್ರಣಂ ದೇವರಾಜ್ ಅಭಿನಯದ ಬಹು ನಿರೀಕ್ಷಿತ ʼS/O ಮುತ್ತಣ್ಣʼ ಚಿತ್ರಕ್ಕಾಗಿ ʼಕಮ್ಮಂಗಿ ನನ್ ಮಗನೇʼ ಎಂಬ ಹಾಡನ್ನು ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ʼS/O ಮುತ್ತಣ್ಣʼ ಚಿತ್ರಕ್ಕಾಗಿ ಹಾಡು ಹಾಡಿದ ನಟ ಶರಣ್, ವಿ.ಹರಿಕೃಷ್ಣ

Profile Siddalinga Swamy May 13, 2025 9:47 PM

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್, ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS\O ಮುತ್ತಣ್ಣʼ ಚಿತ್ರಕ್ಕಾಗಿ (S\O Muthanna Movie) ಮತ್ತೊಂದು ಅದ್ಭುತ ಗೀತೆ ಬರೆದಿದ್ದಾರೆ. ʼಕಮ್ಮಂಗಿ ನನ್ ಮಗನೇʼ ಎಂಬ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದು, ತಮ್ಮ ವಿಶಿಷ್ಟ ಕಂಠದಿಂದ ಜನಪ್ರಿಯರಾಗಿರುವ ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ನಾದಗಾರುಡಿಗ ವಿ. ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಜನಪ್ರಿಯ ಗಾಯಕ ಸಂಚಿತ್ ಹೆಗ್ಡೆ ಕೂಡ ʼS\O ಮುತ್ತಣ್ಣʼ ಚಿತ್ರದ ಹಾಡು ಹಾಡಿದ್ದು, ಹೆಸರಾಂತ ಗಾಯಕಿ ದೀಪ್ತಿ ಸುರೇಶ್ ಇದೇ ಮೊದಲ ಬಾರಿಗೆ ಈ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪ್ರಸ್ತುತ ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು ಸಹ ʼಕಮ್ಮಂಗಿ ನನ್ ಮಗನೇʼ ಹಾಡನ್ನು ಹಾಡಿದ್ದಾರೆ. ಪ್ರಸಿದ್ಧ ಗಾಯಕ - ಗಾಯಕಿಯರ ಕಂಠಸಿರಿಯಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಲಿದೆ ಎಂಬ ಭರವಸೆ ಚಿತ್ರತಂಡದ್ದು. ಚಿತ್ರದ ಮೊದಲ ಗೀತೆಯಾಗಿ ʼಕಮ್ಮಂಗಿ ನನ್ ಮಗನೇʼ ಹಾಡು ಮೇ 17 ರಂದು ಬಿಡುಗಡೆಯಾಗಲಿದೆ.

ತಂದೆ - ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್ ವಿತರಣೆ ಮಾಡಲಿದ್ದಾರೆ. ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್‌ಅರ್‌ಕೆ ಫಿಲಂಸ್ ಸಾಥ್ ನೀಡಿದೆ‌. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ ʼದಿಯಾʼ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | S\O Muthanna Movie: ಪ್ರಣಂ ದೇವರಾಜ್ ನಟನೆಯ ʼS\O ಮುತ್ತಣ್ಣʼ ಚಿತ್ರದ ಹಾಡಿಗೆ ಗಾಯಕ ಸಂಚಿತ್ ಹೆಗ್ಡೆ ಧ್ವನಿ

ಸಚಿನ್ ಬಸ್ರೂರು ಸಂಗೀತವಿರುವ ' ʼS\O ಮುತ್ತಣ್ಣʼ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಈ ಚಿತ್ರಕ್ಕಿದೆ.