ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಧಿಕ ರಕ್ತದೊತ್ತಡವು ಗಂಭೀರವಾದ ವೈದ್ಯಕೀಯ ಸ್ಥಿತಿಯಾಗಿದ್ದು, ಹೃದಯ, ಮೆದುಳು ನಿಷ್ಕ್ರಿಯಗೊಳ್ಳಬಹುದು

ಅತಿಯಾದ ಉಪ್ಪು ಸೇವನೆ, ಹಣ್ಣುಗಳು ಮತ್ತು ತರಕಾರಿಗಳ ಕಡಿಮೆ ಸೇವನೆ, ದೈಹಿಕ ಅಭ್ಯಾಸದ ಕೊರತೆ, ತಂಬಾಕು ಮತ್ತು ಮದ್ಯ ಸೇವನೆ, ಅಧಿಕ ತೂಕ ಅಥವಾ ಬೊಜ್ಜುತನ, ಕರೀದಾ ಪದಾರ್ಥ ಮತ್ತು ಬೇಕರಿ ಪದಾರ್ಥಗಳ ಅಧಿಕ ಸೇವನೆ, ವಾಯು ಮಾಲಿನ್ಯದಿಂದ ಸಹ ಅಧಿಕ ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುವ ಅಂಶಗಳಾಗಿವೆ.

ಅಧಿಕ ರಕ್ತದೊತ್ತಡವು ಗಂಭೀರವಾದ ವೈದ್ಯಕೀಯ ಸ್ಥಿತಿ

ನಗರದ ಜಿಲ್ಲಾಸ್ಪತ್ರೆಯಲ್ಲಿ  ಎರ್ಪಡಿಸಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಪ್ರಯುಕ್ತ  ಆರೋಗ್ಯ ಶಿಭಿರದಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣೆಗೆ ಒಳಗಾದರು

Profile Ashok Nayak May 19, 2025 12:07 AM

ಚಿಕ್ಕಬಳ್ಳಾಪುರ: ಅಧಿಕ ರಕ್ತದೊತ್ತಡವು ಗಂಭೀರವಾದ ವೈದ್ಯಕೀಯ ಸ್ಥಿತಿಯಾಗಿದ್ದು, ಹೃದಯ, ಮೆದುಳು, ಮೂತ್ರಪಿಂಡ ಮತ್ತು ಇತರೆ ಕಾಯಿಲೆಗಳ ಅಪಾಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದರು. ನಗರದ ಜಿಲ್ಲಾ ಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಎನ್.ಸಿ.ಡಿ.ಘಟಕಗಳ ವತಿಯಿಂದ  ಶನಿವಾರ ಎರ್ಪಡಿಸಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಪ್ರಯುಕ್ತ ಆರೋಗ್ಯ ಶಿಬಿರ ಉಧ್ಘಾಟಿಸಿ ಮಾತನಾಡಿದರು, 

ಜಿಲ್ಲಾದ್ಯಂತ ಇಂದು ವಿಶ್ವ ರಕ್ತದೊತ್ತಡ ದಿನವನ್ನು ಎಲ್ಲಾ ಆರೋಗ್ಯ ಕೇಂದ್ರಗಲ್ಲಿ ಆಚರಿಸಲಾ ಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 65,499 ರಕ್ತದೊತ್ತಡ ಪ್ರಕರಣಗಳು ಕಂಡು ಬಂದಿ ದ್ದು, ರಕ್ತದೊತ್ತಡವು ವಿಶ್ವಾದ್ಯಂತ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಅತಿಯಾದ ಉಪ್ಪು ಸೇವನೆ, ಹಣ್ಣುಗಳು ಮತ್ತು ತರಕಾರಿಗಳ ಕಡಿಮೆ ಸೇವನೆ, ದೈಹಿಕ ಅಭ್ಯಾಸದ ಕೊರತೆ, ತಂಬಾಕು ಮತ್ತು ಮದ್ಯ ಸೇವನೆ, ಅಧಿಕ ತೂಕ ಅಥವಾ ಬೊಜ್ಜುತನ, ಕರೀದಾ ಪದಾರ್ಥ ಮತ್ತು ಬೇಕರಿ ಪದಾರ್ಥಗಳ ಅಧಿಕ ಸೇವನೆ, ವಾಯು ಮಾಲಿನ್ಯದಿಂದ ಸಹ ಅಧಿಕ ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುವ ಅಂಶಗಳಾಗಿವೆ. ಮುಂಜಾನೆ ತಲೆನೋವು, ಮೂಗಿನಿಂದ ರಕ್ತಸ್ರಾವ, ಅನಿಯಮಿತ ಹೃದಯ ಬಡಿತ, ದೃಷ್ಠಿ ಬದಲಾವಣೆ ಮತ್ತು ಕಿವಿಗಳಲ್ಲಿ ಝೇಂಕರಿಸುವ ಶಬ್ದ, ಹೆಚ್ಚು ತೀವ್ರವಾದ ರೂಪಗಳಲ್ಲಿ ಆಯಾಸ, ವಾಕರಿಕೆ, ಗೊಂದಲ, ಆತಂಕ, ಎದೆನೋವು ಮತ್ತು ಸ್ನಾಯು ನಡುಕಗಳು ಉಂಟಾಗುವುದು ಅಧಿಕ ರಕ್ತದೊತ್ತಡದ ಲಕ್ಷಣಗಳಾಗಿವೆ ಎಂದು ತಿಳಿಸಿದರು.

ಇದನ್ನೂ ಓದಿ: Chip-Based E-Passports: ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ ಪರಿಚಯಿಸಿದ ಭಾರತ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಅಧಿಕ ರಕ್ತದೋತ್ತಡದ ತೊಂದರೆಗಳು: ಮೆದುಳು ಹಾನಿ (ಸ್ಟ್ರೋಕ್/ಪಾರ್ಶ್ವವಾಯು), ಹೃದಯಾ ಘಾತ/ಹೃದಯದ ವೈಫಲ್ಯ, ಮೂತ್ರಪಿಂಡಗಳ ವಿಫಲತೆ, ಕಣ್ಣಿನ ತೊಂದರೆಗಳು ಇತ್ಯಾದಿ. 

ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ ನಾಗರಿಕರಿಗೆ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತವಾಗಿ ರಕ್ತದೊತ್ತಡ ಪರೀಕ್ಷೆಯನ್ನು ಹಾಗೂ ಔಷಧಿಗಳನ್ನು ನೀಡಿಲಾಗುತ್ತಿದೆ ಎಂದರು. 

ಜಿಲ್ಲೆಯ ಎಲ್ಲಾ 30 ವರ್ಷ ಮೇಲ್ಪಟ್ಟ ನಾಗರಿಕರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತದೊತ್ತಡ ಪರೀಕ್ಷೆಯನ್ನು ಪರೀಕ್ಷಿಸಿಕೊಳ್ಳುವುದು ಹಾಗೂ ಈಗಾಗಲೇ ರಕ್ತದೊತ್ತಡದಿಂದ ಬಳಲುತ್ತಿರುವವರು ಎರಡು ತಿಂಗಳಿಗೊಮ್ಮೆ ರಕ್ತದೊತ್ತಡ ಪರೀಕ್ಷಿಸಿಕೊಂಡು ಉಚಿತವಾಗಿ ಔಷಧಿಗಳನ್ನು ಪಡೆದುಕೊಳ್ಳುವಂತೆ  ಸಾರ್ವಜನಿಕರಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಪ್ರಸಾದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿ ಕಾರಿ ಡಾ. ಪ್ರಕಾಶ್, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್, ನಂದಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ,ರಮೇಶ್, ಡಾ.ರವೀಂದ್ರ, ಜಿಲ್ಲಾಸ್ಪತ್ರೆ ಮತ್ತುನಂದಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವೈದ್ಯರು, ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.